Asianet Suvarna News Asianet Suvarna News

ಬೆಂಗಳೂರು: ಫೆಬ್ರುವರಿ ವೇಳೆಗೆ ಚಾಲಕ ರಹಿತಮೆಟ್ರೋ ರೈಲು ಆಗಮನ ನಿರೀಕ್ಷೆ

ಎಲೆಕ್ಟ್ರಾನಿಕ್ಸ್‌ ಸಿಟಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ (18.82 ಕಿ.ಮೀ.) ಹಳದಿ ಮಾರ್ಗಕ್ಕೆ ಚಾಲಕ ರಹಿತ ರೈಲು ಫೆಬ್ರವರಿ ಮಧ್ಯಂತರ ಅಥವಾ ಅಂತ್ಯಕ್ಕೆ ಚೆನ್ನೈ ಬಂದರಿಗೆ ತಲುಪುವ ಸಾಧ್ಯತೆಯಿದ್ದು, ಅಲ್ಲಿಂದ ರಸ್ತೆ ಮೂಲಕ ಹೆಬ್ಬಗೋಡಿ ಡಿಪೋಗೆ ರಸ್ತೆ ಮೂಲಕ ಬರಲಿದೆ.

Driverless metro train expected to arrive by February in Namma metro Bengaluru rav
Author
First Published Jan 25, 2024, 12:06 PM IST

ಬೆಂಗಳೂರು (ಜ.25): ಎಲೆಕ್ಟ್ರಾನಿಕ್ಸ್‌ ಸಿಟಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ (18.82 ಕಿ.ಮೀ.) ಹಳದಿ ಮಾರ್ಗಕ್ಕೆ ಚಾಲಕ ರಹಿತ ರೈಲು ಫೆಬ್ರವರಿ ಮಧ್ಯಂತರ ಅಥವಾ ಅಂತ್ಯಕ್ಕೆ ಚೆನ್ನೈ ಬಂದರಿಗೆ ತಲುಪುವ ಸಾಧ್ಯತೆಯಿದ್ದು, ಅಲ್ಲಿಂದ ರಸ್ತೆ ಮೂಲಕ ಹೆಬ್ಬಗೋಡಿ ಡಿಪೋಗೆ ರಸ್ತೆ ಮೂಲಕ ಬರಲಿದೆ.

ಬಿಎಂಆರ್​ಸಿಎಲ್ ಅಧಿಕಾರಿಗಳ ತಂಡ ರೈಲಿನ ಪರೀಕ್ಷೆಗಳಿಗಾಗಿ ಚೀನಾಕ್ಕೆ ಭೇಟಿ ನೀಡಿತ್ತು. ಕಳೆದ ಜ.20ರಂದು ಚೀನಾದಿಂದ ರೈಲನ್ನು ಕಳುಹಿಸಲಾಗಿದೆ. ಈ ರೈಲು ಬೆಂಗಳೂರಿಗೆ ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಲನೆ ಮಾಡಲಾಗುವುದು. ಇನ್ನೊಂದು ರೈಲು ಕೂಡ ಶೀಘ್ರವೇ ಚೀನಾದಿಂದ ಬರಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಈವರೆಗೆ 100 ಕೋಟಿ ಜನರ ಸಂಚಾರ!

ಒಟ್ಟೂ 216 ಕೋಚ್‌ಗಳನ್ನು ಸಿಆರ್‌ಆರ್‌ಸಿ ನಿಂಜಾಂಗ್‌ ಪುಜ್ಹೆನ್‌ ಈ ರೈಲುಗಳನ್ನು ಪೂರೈಸಲು ಒಪ್ಪಂದವಾಗಿದ್ದು, ಮೂಲ ಮಾದರಿಯ ಎರಡು ರೈಲನ್ನು ಚೀನಾ ನಿರ್ಮಿಸಿಕೊಡಲಿದೆ. ಇದರ ಸಹ ಸಂಸ್ಥೆಯಾಗಿರುವ ಕೋಲ್ಕತ್ತಾದ ತೀತಾಘರ್‌ ರೈಲ್ ಫ್ಯಾಕ್ಟರಿ ಉಳಿದ ಕೋಚ್‌ಗಳನ್ನು ನಿರ್ಮಿಸಿಕೊಡಲಿದೆ. ಫೆಬ್ರವರಿಗೆ ಈ ರೈಲು ಬಂದರೂ ಸೆಪ್ಟೆಂಬರ್‌ನಿಂದ ಹಳದಿ ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋ-ಆಫ್ಘನ್ ಬೆಂಗಳೂರಿನ ಟಿ20 ಪಂದ್ಯಕ್ಕೆ ಮೆಟ್ರೋ ಅವಧಿ ವಿಸ್ತರಣೆ

ಚಾಲಕ ರಹಿತ ರೈಲಿನ ವಿಶೇಷತೆ:

ಚಾಲಕ ರಹಿತ ರೈಲು ಇದಾಗಿದ್ದು, ಈಗ ಸಂಚರಿಸುತ್ತಿರುವ ರೈಲಿನ ವಿನ್ಯಾಸಕ್ಕಿಂತ ಸಂಪೂರ್ಣ ಭಿನ್ನವಾಗಿರಲಿದೆ. ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಮ್​ ಮೂಲಕ ನಿರ್ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನುಳಿದಂತೆ ಎಲ್ಲ ಬೋಗಿಗಳಲ್ಲಿ ಸಿಸಿ ಕ್ಯಾಮೆರಾ ಬೋಗಿಗಳಲ್ಲಿ ಅಳವಡಿಸಲಾಗಿದೆ. ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಸಂಚರಿಸುವುದು ಅನುಮಾನ, ಎರಡು ವರ್ಷ ಚಾಲಕರು ಇದನ್ನು ಚಾಲನೆ ಮಾಡಲಿದ್ದು, ಬಳಿಕ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.

Latest Videos
Follow Us:
Download App:
  • android
  • ios