* ದೇವರನಾಡು ಕೇರಳದಲ್ಲಿ ಹೆಚ್ಚಿದ ನಿಪಾ ವೈರಸ್ ಆರ್ಭಟ * ಕರ್ನಾಟಕಕ್ಕೆ ನಿಪಾ ವೈರಸ್ ಭೀತಿ* ಇದರಿಂದ ಅಲರ್ಟ್ ಆಗಿರುವ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

ಬೆಂಗಳೂರು, (ಸೆ.07): ಕೇರಳದಿಂದ ಇಷ್ಟು ದಿನ ಕರ್ನಾಟಕಕ್ಕೆ ಕೊರೋನಾ ಭೀತಿ ಇತ್ತು. ಇದೀಗ ನಿಪಾ ವೈರಸ್ ಆತಂಕ ಶುರುವಾಗಿದೆ.

ಇದರಿಂದ ಅಲರ್ಟ್ ಆಗಿರುವ ರಾಜ್ಯ ಸರ್ಕಾರ, ಕೇರಳದಿಂದ ಕರ್ನಾಟಕಕ್ಕೆ ಅಕ್ಟೋಬರ್ ಅಂತ್ಯದವರೆಗೂ ಆಗಮಿಸದಂತೆ ಮನವಿಪೂರ್ವಕ ಸೂಚನೆ ನೀಡಿದೆ. ಅಲ್ಲದೇ ವಿದ್ಯಾರ್ಥಿಗಳು, ಉದ್ಯೋಗಿಗಳು ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣ ಮುಂದೂಡುವಂತೆ ಸರ್ಕಾರ ತಿಳಿಸಿದೆ.

ಕೊರೋನಾ ಜೊತೆಗೆ ಈಗ ಕೇರಳಕ್ಕೆ ಮಾರಕ ನಿಪಾ ವೈರಸ್ ಗಂಡಾಂತರ!

ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು, ಹೋಟೆಲ್, ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಕಾರ್ಖಾನೆ, ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಸೂಚನೆ ರವಾನಿಸಿದೆ.

ರಾಜ್ಯ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಎಂದಿಗಿಂತ ಹೆಚ್ಚು ನಿಗಾ ವಹಿಸಲು ತಿಳಿಸಲಾಗಿದೆ.

Scroll to load tweet…

 ಜ್ವರ, ಕೆಮ್ಮು, ಶೀತ ಮೈಕೈ ನೋವು ಕಂಡುಬಂದವರ ಮೇಲೆ ನಿಗಾ ಇಡಿ. ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಜಾಗೃತಿ ಮೂಡಿಸಿ. ಆನಾರೋಗ್ಯವಿರುವವರ ಸ್ಯಾಂಪಲ್ಸ್ ಸಂಗ್ರಹಿಸುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.