ಮುಂಬೈ(ಏ. 20)  ಕೊರೋನಾ ಆತಂಕ ಈಗ ಪತ್ರಕರ್ತರ ಬೆನ್ನು ಬಿದ್ದಿದೆ. ಮುಂಬೈನ 53 ಪತ್ರಕರ್ತರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.

ಒಟ್ಟು 167 ಜನ ಜರ್ನಲಿಸ್ಟ್ ಗಳ ಪರೀಕ್ಷೆ ನಡೆಸಲಾಗಿದ್ದು ವರದಿ ಬಂದಿದೆ. ಶಿವಸೇನಾ  ನಾಯಕ, ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ನ ಆರೋಗ್ಯ ಸಮಿತಿಯ ಸದಸ್ಯ ಅಮಯ್ ಘೋಲೆ ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳು ಹೇಗೆ ತಮ್ಮ ಹೊಣೆ ನಿಭಾಯಿಸುತ್ತವೆ?

ವರದಿಗಾರರು, ಕ್ಯಾಮರಾ ಮನೆ ಗಳು ಮತ್ತು ಪೋಟೋ ಜರ್ನಲಿಸ್ಟ್ ಗಳಿಗೆ ಕೊರೋನಾ ತಾಗಿದೆ.  ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯಂತೆ ಪತ್ರಕರ್ತರು ಸಹ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನದ ಘಟನಾವಳಿಗಳನ್ನು ಜನರ ಮುಂದ ಕಟ್ಟಿಕೊಡುತ್ತ ನಿರಂತರವಾಗಿ  ಕೆಲಸ ಮಾಡುತ್ತಿರುವ ಮಂದಿ ಅಭಿನಂದನೆಗೆ ಅರ್ಹರು. ಮುಂಬೈನ ಪತ್ರಕರ್ತರು ಗುಣಮುಖರಾಗಲಿ ಎಂದು ಹಾರೈಸುವುದಷ್ಟೇ ನಮಗೆ ಉಳಿದಿರುವ ದಾರಿ.