ಬೆಳಗಾವಿ (ಅ. 25): ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು  ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುಪ್ರೀಂಕೋರ್ಟ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಕುರಿತು ಸವದಿ ಪ್ರತಿಕ್ರಿಯೆ ನೀಡುತ್ತಾ ಅವರ ಬಗ್ಗೆ ನಾವ್ಯಾಕೆ ಚಿಂತನೆ ಮಾಡಬೇಕು. ಅನರ್ಹ ಶಾಸಕರ ಬಗ್ಗೆ ನಾವು ಚಿಂತನೆ ಮಾಡುವ ಅವಶ್ಯಕತೆ ಇಲ್ಲ. ಅನರ್ಹರು ನಮ್ಮ ಪಕ್ಷಕ್ಕೆ ಬರುವ ಕುರಿತು ಎಲ್ಲೂ ಹೇಳಿಲ್ಲ. ಸ್ಪೀಕರ್ ಅನರ್ಹಗೊಳಿಸಿದ್ದಕ್ಕೆ ಅವರು ಸುಪ್ರೀಂ ಗೆ ಹೋಗಿದ್ದಾರೆ ಎಂದಿದ್ದಾರೆ.  

ಬಿಜೆಪಿ ಸಂಸದರ ಪುತ್ರನ ಬಾಯಲ್ಲಿ ಟಿಪ್ಪು ಜಯಂತಿ ಜಪ!

ಅನರ್ಹರು ತಮಗೆ ನ್ಯಾಯಬೇಕೆಂದು, ಕಾಂಗ್ರೆಸ್ ನವರು ತಮಗೆ ನ್ಯಾಯಬೇಕೆಂದು ಕೋರ್ಟ್ ಗೆ ಹೋಗಿದ್ದಾರೆ.  ಇದು ಅವರವರ ಮಧ್ಯದ ವ್ಯಾಜ್ಯ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ನಾವ್ಯಾಕೆ ಉತ್ತರಿಸಬೇಕು. ಈ ಕ್ಷಣದವರೆಗೂ ಅನರ್ಹರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. 

"