Asianet Suvarna News Asianet Suvarna News

'ಈ ಸರ್ತಿ ಕಾಗೆ ಅಲ್ಲ, ಕಾಗೆ ವಂಶಾನೆ ಹಾರಿಸ್ತಾನೆ ಹುಷಾರಾಗಿರಿ..' ಡ್ರೋನ್‌ ಪ್ರತಾಪ್‌ ಹೊಸ ಪೋಸ್ಟ್‌ ಫುಲ್‌ ಟ್ರೋಲ್‌!

ತಾನೊಬ್ಬ ಯುವ ವಿಜ್ಞಾನಿ, ಸಾಕಷ್ಟು ಡ್ರೋನ್‌ಗಳನ್ನು ತಯಾರಿಸಿದ್ದೇನೆ ಎಂದು ಪುಂಗಿ ಊದಿ ಜನರನ್ನು ನಂಬಿಸಿ ವಂಚನೆ ಮಾಡಿದ್ದ ಡ್ರೋನ್‌ ಪ್ರತಾಪ್‌, ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ಪೋಸ್ಟ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ಗೆ ಭಿನ್ನ ವಿಭಿನ್ನ ಎನಿಸುವಂಥ ಕಾಮೆಂಟ್‌ಗಳು ಬಂದಿವೆ.
 

Drone Pratap New instagram post severely trolled In Social Media san
Author
First Published Nov 2, 2022, 5:24 PM IST

ಬೆಂಗಳೂರು (ನ. 2): ಡ್ರೋನ್‌ ಪ್ರತಾಪ್‌ ಮತ್ತೆ ಬಂದಿದ್ದಾರೆ. ಬಟ್‌ ಈ ಬಾರಿ ಅವರು ಯಾವುದೇ ಮಾತನ್ನಾಡಿಲ್ಲ. ಇನ್ಸ್‌ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಾಕಿದ್ದು, ಅವರ ಈ ಪೋಸ್ಟ್‌ಗೆ ಸಾಕಷ್ಟು ಭಿನ್ನ, ವಿಭಿನ್ನ ಕಾಮೆಂಟ್‌ಗಳು ಬಂದಿವೆ. ನಾನು ಯುವ ವಿಜ್ಞಾನಿ, ವಿವಿಧ ರೀತಿಯ ಡ್ರೋನ್‌ಗಳನ್ನು ನಾನು ತಯಾರಿಸಿದ್ದೇನೆ ಎಂದಿದ್ದ ಡ್ರೋನ್‌ ಪ್ರತಾಪ್‌ಗೆ ಮಾಧ್ಯಮಗಳು ಕೂಡ ದೊಡ್ಡ ಮಟ್ಟದ ಪ್ರಚಾರ ನೀಡಿದ್ದವು. ಕೊನೆಗೆ ಮಾಧ್ಯಮಗಳ ಮೂಲಕವೇ ಈತನ ಜನ್ಮಜಾತಕ ಬಹಿರಂಗವಾಗಿತ್ತು. ಅದಾದ ಬಳಿಕ ಈತ ಹೇಳಿದ್ದ ಹೇಳಿಕೆಗಳು ಹಾಗೂ ಮಾಡಿದ ಭಾಷಣಗಳಿಂದ ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗಿತ್ತು. ಈ ವಿವಾದದ ಬಳಿಕ ಸಂಪೂರ್ಣವಾಗಿ ನಾಪತ್ತೆಯಾಗಿ ಹೋಗಿದ್ದ ಡ್ರೋನ್‌ ಪ್ರತಾಪ್‌ ಬಹಳ ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಎಲ್ಲಾ ಕಾಮೆಂಟ್‌ಗಳಲ್ಲೂ ಡ್ರೋನ್‌ ಪ್ರತಾಪ್‌ನ ಅವಾಂತರಗಳನ್‌ನೇ ನೆನಪಿಸಿಕೊಂಡು ಕಾಲೆಳೆದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Prathap N M (@droneprathap)


ಪೊಲೀಸರ ವಿಚಾರಣೆ ಎದುರಿಸಿ ನಾಪತ್ತೆಯಾಗಿದ್ದ ಡ್ರೋನ್‌ ಪ್ರತಾಪ್‌ ಅಂದಾಜು ಎರಡು ವರ್ಷಗಳ ಬಳಿಕ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಡ್ರೋನ್‌ ಪ್ರತಾಪ್‌ ಬದಲು ಆತ ಕಾಗೆ ಹಾರಿಸಿದ್ದ ರೀತಿಗೆ ಕಾಗೆ ಪ್ರತಾಪ್‌ ಎಂದು ಕರೆಯಲಾಗುತ್ತಿತ್ತು. ಪ್ರತಾಪ್‌ನ ಹೊಸ ಪೋಸ್ಟ್‌ ಕಂಡೊಡನೆ ಒಬ್ಬ ವ್ಯಕ್ತಿ, 'ಈ ಸರ್ತಿ ಇವನು ಕಾಗೆ ಅಲ್ಲ, ಕಾಗೆ ವಂಶಾನೆ ಹಾರಿಸೋ ಪ್ಲ್ಯಾನ್‌ ಅಲ್ಲಿ ಇದ್ದಾನೆ. ಎಲ್ಲರೂ ಹುಷಾರಾಗಿರಿ..' ಎಂದು ಕಾಮೆಂಟ್‌ ಮಾಡಿದ್ದಾರೆ. ಪ್ರತಾಪ್‌ ಏನೋ ಹೊಸದಾಗಿ ಆರಂಭ ಮಾಡಿರುವ ರೀತಿಯಲ್ಲಿ ಪೋಸಸ್‌ ನೀಡಿದ್ದಾರೆ. ಟೇಬಲ್‌ ಮೇಲೆ ಲ್ಯಾಪ್‌ಟಾಪ್‌ ಇರಿಸಿಕೊಂಡಿರುವ ಪ್ರತಾಪ್‌, ಅದಕ್ಕೆ ಡೇಟಾ ಕೇಬಲ್‌ ಅಳವಡಿಸಿರುವ ಯಾವುದೋ ಒಂದು ಸಾಧನಕ್ಕೆ ಸೋಲ್ಡರಿಂಗ್‌ ಮಾಡುತ್ತಿದ್ದಾರೆ. ಎರಡು ಕೈಗಳಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಾ ಕನ್ನಡಕವನ್ನು ಅವರು ಧರಿಸಿಕೊಂಡಿದ್ದು, ಸಾಲ್ಡಿರಿಂಗ್‌ ಯಂತ್ರವನ್ನು ಕೈಯಲ್ಲಿ ಹಿಡಿದುಕೊಂಡು ನಗುತ್ತಾ ಕ್ಯಾಮೆರಾಗೆ ಮುಖ ಮಾಡಿದ್ದಾರೆ.

ಟಿವಿ ಸ್ಟುಡಿಯೋ ಅಲ್ಲ; ಅಧಿಕಾರಿಗಳ ಖಡಕ್ ಪ್ರಶ್ನೆಗೆ ಪ್ರತಾಪ್ ಬಾಯಿ ಬಂದ್!

ಒಟ್ಟು ಎರಡು ಚಿತ್ರಗಳನ್ನು ಪ್ರತಾಪ್‌ ಹಂಚಿಕೊಂಡಿದ್ದಾರೆ. ಟೇಬಲ್‌ ಮೇಲೆ ಇನ್ನೂ ಕೆಲವು ಉಪಕರಣಗಳಿದ್ದು ಕುತೂಹಲ ಮೂಡಿಸುವಂತಿದೆ. ಡ್ರೋನ್‌ ಕ್ಯಾಮೆರಾದ ಚಿತ್ರ ಕೂಡ ಇದರಲ್ಲಿ ಕಂಡಿದೆ. ಆದರೆ, ಪ್ರತಾಪ್‌ ಯಾವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೇನು ಸಾಹಸ ಮಾಡಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ' ಕೆಟ್ಟ ಜನರು ನಿಮ್ಮ ಜೀವನದಿಂದ ಸರಿದು ಹೋದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ಆಗಲು ಪ್ರಾರಂಭವಾಗುತ್ತದೆ' ಎನ್ನು ಚಂದನೆಯ ಅಡಿಬರಹವನ್ನು ತಮ್ಮ ಪೋಸ್ಟ್‌ಗೆ ಹಾಕಿದ್ದಾರೆ.

ಕ್ವಾರಂಟೈನ್ ಮುಗಿಸಿದ 'ಯುವ ವಿಜ್ಞಾನಿ'ಗೆ ಪೊಲೀಸರ ಭರ್ಜರಿ ವೆಲ್‌ ಕಂ!

ಆದರೆ, ಡ್ರೋನ್‌ ಪ್ರತಾಪ್‌ ಅವರ ಈ ಹೊಸ ಅವತಾರವನ್ನು ಕಂಡಿರುವ ಇನ್ಸ್‌ಟಾಗ್ರಾಮ್‌ನ ಮಂದಿ ಬಗೆ ಬಗೆಯ ಕಾಮೆಂಟ್‌ಗಳ ಮೂಲಕ ಅವರ ಕಾಲೆಳೆಯುತ್ತಿದ್ದಾರೆ. 'ಅಣ್ಣಾ ನನ್ನ ಹಳೆ ಗರ್ಲ್‌ಫ್ರೆಂಡ್‌  ಮದುವೆ ಇದೆ. ಗಿಫ್ಟ್‌ ಕಳಿಸಬೇಕು. ಅವರು ಮಾಡಿರೋ ಮೆಸೇಜ್‌ಗಳನ್ನೆಲ್ಲಾ ಸ್ಕ್ರೀನ್‌ ಶಾಟ್‌ ಮಾಡಿಟ್ಟು, ಗಿಫ್ಟ್‌ ಪ್ಯಾಕ್‌ ಮಾಡ್ಸಿದ್ದೇನೆ. ನಿನ್‌ ಡ್ರೋನ್‌ ಕಳ್ಸು, ಒಂದ್‌ ಮನೆ ಹಾಳು ಮಾಡೋದಿದೆ' ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, ಈ ಬಾರಿ ಯಾವ ರಾಕೆಟ್‌ ಹಾರಿಸ್ತೀರಣ್ಣ, ಮೊದ್ಲೇ ಹೇಳಿಬಿಡಿ ನಾವು ಪ್ರಿಪೇರ್‌ ಆಗಿ ಇರ್ತೇವೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಅಣ್ಣಾ ಮಿಕ್ಸಿ ರಿಪೇರಿ ಮಾಡ್ತಾ ಇದ್ದೀರಾ ಎಂದು ಇನ್ನೊಬ್ಬ ಕಾಲೆಳೆದಿದ್ದಾರೆ. ಒಂದು ಸೋಲ್ಡರಿಂಗ್‌ ಮಾಡೋಕೆ ಇಷ್ಟೆಲ್ಲಾ ಬಿಲ್ಡಪ್‌ ಬೇಕಾ ಎಂದು ಕಾಲೆಳೆದಿದ್ದಾರೆ. 'ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ..ನಂಬಿಕೆ ದ್ರೋಹಿ' ಎಂದು ಇನ್ನೊಬ್ಬರು ಬರೆದಿದ್ದಾರೆ. ಹೋದ ಸಲ ಡ್ರೋನ್‌ ಬಿಟ್ಟಿದ್ದ, ಈ ಸಾರಿ, ಟ್ರೇನ್‌ ಬಿಡ್ತಾನೋ, ರಾಕೆಟ್‌ ಹಾರಿಸ್ತಾನೋ ಗೊತ್ತಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.

Follow Us:
Download App:
  • android
  • ios