Asianet Suvarna News Asianet Suvarna News

SSLC ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಲು ಶಿಕ್ಷಣ ಇಲಾಖೆ ಮೌಖಿಕ ಆದೇಶ ; ಪೋಷಕರ ಸಂಘಟನೆ ಗರಂ

SSLC ಮಕ್ಕಳಿಗೆ ಪರೀಕ್ಷೆಗೆ ಉತ್ತರ ಪತ್ರಿಕೆ ತರುವಂತೆ ಮೌಖಿಕ ಆದೇಶ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಮಕ್ಕಳಿಂದ ಹಣ ಪಡೆದಿರೋದೇ ಮೊದಲ ತಪ್ಪು. ಪ್ರಶ್ನೆ ಪತ್ರಿಕೆ ಪ್ರಿಂಟಿಂಗ್ ಗೆ 20 ರೂಪಾಯಿ ಸಹ ಖರ್ಚು ಆಗಲ್ಲ ಆದ್ರೇ 50 ರುಪಾಯಿ ಪಡೆದಿದ್ದಾರೆ. ಬಾಕಿ 30ರೂ. ಹಣ ಹೊಡೆದಿದ್ದಾರೆ. ಅಂದಾಜು 9 ಲಕ್ಷ ಮಕ್ಕಳಿದ್ದಾರೆ ಅಂದರೆ ಪ್ರತಿ ವಿದ್ಯಾರ್ಥಿಯಿಂದ ಶುಲ್ಕ ಪಡೆದು ಒಟ್ಟು 4.5 ಕೋಟಿ ಹಣ ಮಕ್ಕಳಿಂದ ವಸೂಲಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Education department is another controversy BN Yoganand outraged at bengaluru rav
Author
First Published Feb 22, 2024, 11:15 AM IST

ಬೆಂಗಳೂರು (ಫೆ.22): ಸರ್ಕಾರ ರಚನೆಯಾದಾಗಿನಿಂದ ಒಂದಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಬಂದಿರುವ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ. ಇತ್ತೀಚೆಗೆ ಪರೀಕ್ಷೆ ಶುಲ್ಕವೆಂದು ಪ್ರತಿ ವಿದ್ಯಾರ್ಥಿಗಳಿಂದ 50ರೂ ಶುಲ್ಕ ವಸೂಲಿ ಮಾಡಿ ಪೋಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಮತ್ತೆ ಹತ್ತನೇ ತರಗತಿ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವಂತೆ ಮೌಖಿಕ ಆದೇಶ ನೀಡಿರುವುದು ಪೋಷಕ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪೋಷಕರ ಸಂಘಟನೆ  ಅಧ್ಯಕ್ಷ ಬಿಎನ್ ಯೋಗಾನಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದು, ಪೂರ್ವಸಿದ್ಧತಾ ಪರೀಕ್ಷೆ ಇದು ಹೊಸದೇನೂ ಅಲ್ಲ, ಬಹಳ ವರ್ಷಗಳಿಂದ ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ ಮೊದಲಿನಿಂದಲೂ ಶಿಕ್ಷಣ ಇಲಾಖೆಯೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ನೀಡುತ್ತಾ ಬಂದಿದೆ. ಹೀಗಿರುವಾಗ ಈ ವರ್ಷ ಪರೀಕ್ಷೆ ಶುಲ್ಕವೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ. ಮಕ್ಕಳಿಂದ ಹಣ ಪಡೆದಿರೋದೇ ತಪ್ಪು. ಪ್ರಶ್ನೆ ಪತ್ರಿಕೆ ಪ್ರಿಂಟಿಂಗ್ ಗೆ 20 ರೂಪಾಯಿ ಸಹ ಖರ್ಚು ಆಗಲ್ಲ ಆದ್ರೇ 50 ರುಪಾಯಿ ಪಡೆದಿದ್ದಾರೆ ಬಾಕಿ 30 ಹಣ ಹೊಡೆದಿದ್ದಾರೆ. ಅಂದಾಜು 9 ಲಕ್ಷ ಮಕ್ಕಳಿದ್ದಾರೆ ಅಂದರೆ ಪ್ರತಿ ವಿದ್ಯಾರ್ಥಿಯಿಂದ ಶುಲ್ಕ ಪಡೆದು ಒಟ್ಟು 4.5 ಕೋಟಿ ಹಣ ಮಕ್ಕಳಿಂದ ವಸೂಲಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

SSLC ಪರೀಕ್ಷಾ ವೆಚ್ಚ ಶುಲ್ಕ ಸಂಗ್ರಹ; ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ವಿರೋಧಿ: ಲೋಕೇಶ್ ತಾಳಿಕಟ್ಟೆ

ಈ ಸರ್ಕಾರ ಪ್ರಶ್ನೆ ಪತ್ರಿಕೆಗೆ ಮಕ್ಕಳಿಂದ ಹಣ ಪಡೆಯುಷ್ಟು ಬಡವಾಗಿದೆಯಾ? ಇದೊಂದು ರೀತಿ ಭೀಕ್ಷುಕರ ಸರ್ಕಾರ ಆಗಿಹೋಗಿದೆ. ಯಾವುದೇ ಕಾರಕ್ಕೂ ಮಕ್ಕಳು ಉತ್ತರ  ಪತ್ರಿಕೆ  ತರೋದಿಲ್ಲ  ಶಿಕ್ಷಣ ಇಲಾಖೆಯೇ ನೀಡಬೇಕು. ನಾನು‌ ಕೆಲವು ಡಿಡಿಪಿಐಗಳ ಹತ್ರ ಮಾತನಾಡಿದ್ದೇನೆ. ಅವರು, ಸರ್ಕಾರ ಪ್ರಶ್ನೆ ಪತ್ರಿಕೆ ಕೊಡಲು ಹೇಳಿದೆ ಕೊಡುತ್ತೇವೆ ಉತ್ತರ ಪತ್ರಿಕೆ ಹೇಳಿದ್ರೆ ಕೊಡ್ತೇವೆ ಎಂದಿದ್ದಾರೆ. ಈ ಗೊಂದಲಕ್ಕೆ ಪರೀಕ್ಷಾ ಮೌಲ್ಯಮಾಪನ ಮಂಡಳಿ ನಿರ್ದೇಶಕರು ಉತ್ತರ ನೀಡಬೇಕು. ಉತ್ತರ ಪತ್ರಿಕೆ ತರಲು ಆದೇಶ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲ ಅನ್ನೋದಾದ್ರೇ ಅಧಿಕಾರಗಳು ಹೇಗೆ ಈ ರೀತಿ ವಾಟ್ಸ್ ಅಪ್ ನಲ್ಲಿ ಸಂದೇಶ ಕಳಿಸಿದ್ದಾರೆ ಅನ್ನೋದಕ್ಕೆ ಉತ್ತರ ಕೊಡಿ. ಒಂದು ವೇಳೆ ಆದೇಶವಾಗಿದ್ರೆ ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಶಿಕ್ಷಣ ಇಲಾಖೆಯಿಂದ ಮತ್ತೊಂದು ಎಡವಟ್ಟು; ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರುವಂತೆ ಮೌಖಿಕ ಆದೇಶ?

ಗ್ರಾಮಾಂತರ ಪ್ರದೇಶದಲ್ಲಿ ಐವತ್ತು ರೂಪಾಯಿ ಕೇಳಿದಾಗ್ಲೇ ಎಷ್ಟು ಗಲಾಟೆಗಳಾಗಿವೆ. ಇದೀಗ ಪರೀಕ್ಷೆಗೆ ಮಕ್ಕಳೇ ಉತ್ತರ ಪತ್ರಿಕೆ ತರಬೇಕು ಅಂದ್ರೆ ಮಕ್ಕಳಿಗೆ ಮಾನಸಿಕವಾಗಿ ಹೊರೆಯಾಗುವುದಿಲ್ವೆ? ಪ್ರಿಂಟಿಂಗ್ ದಂಧೆಯಲ್ಲಿ ಕಮಿಷನ್ ಹೊಡೆಯೋಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ತಕ್ಷಣವೇ ಈ ಗೊಂದಲಕ್ಕೆ ತೆರೆ ಹಾಕ ಬೇಕು. ಏನೇ ಆಗಲಿ ನಮ್ಮ‌ ಮಕ್ಕಳು ಯಾವುದೇ ಪೇಪರ್ ತರೋದಿಲ್ಲ. ಪ್ರತಿ ವರ್ಷದಂತೆ ಈ ವರ್ಷವು ಮಕ್ಕಳಿಗೆ ಶಿಕ್ಷಣ ಇಲಾಖೆಯೆ ಪ್ರಶ್ನೆ ಪತ್ರಿಕೆ ಜೊತೆಗೆ ಉತ್ತರ ಬರೆಯಲು ಆನ್ಸ್ ರ್ ಶೀಟ್ ಗಳನ್ನು ಸಹ ಕೊಡ ಬೇಕು. ಜೊತೆಗೆ ಮಕ್ಕಳಿಂದ ಪಡೆದ 50 ರೂಪಾಯಿ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Follow Us:
Download App:
  • android
  • ios