PSI Recruitment Scam: ಇಡಿ ಮುಂದೆ ಹೇಳಿಕೆ ನೀಡುವ ಆದೇಶ ರದ್ದು

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮತಿ ನೀಡಿ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. 

ED can record statement of PSI recruitment scam accused says Karnataka High Court gvd

ಬೆಂಗಳೂರು (ಅ.22): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮತಿ ನೀಡಿ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲದೆ, ಪಿಎಂಎಲ್‌ಎ ಕಾಯ್ದೆಯಡಿ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಲು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ವಿಶೇಷ ನ್ಯಾಯಾಲಯ ಅಥವಾ ಸೆಷನ್ಸ್‌ ನ್ಯಾಯಾಲಯಗಳು ಮಾತ್ರ ಅನುಮತಿ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟನ್ಯಾಯಪೀಠ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸಿತು. 

ಹಾಗೆಯೇ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಗತ್ಯವಿದ್ದರೆ ಆರೋಪಿಗಳ ವಿಚಾರಣೆಗೆ ಅನುಮತಿ ಕೋರಿ ಇ.ಡಿ. ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕೋಟ್ಯಂತರ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಹೇಳಿ ಇ.ಡಿ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ತನಿಖೆಯ ಭಾಗವಾಗಿ ಆರೋಪಿಗಳಾದ ಡಿ. ಹರ್ಷ, ಆರ್‌. ಮಂಜುನಾಥ್‌, ಆರ್‌. ಶರತ್‌ ಕುಮಾರ್‌, ಶಾಂತಕುಮಾರ್‌ ಹಾಗೂ ಎಸ್‌. ಜಾಗೃತ್‌ ಅವರ ಹೇಳಿಕೆ ದಾಖಲಿಸಿಕೊಳ್ಳಲು ಇಡಿ ಅನುಮತಿ ಕೋರಿತ್ತು. ಅದರಂತೆ ಅನುಮತಿ ನೀಡಿ ನಗರದ 1ನೇ ಎಸಿಎಂಎಂ ನ್ಯಾಯಾಲಯ 2022ರ ಸೆ.14ರಂದು ಆದೇಶಿಸಿತ್ತು.

ಕಟಕಟೆಯಲ್ಲಿ ಪ್ರಜ್ವಲ್‌ ರೇವಣ್ಣ ಹರಟೆಗೆ ಹೈಕೋರ್ಟ್‌ ಗರಂ

ಪಿಎಸ್‌ಐ ಅಕ್ರಮ: ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ , ಅಫಜಲ್ಪುರದ ಆರ್‌ ಡಿ ಪಾಟೀಲ್‌ ಈತನ ಬಲಗೈ ಬಂಟ, ಸಮಾಜ ಕಲ್ಯಾಣ ಇಲಾಖೆಯ ಗುಂಡಗುರ್ತಿ ಹಾಸ್ಟೆಲ್‌ ವಾರ್ಡನ್‌ ರಾವುತಪ್ಪ (35) ಕೊನೆಗೂ ಸಿಐಡಿ ಬೋನಿಗೆ ಬಿದದಿದ್ದಾನೆ. ಈತನ ಬಂಧನದೊಂದಿಗೆ ಸದರಿ ಪ್ರಕರಣದಲ್ಲಿ ದುವರೆಗೂ ಬಂಧಿತರಾದವರ ಸಂಖ್ಯಾಬಲ 53 ದಾಟಿದೆ. ಈ ಪೈಕಿ ಸುರೇಶ ಕಾಟೆಗಾಂವ್‌, ಆತನ ವಾಹನ ಆಲಕ ಸದ್ದಾಂ, ಸಹಾಕ ಕಾಳಿದಾಸ್‌, ಕಿಂಗ್‌ಪಿಎನ್‌ ದಿವ್ಯಾ ಹಾಗರಗಿ ಪತಿ ರಾಜೇಶ ಇವರು ಜಮೀನು ಪಡೆದಿದ್ದಾರೆ. ಉಳಿದತೆ ಎಲ್ಲರು ಕಳೆದ ಐದೂವರೆ ತಿಂಗಳಿಂದ ಕಲಬುರಗಿ ಜೈಲಲ್ಲಿದ್ದಾರೆ.

ಕಲಬುರಗಿಯಲ್ಲೇ ಬಂಧನ: ಕಲಬುರಗಿಯಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಕಳೆದ ನಾಲ್ಕೂವರೆ ತಿಂಗಳಿಂದ ಈತನ ಶೋಧದಲ್ಲಿದ್ದರು. ಸಿಐಡಿ ತನಿಖೆ ಚುರುಕಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡಿದ್ದ ಈತ ಇದುವರೆಗೂ ಸಿಕ್ಕಿರಲಿಲ್ಲ. ಸಿಐಡಿ ಹಗರಣದಲ್ಲಿ 3 ಆರೋಪ ಪಟ್ಟಿಸಲ್ಲಿಸಿಯಾಯ್ತು, ಇನ್ನೇನು ಅಪಾಯವಿಲ್ಲವೆಂದು ಈತ ಈಚೆಗಷ್ಟೇ ಹೊರಗಡೆ ಕಂಡಿದ್ದ. ಖಚಿತ ಮಾಹಿತಿ ಪಡೆದಿದ್ದ ಸಿಐಡಿ ಅಧಿಕಾರಿಗಳು ಈತನ ಚಲನ ವಲನಗಳ ಬಗ್ಗೆ ನಿಗಾ ಇಟ್ಟಿದ್ದಲ್ಲದೆ ಬಂಧನಕ್ಕೆ ಬಲೆ ಬೀಸಿದ್ದರು. ರಾವುತಪ್ಪ ಬುಧವಾರ ಸಂಜೆ ಹೊತ್ತಲ್ಲಿ ಕಲಬುರಗಿ ಶರಣಬಸವೇಶ್ವರ ಕೆರೆ ಪಕ್ಕದಲ್ಲಿರುವ ಹೋಟಲ್‌ ಒಂದರ ಬಳಿ ಇದ್ದಾನೆಂಬ ಖಚಿತ ಮಾಹಿತಿ ಆಧರಿಸಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌ ಇವರ ನೇತೃ$್ವದ ದಾಳಿ ನಡಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರ್ಡಿಪಿ ಡೀಲ್‌ಗೆ ರಾವುತಪ್ಪನೇ ಸೂತ್ರಧಾರ: ಪಿಎಸ್‌ಐ ಹಗರಣದಲ್ಲಿ ಆರ್‌ ಡಿ ಪಾಟೀಲ್‌ ನೆಸಿರುವ ಎಲ್ಲಾ ಹಣದ ಡೀಲ್‌ಗಳಿಗೂ ರಾವುತಪ್ಪ ಸೂತ್ರಧಾರನಾಗಿದ್ದ. ಹೀಗಾಗಿ ಈತನ ಬಂಧನ, ವಿಆರಣೆ ಸಿಐಡಿಗೆ ತುಂಬ ಮುಖ್ಯವಾಗಿತ್ತು. ತನಿಖೆ ತೀವ್ರಗೊಂಡಾಗ ತಲೆ ಮರೆಸಿಕೊಂಡಿದ್ದ ರಾವುತಪ್ಪ ಎಲ್ಲಿದ್ದಾನೆಂಬ ಆಹಿತಿ ಇರಲಿಲ್ಲ. ಸಿಐಡಿ ಅಧಿಕಾರಿಗಳು ಗುಂಡಗುರ್ತಿಯಲ್ಲಿರುವ ಹಾಸ್ಟೆಲ್‌ನಲ್ಲಿ ನಡೆಸಿರುವ ವಿಚಾರಣೆಯಲ್ಲಿ ಈತ ಏ 15 ರಂದು ಇಲ್ಲಿನ ಗುಂಡಗುರ್ತಿ ವಸತಿ ನಿಲಯದ ಕೆಲಸಕ್ಕೇ ಹಾಜರಾಗಿಲ್ಲ ಎಂದೂ ಗೊತ್ತಾಗಿದೆ. ಆದಾಗ್ಯೂ ಈತನ ಕೆಲಸದ ಹಾಜರಿ, ಗೈರು ಹಾಜರಿ ವಿಷಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪಕ್ಕಾ ಮಾಹಿತಿಯೂ ಇಲ್ಲ ಎಂಬಂಶವೂ ಬಯಲಿಗೆ ಬಂದಿದೆ.

ಪಾನಮತ್ತ ಪತ್ನಿಯ ಕೊಂದ ಪತಿ ಬಿಡುಗಡೆಗೆ ಹೈಕೋರ್ಟ್‌ ಆದೇಶ

ಇಡೀ ಹಗರಣದಲ್ಲಿ ಬಳಕೆಯಾಗಿರುವ ಬ್ಲೂಟೂತ್‌ ಉಪಕರಣಗಳನ್ನು ಡೀಲ್‌ ಆಂತಹ ಅಭ್ಯರ್ಥಿಗಳಿಗೆ ಸರಿಯಾಗಿ ತಲುಪಿಸಿ ಬರೋದು, ನೌಕರಿ ನೋಟಿಫಿಕೇಷನ್‌ ಹೊರಬೀಳುತ್ತಿದ್ದಂತೆಯೇ ತುಂಬ ಚುರುಕಾಗಿ ಅಭ್ಯರ್ಥಿಗಳನ್ನು ಹುಡುಕಿ ತಂದು ಆರ್ಡಿ ಪಾಟೀಲ್‌ ಜೊತೆ ಸಂಪರ್ಕ ಮಾಡಿಸಿ ಹಣಕಾಸು ಈಲ್‌ ಆಗುವವರೆಗೂ ತುಂಬ ಕಾಳಜಿ ವಹಿಸೋದು ರಾವುತಪ್ಪ ಈ ಹಗರಣದಲ್ಲಿ ಮಾಡುತ್ತ ಬಂದಂತಹ ಕೆಲಸ. ಇದಲ್ಲದೆ ರಾವುತಪ್ಪ ಬ್ಲೂಟೂತ್‌ ಬಳಸಿ ನಡೆಸಲಾಗಿರುವ ಹಗರಣದಲ್ಲಿ ಈತನೇ ಖುದ್ದು 3 ಪ್ರಕರಣಗಳಲ್ಲಿ ಸರಿ ಉತ್ತರ ಅಭ್ಯರ್ಥಿಗಳಿಗೆ ರವಾನಿಸಿರುವ ಖಚಿತ ಮಾಹಿತಿಯೂ ಸಿಐಡಿ ಬಳಿ ಇದೆ. ಇನ್ನುಮುಂದೆ ನಡೆಯುವ ವಿಚಾರಣೆಲ್ಲಿ ಇವೆಲ್ಲ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಐಡಿ ಕಲೆ ಹಾಕಲಿದೆ.

Latest Videos
Follow Us:
Download App:
  • android
  • ios