ಬೆಂಗಳೂರು, (ಏ.25): ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 26 ಜನರು ಕೊರೊನಾ ಸೋಂಕಿಗೊಳಗಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ. 

ಇಲ್ಲಿವರೆಗೆ 158 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 18 ಜನರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಇನ್ನು ಚಿಕಿತ್ಸೆಯಿಂದ ಗುಣಮುಖರಾದವರು ಮತ್ತು ಸಾವಿಗೀಡಾದವರ ಹೊರತಾಗಿ ರಾಜ್ಯದಲ್ಲಿ 324 ಆ್ಯಕ್ಟಿವ್ ಪ್ರಕರಣಗಳಿವೆ. ಇವುಗಳಲ್ಲಿ 317 ಮಂದಿ ಸಾಮಾನ್ಯ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ಹೊರಡಿಸಿದೆ.

ಶನಿವಾರ ಜಿಲ್ಲಾವಾರು ಪತ್ತೆಯಾದ ಸೋಂಕಿತರ ಅಂಕಿ ಸಂಖ್ಯೆ
ಬೆಂಗಳೂರು- 13
ಬೆಳಗಾವಿ- 9
ಮಂಡ್ಯ- 1
ಮೈಸೂರು- ನಂಜನಗೂಡು- 1
ಚಿಕ್ಕಬಳ್ಳಾಪುರ- 1 ಮತ್ತು ದಕ್ಷಿಣ ಕನ್ನಡದಲ್ಲಿ ಒಬ್ಬರು ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.