: ಡಾ. ರಾಜಕುಮಾರ ಹುಟ್ಟು ಹಬ್ಬದ ನಿಮಿತ್ತ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬಳ್ಳಾರಿಯ ಸಹಾಯಕ ಅಯುಕ್ತ ಪ್ರಮೋದ್, ಡಾ.ರಾಜ್ ಕುಮಾರ್ ಅವರು ಮೇರು ವ್ಯಕ್ತಿತ್ವದ ಖ್ಯಾತ ನಟ. ಅವರ ಸಾಮಾಜಿಕ ಕಳಕಳಿ, ಕನ್ನಡದ ಅಪಾರ ಪಾಂಡಿತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಹೇಳಿದರು.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ: ಡಾ. ರಾಜಕುಮಾರ ಹುಟ್ಟು ಹಬ್ಬದ ನಿಮಿತ್ತ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬಳ್ಳಾರಿಯ ಸಹಾಯಕ ಅಯುಕ್ತ ಪ್ರಮೋದ್, ಡಾ.ರಾಜ್ ಕುಮಾರ್ ಅವರು ಮೇರು ವ್ಯಕ್ತಿತ್ವದ ಖ್ಯಾತ ನಟ. ಅವರ ಸಾಮಾಜಿಕ ಕಳಕಳಿ, ಕನ್ನಡದ ಅಪಾರ ಪಾಂಡಿತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಹೇಳಿದರು.
ವರನಟ ಡಾ.ರಾಜ್ ಕುಮಾರ್ ಅವರ ಆದರ್ಶ ಗುಣ ಹಾಗೂ ಆಚಾರ-ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಯುವಜನಾಂಗ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಪನ್ನಾರಾಜ್
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ವಿಶೇಷ ಉಪನ್ಯಾಸ ದಲ್ಲಿ ಮಾತನಾಡಿದ ಅವರು ಕನ್ನಡದ ಅಸ್ಮಿತೆ, ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಮಾತನಾಡಿದರು ಕಡಿಮೆ ಎನಿಸುತ್ತದೆ.
iಇದನ್ನೂ ಓದಿ:Dr Rajkumar Birthday: ಬಯಸಿದ್ದರೂ ಮಾಡಲಾಗದ ಸಿನಿಮಾಗಳು; ಅಭಿಮಾನಿಗಳಿಗೆ ಇಂದಿಗೂ ಕೊರಗು!
ಡಾ.ರಾಜ್ ಕುಮಾರ್ ಅವರ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯ, ಸಾಮಾಜಿಕ ಕಳಕಳಿಯ ಚಲನಚಿತ್ರಗಳು ಜನರನ್ನು ಪ್ರಭಾವಿತಗೊಳಿಸಿದ್ದವು. ಅವರ ಎಲ್ಲಾ ಚಲನಚಿತ್ರಗಳನ್ನು ಕುಟುಂಬ ಸಮೇತರಾಗಿ ನೋಡುವಂತಹದ್ದಾಗಿದ್ದವು. ಬೀದರ್ ನಿಂದ ಚಾಮರಾಜನಗರ ದವರೆಗೆ ಕನ್ನಡಾಭಿಮಾನಿಯಾಗಿ ಸಮಾನ ಕನ್ನಡ ಭಾಷೆ ಮಾತನಾಡುವಂತೆ ಪ್ರೇರೇಪಿಸಿದವರು ಎಂದರು.
ಅಂದಿನ ಕಾಲದಲ್ಲಿ ಕುವೆಂಪು ಅವರ ಸಾಹಿತ್ಯ ಪುಸ್ತಕಗಳನ್ನು ಕೇವಲ ಅಕ್ಷರಸ್ಥರು ಮಾತ್ರ ಓದುತ್ತಿದ್ದರು. ಆದರೆ ಅವುಗಳ ಸಂದೇಶಗಳನ್ನು ತಮ್ಮದೇ ಆದ ನಟನಾ ಶೈಲಿಯ ಮೂಲಕ ಬೆಳ್ಳಿ ಪರದೆಯ ಮೂಲಕ ಬಿಂಬಿಸುತ್ತಿದ್ದವರು ಡಾ.ರಾಜ್ ಕುಮಾರ್ ಎಂದು ತಿಳಿಸಿದರು.
ಬಳ್ಳಾರಿಗೆ ಅವಿನಾಭಾವ ಸಂಬಂಧ
ಡಾ.ರಾಜ್ ಕುಮಾರ್ ಅವರು ಸರಳ ಜೀವನ ಹೊಂದಿದ್ದವರು. ಅದೇ ರೀತಿಯಲ್ಲೂ ಗಣಿನಾಡು ಬಳ್ಳಾರಿ ಜೊತೆಗೆ ಅವಿನಾಭಾವ ಸಂಬಂಧವಿತ್ತು. ‘ನಾ ನಿನ್ನ ಮರೆಯಲಾರೆ’ ಚಿತ್ರದ ಕೊನೆಯಲ್ಲಿ ಚಲಿಸುವ ರೈಲಿನಲ್ಲಿ ಭೇಟಿ ಮಾಡುವ ಸನ್ನಿವೇಶ ಬಳ್ಳಾರಿ ಹೊರವಲಯದ ಓಬಳಾಪುರ ಬಳಿ ಚಿತ್ರೀಕರಿಸಲಾಗಿತ್ತು. ಬಳ್ಳಾರಿಯ ಮಯೂರ ಹೋಟೆಲ್ ಗೆ ಆಗಮಿಸಿದ್ದರು. ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ನಿರ್ಮಾಣದ ದೇಣಿಗೆಗೆ ಡಾ.ರಾಜ್ ಕುಮಾರ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಗೋಕಾಕ ಚಳುವಳಿಗಳಂತಹ ಕನ್ನಡ ಭಾಷೆ ರಕ್ಷಣೆಯ ಹೋರಾಟಕ್ಕೆ ಡಾ.ರಾಜ್ ಕುಮಾರ್ ಅವರು ಬಳ್ಳಾರಿಗೆ ಆಗಮಿಸಿದ್ದರು ಎಂದು ಎಲ್ಲಾ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ಪಿಬಿ ಶ್ರೀನಿವಾಸ್‌ಗೆ ಆಗಿರೋ ಅನ್ಯಾಯಕ್ಕೆ ಡಾ ರಾಜ್‌ಕುಮಾರ್ ಇಟ್ಟ ಹೆಜ್ಜೆಯೇ ರೋಚಕ!
ಇನ್ನೂ ಹಿಂದೆ ಮಕ್ಕಳು ಮನೆಯಲ್ಲಿ ತಂದೆ-ತಾಯಿಯರ ಮಾತು ಕೇಳದಿದ್ದಾಗ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ತೋರಿಸುತ್ತಿದ್ದರು. ಯಾಕೆಂದರೆ ಅವರ ಚಿತ್ರ ಅಷ್ಟೊಂದು ಅರ್ಥಗರ್ಭಿತವಾಗಿರುತ್ತಿದ್ದವು. ಇನ್ನೂ ಕಾರ್ಯಕ್ರಮದಲ್ಲಿ ಬಳ್ಳಾರಿಯ ಪ್ರತಿಭಾ ಆರ್ಕೆಷ್ಟ್ರಾ ವತಿಯಿಂದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ತಂಡದ ರಘುಪತಿ, ಸರಸ್ವತಿ ಮತ್ತು ಉಮೇಶ್ ಅವರು ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಮನ ಸೆಳೆದರು.
