Asianet Suvarna News Asianet Suvarna News

ಟೀ ಕುಡಿದು, ಕಪ್ ತಿನ್ನಿ..! ಮಾರುಕಟ್ಟೆಗೆ ಬಂದಿದೆ 'ಈಟ್ ಕಪ್'..!

ಟೀ, ಕಾಫಿ ಕುಡಿದ ನಂತರ ಕಪ್ ಇಟ್ಟು ಬಿಡುತ್ತೇವೆ, ಮನೆಯಲ್ಲಾದರೆ ತೊಳೆಯುತ್ತೇವೆ, ಇನ್ನು ಪೇಪರ್ ಕಪ್ ಆದರೆ ಎಸೆಯುತ್ತೇವೆ.. ಇನ್ನುಮುಂದೆ ಹಾಗಲ್ಲ. ಟೀ, ಕಾಫಿ ಕುಡಿದು ಕಪ್‌ನ್ನು ತಿನ್ನಬಹುದು. ಅಚ್ಚರಿಯಾದ್ರೂ ಇದು ಸತ್ಯ. ತಿನ್ನಲು ಸಾರ್ಧಯವಿರುವ ಆರೋಗ್ಯದಾಯಕ ಕಪ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ..

eatable tea cup launched in bangalore
Author
Bangalore, First Published Oct 30, 2019, 12:37 PM IST

ಬೆಂಗಳೂರು(ಅ.30): ಟೀ, ಕಾಫಿ ಕುಡಿದ ನಂತರ ಕಪ್ ಇಟ್ಟು ಬಿಡುತ್ತೇವೆ, ಮನೆಯಲ್ಲಾದರೆ ತೊಳೆಯುತ್ತೇವೆ, ಇನ್ನು ಪೇಪರ್ ಕಪ್ ಆದರೆ ಎಸೆಯುತ್ತೇವೆ.. ಇನ್ನುಮುಂದೆ ಹಾಗಲ್ಲ. ಟೀ, ಕಾಫಿ ಕುಡಿದು ಕಪ್‌ನ್ನು ತಿನ್ನಬಹುದು. ಅಚ್ಚರಿಯಾದ್ರೂ ಇದು ಸತ್ಯ. ತಿನ್ನಲು ಸಾರ್ಧಯವಿರುವ ಆರೋಗ್ಯದಾಯಕ ಕಪ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಟೀ, ಕಾಫಿ ಹಾಗೂ ಇನ್ನಿತರ ಪಾನೀಯ ಸೇವಿಸಿದ ಬಳಿಕ ಸೇವಿಸಬಹುದಾದ ಧಾನ್ಯಗಳಿಂದ ತಯಾರಿಸಿದ ‘ಈಟ್‌ ಕಪ್‌’ ಅನ್ನು ಜಿನೋಮ್‌ಲ್ಯಾಬ್ಸ್‌ ಬಯೋ ಪ್ರೈವೇಟ್‌ ಲಿಮಿಟೆಡ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದೀಪಾವಳಿ: ಬೆಂಗಳೂರಲ್ಲಿ ಒಂದೇ ದಿನ 99 ಮಂದಿಗೆ ಕಣ್ಣಿಗೆ ಹಾನಿ.

ಈಟ್‌ ಕಪ್‌ ಅನ್ನು ನೈಸರ್ಗಿಕ ಧಾನ್ಯದ ಉತ್ಪನ್ನಗಳಿಂದ ತಯಾರಿಸಲಾಗಿದ್ದು, ತಿನ್ನಲು ಯೋಗ್ಯವಾಗಿದೆ. ಗರಿಗರಿಯಾಗಿ ಸ್ವಾದಿಷ್ಟರುಚಿ ನೀಡಲಿದೆ. ಕಪ್‌ನಲ್ಲಿ ನಾರಿನಂಶ ಹೆಚ್ಚಾಗಿದ್ದು ಒಳ್ಳೆಯ ಪೂರಕ ಆಹಾರವೂ ಆಗಿದೆ. ಅಲ್ಲದೇ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಹಾಗೂ ಪೇಪರ್‌ ಕಪ್‌ಗಳಿಗೆ ಅತ್ಯುತ್ತಮ ಪರ್ಯಾಯವಾಗಿದೆ. ಒಂದು ಕಪ್‌ಗೆ 25 ರುಪಾಯಿಗಳಾಗಿದ್ದು, http://eatcup.com/ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಸಂಸ್ಥೆಯ ಕಾರ್ಯಾಕಾರಿ ನಿರ್ದೇಶಕ ಸುರೇಶ್‌ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios