Vijayapura earthquake: ವಿಜಯಪುರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ 2.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಕಳೆದ ಮೂರು ವರ್ಷಗಳಿಂದ ಈ ರೀತಿಯ ಕಂಪನಗಳು ಮರುಕಳಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಘಟನೆಯನ್ನು ಜಿಲ್ಲಾಡಳಿತ ಅಧಿಕೃತವಾಗಿ ದೃಢಪಡಿಸಿದೆ.
ವಿಜಯಪುರ (ಅ.12): ವಿಜಯಪುರ ಜಿಲ್ಲೆಯ ಕೆಲವೆಡೆ ಮತ್ತೆ ಭೂಕಂಪನ ಅನುಭವವಾಗಿದೆ. ಶುಕ್ರವಾರ ರಾತ್ರಿ 10.01ರ ಸುಮಾರಿನಲ್ಲಿ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಭೂಕಂಪನ ಅನುಭವವಾಗಿದೆ.
ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು, ವಿಜಯಪುರ ಹಾಗೂ ತಾಲೂಕಿನ ಮದಭಾವಿ ಹಾಗೂ ಬಸವನಗರ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಇದನ್ನೂ ಓದಿ: Earthquake: ವಿಜಯಪುರದಲ್ಲಿ ಭೂಕಂಪನ, 2.9 ರಷ್ಟು ತೀವ್ರತೆ ದಾಖಲು, ಬೆಚ್ಚಿಬಿದ್ದ ಜನತೆ..!
ಭೂಕಂಪನ ತೀವ್ರತೆ ಎಷ್ಟು?
2.6 ರಷ್ಟು ಭೂಕಂಪನದ ತೀವ್ರತೆಯಿದ್ದು, ಭೂಮಿಯ ಆಳದಲ್ಲಿ 10 ಕಿ.ಮೀ.ವರೆಗೂ ಕಂಪನವಿದೆ. ಕಳೆದ ಮೂರು ವರ್ಷಗಳಲ್ಲಿ ಮೇಲಿಂದ ಮೇಲೆ ಭೂಕಂಪನ, ಭಾರೀ ಸದ್ದು ಆಗುತ್ತಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಇನ್ನು, ಕಳೆದ ತಿಂಗಳು ಸಿಂದಗಿ ಪಟ್ಟಣದಲ್ಲಿ ಸರಣಿ ರೂಪದಲ್ಲಿ ಭೂಕಂಪನ ಅನುಭವವಾಗಿತ್ತು. ಈಗ ನಗರ ಹಾಗೂ ತಾಲೂಕಿನಲ್ಲಿ ಕಂಪನದ ಅನುಭವವಾಗಿದೆ. ಕೆಎಸ್‌ಎನ್‌ಡಿಎಂಸಿ ಪೋರ್ಟಲ್‌ನಲ್ಲಿ ದಾಖಲಾಗಿದೆ. ಈ ಕುರಿತು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಭೂಮಿಯಿಂದ ಬಂದ ಶಬ್ದಕ್ಕೆ ಮನೆಯಿಂದ ಹೊರಬಂದ ಜನ
