ಬೆಂಗಳೂರು (ನ.19): ಮಾದಕ ದ್ರವ್ಯ ಜಾಲದ ಸಂಪರ್ಕ ಹೊಂದಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕೇರಳದ ಮಾಜಿ ಸಚಿವರ ಪುತ್ರ ಬಿನೀಶ್‌ ಕೊಡಿಯೇರಿಯನ್ನು ನ.20ರವರೆಗೆ ಬೆಂಗಳೂರು ವಲಯದ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ಬಿನೀಶ್‌ ಡ್ರಗ್ಸ್‌ ಪೆಡ್ಲರ್‌ಗಳೊಂದಿಗೆ ಕೊಟ್ಯಂತರ ರು.ಗಳ ವ್ಯವಹಾರ ನಡೆಸಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಾಗಿದೆ. ಹೀಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಎನ್‌ಸಿಬಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿರುವ ನಗರದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ ಮೂರು ದಿನಗಳ ಕಾಲ ಬಿನೀಶ್‌ನನ್ನು ಎನ್‌ಸಿಬಿ ವಶಕ್ಕೆ ನೀಡಿ ಅದೇಶಿಸಿದ್ದಾರೆ. ಬಿನೀಶ್‌ಗೆ ಸೇರಿದ ಹಣ ಡ್ರಗ್ಸ್‌ ವ್ಯವಹಾರಕ್ಕೆ ಬಳಕೆಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಪುತ್ರ ಬಿನೀಶ್‌ ಜೈಲುಪಾಲು ಬೆನ್ನಲ್ಲೇ ಹುದ್ದೆ ತೊರೆದ ಕೊಡಿಯೇರಿ! .
 
ಆರೋಪಿ ಬಿನೀಶ್‌ ಡ್ರಗ್ಸ್‌ ಪೆಡ್ಲರ್‌ ಮೊಹಮದ್‌ ಅನೂಪ್‌ನೊಂದಿಗೆ ಒಟನಾಟ ಹೊಂದಿದ್ದು, ಅನೂಪ್‌ ಬ್ಯಾಂಕ್‌ ಖಾತೆಗೆ ಕೋಟ್ಯಂತರ ರು.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಇದೀಗ

ಅಲ್ಲದೆ, ಈ ಹಿಂದೆ ಎನ್‌ಸಿಬಿ ಅಧಿಕಾರಿಗಳು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಭೇಟಿ ನೀಡಿ ಬಿನೀಶ್‌ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.