ರಾಜ್ಯ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

ವಿಧಾನ ಪರಿಷತ್‌ (ಜು.22) :  ರಾಜ್ಯ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧೇಯಕ ಮಂಡಿಸಿದರು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರ ಗೈರು ಹಾಜರಿಯಲ್ಲಿ ವಿಧೇಯಕ ಅಂಗೀಕರಿಸಲಾಯಿತು.

ಒಟ್ಟಾರೆ ತೂಕವು 1500 ಕಿ.ಗ್ರಾಂ.ಗಳಿಂದ 12 ಸಾವಿರ ಕಿ.ಗ್ರಾಂ. ಇರುವ ಸರಕು ವಾಹನಗಳಿಗೆ ವಿಧಿಸುವ ಪೂರ್ಣಾವಧಿ ತೆರಿಗೆ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ವಿಮೆ: ಇಷ್ಟು ಬೃಹತ್‌ ಮೊತ್ತದ ಪರಿಹಾರ ದೇಶದಲ್ಲೇ ಮೊದಲು..!

ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸರಕು ವಾಹನಗಳ ಒಟ್ಟಾರೆ ತೂಕವು 1500- 2 ಸಾವಿರ ಕಿ.ಗ್ರಾಂ. ಮೀರದಿದ್ದರೆ ಅವುಗಳಿಗೆ 20 ಸಾವಿರ ರು. (ಈ ಹಿಂದೆ 10 ಸಾವಿರ ರು. ಇತ್ತು), 2 ಸಾವಿರ ಕಿ.ಗ್ರಾಂ.ನಿಂದ 3 ಸಾವಿರ ಕಿ.ಗ್ರಾಂ. ಮೀರದಿದ್ದರೆ 30 ಸಾವಿರ ರು. (15 ಸಾವಿರ ರು. ಇತ್ತು), 3 ಸಾವಿರ ಕಿ.ಗ್ರಾಂ.ನಿಂದ 5500 ಕಿ.ಗ್ರಾಂ. ಮೀರದಿದ್ದರೆ 40 ಸಾವಿರ ರು. (20 ಸಾವಿರ ರು. ಇತ್ತು), ಪೂರ್ಣಾವಧಿ ತೆರಿಗೆ ಪಾವತಿಸಬೇಕು. 5000 ಕಿ.ಗ್ರಾಂ.ನಿಂದ 7500 ಕಿ.ಗ್ರಾಂ. ಮೀರದಿದ್ದರೆ 60 ಸಾವಿರ ರು., 750 ಕಿ.ಗ್ರಾಂ.ನಿಂದ 9500 ಕಿ.ಗ್ರಾಂ. ಮೀರದಿದ್ದರೆ 80 ಸಾವಿರ ರು., 9500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ. ಮೀರದಿದ್ದರೆ ಒಂದ ಲಕ್ಷ ರು. ಪೂರ್ಣಾವಧಿ ತೆರಿಗೆ ಪಾವತಿಸಬೇಕು.

ಸಂಚಾರಿ ಕ್ಯಾಂಟೀನ್‌, ಸಂಚಾರಿ ಗ್ರಂಥಾಲಯ ವಾಹನ, ಸಂಚಾರಿ ಕಾರ್ಯಾಗಾರ, ಸಂಚಾರಿ ಕ್ಲಿನಿಕ್‌, ಎಕ್ಸ್‌ರೇ ವಾಹನ, ಕ್ಯಾಷ್‌ ವಾಹನಗಳನ್ನು ಒಳಗೊಂಡ ಸರಕು ವಾಹನಗಳ ಪೈಕಿ 5,500 ಕೆ.ಜಿ.ಯಿಂದ 12 ಸಾವಿರ ಕೆ.ಜಿ.ವರೆಗಿನ ವಾಹನಗಳಿಗೆ ವಿಧಿಸಲಾಗುತ್ತಿದ್ದ 1,800 ರು. ತ್ರೈಮಾಸಿಕ ತೆರಿಗೆಯನ್ನು ಕೈಬಿಡಲಾಗಿದೆ. ಹಾಗೆಯೇ ಶಾಲೆಗಳ ಒಡೆತನದಲ್ಲಿರುವ ಮತ್ತು ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಪ್ರಯಾಣಕ್ಕಾಗಿ ಮಾತ್ರ ಓಮ್ನಿ ಬಸ್‌ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫೆä್ಲೕರ್‌ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 20 ರು.ನಿಂದ 100 ರು.ಗಳಿಗೆ ಹೆಚ್ಚಿಸಲಾಗಿದೆ.

ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿರುವ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಯಾಣದ ಸಲುವಾಗಿ ಮಾತ್ರ ಓಮ್ನಿ ಬಸ್‌ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫೆä್ಲೕರ್‌ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 80 ರು.ಗಳಿಂದ 200 ರು.ಗಳೆ ಏರಿಕೆ ಮಾಡಲಾಗಿದೆ.

ವಿಪಕ್ಷಗಳಿಗೆ ಹೊಟ್ಟೆಯುರಿ, ಹೀಗಾಗಿ ಕಲಾಪಕ್ಕೆ ಬರ್ತಿಲ್ಲ: ಸಿಎಂ ಸಿದ್ದರಾಮಯ್ಯ