ED raids Gameskraft seizes Rs 526 crore ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಮೋಸ ಮಾಡಿದ ಆರೋಪದ ಮೇಲೆ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಧಿಕಾರಿಗಳು 526 ಕೋಟಿ ರು. ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ.
- ಆನ್‌ಲೈನ್ ಗೇಮಿಂಗ್ ಹೆಸರಲ್ಲಿ ಭಾರಿ ಮೋಸ
- ಇತ್ತೀಚೆಗೆ ಮೂವರನ್ನು ಬಂಧಿಸಿದ್ದ ತನಿಖಾ ದಳ
ಬೆಂಗಳೂರು (ಮೇ.15): ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಭಾರಿ ಮೋಸ ಮಾಡಿದ್ದ ಕಂಪನಿಯಾದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಕಂಪನಿಯ ಮೂವರನ್ನು ಬಂಧಿಸಿ 3.5 ಕೋಟಿ ರು. ಮೌಲ್ಯದ 2.5 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣ ಮತ್ತು 11 ಲಕ್ಷ ನಗದು ಸೇರಿ 526.49 ಕೋಟಿ ಮೌಲ್ಯದ ಚರಾಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ.
ಆನ್‌ಲೈನ್ ರಮ್ಮಿ ಗೇಮಿಂಗ್ ಸಂಸ್ಥೆಗೆ ದೇಶಾದ್ಯಂತ 3 ಕೋಟಿ ಬಳಕೆದಾರರಿದ್ದಾರೆ. ರಿಯಲ್ ಮನಿ ಗೇಮಿಂಗ್ ನಿಷೇಧವಿರುವ ರಾಜ್ಯಗಳಲ್ಲೂ ಸೇವೆ ನೀಡಿದೆ. ಆದರೆ ಬಾಟ್‌ಗಳ ವಿರುದ್ಧ ಆಡಿ ₹1154 ಕೋಟಿ ಹಣವನ್ನು ಬಳಕೆದಾರರು ಕಳೆದುಕೊಂಡಿದ್ದರು. ಹೀಗಾಗಿ ಇ.ಡಿ. ತನಿಖೆ ನಡೆಸುತ್ತಿದೆ.


