ಕನ್ನಡ ಪತ್ರಕರ್ತನಿಗೆ ವಕ್ಕರಿಸಿದ ಕೊರೋನಾ: ಹಲವು ಮಾಧ್ಯಮ ಸಿಬ್ಬಂದಿ ಕ್ವಾರಂಟೈನ್

ಕೊರೋನಾ ದೇಶಕ್ಕೆ ಕಾಲಿಟ್ಟಾಗಿನಿಂದ ವೈರಸ್‌ ಬಗ್ಗೆ ಪತ್ರಕರ್ತರು ಜಾಗೃತಿ ಮೂಡಿಸುತ್ತಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರೋ ಕ್ರಮಗಳು, ಹೇಗೆ ಜಾಗೃತಿ ವಹಿಸಬೇಕು ಅಂತಾ ದಿನದ 24 ಗಂಟೆಯೂ ಜನರಿಗೆ ಎಚ್ಚರಿಕೆ ಮೂಡಿಸುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಫೀಲ್ಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರೋ ಓರ್ಬ ಕನ್ನಡ ಪತ್ರಕರ್ತರಿಗೆ ಕೊರೋನಾ ಶಾಕ್ ಕೊಟ್ಟಿದೆ.

Dozens of primary contact Bengaluru mediamen quarantined Over Journalist Corona positive

ಬೆಂಗಳೂರು, (ಏ.25): ಕೊರೋನಾ ವೈರಸ್‌ ಪತ್ರಕರ್ತರ ಮೇಲೆಯೂ ತನ್ನ ಕರಾಳ ಪ್ರಭಾವವನ್ನು ಬೀರಿದ್ದು, ಬೆಂಗಳೂರು ನಗರದಲ್ಲಿ ಓರ್ವ ಕನ್ನಡ ಖಾಸಗಿ ಸುದ್ದಿ ವಾಹಿನಿಯ ಓರ್ವ ಪತ್ರಕರ್ತನಿಗೆ ಸೋಂಕು ತಗುಲಿರುವುದು ದೃಢವಾಗಿದೆ. 

ಸಿಎಂ ಬಿಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರದಿಂದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸುತ್ತಿದ್ದು, ಶುಕ್ರವಾರ ಒಟ್ಟು 120 ಮಂದಿಯನ್ನು ಪರೀಕ್ಷಿಸಲಾಗಿದೆ. 

ನೀವ್ ಮನೆಯಲ್ಲೇ ಇರಿ ಎನ್ನುವ 53 ಪತ್ರಕರ್ತರಿಗೆ ಕೊರೋನಾ; ವಾರಿಯರ್ಸ್ ಕತೆ ಕೇಳೋರ್ಯಾರು? 

ಈ ಪೈಕಿ ಕನ್ನಡ ಸುದ್ದಿ ವಾಹಿನಿಯ ಓರ್ವ ಕ್ಯಾಮೆರಾಮನ್ ಗೆ ಪಾಸಿಟಿವ್ ಬಂದಿದ್ದು, ಉಳಿದ 119 ಮಂದಿಗೆ ನೆಗಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕ್ಯಾಮೆರಾಮನ್ ಜತೆ ಸಂಪರ್ಕದಲ್ಲಿದ್ದ ವಿವಿಧ ಮಾಧ್ಯಮ ಪತ್ರಕರ್ತರನ್ನು ಗುರುತಿಸಲಾಗಿದ್ದು, ಅವರನ್ನು ಕ್ವಾರಂಟೈನ್‌ ಮಾಡಲು ಸರ್ಕಾರ ಮುಂದಾಗಿದೆ.

ಬಿಗ್​ ಬ್ರೇಕಿಂಗ್: ಕರ್ನಾಟಕದಲ್ಲಿ 500ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ

ಅಲ್ಲದೇ ಕ್ಯಾಮೆರಾಮನ್ ಕೆಲಸ ನಿರ್ವಹಿಸುವ ಸಂಸ್ಥೆಯ ಸಹೋದ್ಯೋಗಿ, ಕ್ಯಾಬ್ ಡ್ರೈವರ್, ಸೆಕ್ಯೂರಿಟ್ ಗಾರ್ಡ್ ಸೇರಿದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್‌ ಗುರುತಿಸಿದೆ. ಇದಲ್ಲದೇ ಅವರವರ ಕುಟುಂಬಸ್ಥರಿಗೂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಇದೇ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios