Voter List ತಯಾರಿಕೆಯಲ್ಲಿ ಚುನಾವಣಾ ಆಯೋಗ ನಿರ್ಲಕ್ಷ್ಯ ತೋರಿದೆ: ಪಿ.ಎಚ್.ನೀರಲಕೇರಿ
ಮತದಾರರ ಪಟ್ಟಿ ತಯಾರಿಕೆಯಲ್ಲಿ ಚುನಾವಣಾ ಆಯೋಗ ನಿರ್ಲಕ್ಷ್ಯ ತೋರಿದೆ. ಇದರ ಪರಿಣಾಮ ಸಾವಿರಾರು ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಕೈ ಬಿಟ್ಟು ಹೋಗಿವೆ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಕೂಡಲೇ ಪರಿಶೀಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ.
ಧಾರವಾಡ (ಮಾ.31): ಮತದಾರರ ಪಟ್ಟಿ ತಯಾರಿಕೆಯಲ್ಲಿ (Voter List) ಚುನಾವಣಾ ಆಯೋಗ (Election Commission) ನಿರ್ಲಕ್ಷ್ಯ ತೋರಿದೆ. ಇದರ ಪರಿಣಾಮ ಸಾವಿರಾರು ಅರ್ಹ ಮತದಾರರ ಹೆಸರುಗಳು ಮತ ಪಟ್ಟಿಯಿಂದ ಕೈ ಬಿಟ್ಟು ಹೋಗಿವೆ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಕೂಡಲೇ ಪರಿಶೀಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ (PH Neeralakeri) ಆಗ್ರಹಿಸಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪಶ್ಚಿಮ ಮತಕ್ಷೇತ್ರದ ವಿವಿಧ ಪ್ರದೇಶಗಳಿಗೆ ಸಮೀಕ್ಷೆ ನಡೆಸಿದ್ದು ಸಾಕಷ್ಟು ಕುಟುಂಬಗಳಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿ ಇದೆ.
ಆದರೆ, ಮತಪಟ್ಟಿಯಲ್ಲಿ ಹೆಸರುಗಳಿಲ್ಲ. ಅಲ್ಲದೇ, ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಾಗಿ ಮಹಾನಗರ ಪಾಲಿಕೆಯಲ್ಲಿರುವ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳೇ ಇರೋದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಹ ಮತದಾರರು ಕೈ ಬಿಟ್ಟು ಹೋಗುವ ಸಾರ್ಧಯತೆ ಇದೆ. ಇದು ಉದ್ದೇಶಪೂರ್ವಕವೂ ಇರಬಹುದು ಎಂದು ಆರೋಪಿಸಿದ ಅವರು, ಯಾವ ಪ್ರದೇಶದಲ್ಲಿ ಎಷ್ಟು ಮತದಾರರ ಹೆಸರುಗಳು ಕೈ ಬಿಟ್ಟಿವೆ ಎಂಬುದರ ಪಟ್ಟಿ ನೀಡಿದರು. ಕೆಲಗೇರಿ ಆಂಜನೇಯನಗರದಲ್ಲಿ 400, ಜನ್ನತನಗರದಲ್ಲಿ 3000, ಲಕ್ಷ್ಮಿ ಸಿಂಗನಕೇರಿಯಲ್ಲಿ 2165, ಮಣಕಿಲ್ಲಾದಲ್ಲಿ 1070, ಜೈ ಭೀಮನಗರದಲ್ಲಿ 670, ಶ್ರೀರಾಮನಗರದಲ್ಲಿ 400 ಹೀಗೆ ವಿವಿಧೆಡೆ ಹಲವು ಮತದಾರರ ಹೆಸರು ಕೈ ಬಿಡಲಾಗಿದೆ.
By Election ನಾಲ್ಕು ರಾಜ್ಯಗಳ ಲೋಕಸಭಾ, ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಿಸಿದ ಆಯೋಗ!
ಪಶ್ಚಿಮ ಕ್ಷೇತ್ರದಲ್ಲಿ 3,48,398 ಅರ್ಹ ಮತದಾರರಿದ್ದು ಸದ್ಯ ಮತ ಪಟ್ಟಿಯಲ್ಲಿ 2,67,679 ಮಾತ್ರ ಹೆಸರಗಳಿದ್ದು 80719 ಮತದಾರರ ಹೆಸರು ಎಲ್ಲಿ ಹೋಗಿವೆ ಎಂಬುದೇ ತಿಳಿಯುತ್ತಿಲ್ಲ. ಆಡಳಿತ ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ಬೇಕಾದ ಹೆಸರು ಸೇರ್ಪಡೆ ಹಾಗೂ ಬೇಡವಾದರ ಹೆಸರು ತೆಗೆದು ಹಾಕುತ್ತಿದ್ದಾರೆ ಎಂಬ ಬಲವಾದ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಮಾಡಿದಾಗ ಮತದಾರರನ್ನು ಕೈ ಬಿಟ್ಟ ಸಂಗತಿ ಬಯಲಾಗಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪಕ್ರಿಯೆ. ಮತದಾನದ ಹಕ್ಕು ಈ ರೀತಿ ಕಸಿದುಕೊಳ್ಳುವುದು ಸರಿಯಲ್ಲ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ ಎಂದು ನೀರಲಕೇರಿ ಎಚ್ಚರಿಸಿದರು.
ಕಣ್ಮರೆಯಾಗಿರುವ 19 ಲಕ್ಷ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಪತ್ತೆಗೆ ಎಚ್.ಕೆ. ಆಗ್ರಹ: ನ್ಯಾಯಾಂಗ ವ್ಯವಸ್ಥೆ ಮತ್ತು ಕೇಂದ್ರ ಚುನಾವಣಾ ಆಯೋಗವು ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯವನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡುವವರೆಗೆ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಕಷ್ಟಎಂದಿರುವ ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್, ಕಣ್ಮರೆಯಾಗಿರುವ 19 ಲಕ್ಷ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ಗಳನ್ನು (ಇವಿಎಂ) ಕೇಂದ್ರ ಚುನಾವಣಾ ಆಯೋಗವು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದ ಚುನಾವಣಾ ಆಯುಕ್ತ
ಮಂಗಳವಾರ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವಿಎಂ ತಯಾರಿಸುವ ಬಿಇಎಲ್ ಸಂಸ್ಥೆಯಿಂದ 9,64,270 ಮತ್ತು ಇಸಿಐಎಲ್‌ನಿಂದ 9,29,992 ಇವಿಎಂಗಳು ನಾಪತ್ತೆಯಾಗಿವೆ. ಚುನಾವಣಾ ಆಯೋಗವು ನಾಪತ್ತೆಯಾಗಿರುವ ಇವಿಎಂಗಳನ್ನು ಪತ್ತೆ ಹಚ್ಚುವಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ವಿಧಾನಸಭೆಯು ಈ ನಿಟ್ಟಿನಲ್ಲಿ ನಿರ್ಣಯವೊಂದನ್ನು ಮಾಡಿ ಕೇಂದ್ರಕ್ಕೆ ತಿಳಿಸಬೇಕು. ಸಂಸ್ಥೆಯಿಂದ ನೀಡಿರುವ ಇವಿಎಂ ಎಲ್ಲಿ ಹೋದವು? ಅವುಗಳನ್ನು ಯಾರು ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಬೇಕು. ಈ ಹಿನ್ನೆಲೆಯಲ್ಲಿಯಲ್ಲೇ ದೇಶದಲ್ಲಿಯೇ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು ಎಂದು ಹೇಳಿದರು.