ಡಿ ಬಾಸ್‌ಗೆ ಸಾಕಿದ ಕುತ್ತೆಗಳಿಂದ ಕುತ್ತು , ಮತ್ತೊಮ್ಮೆ ವಿಚಾರಣೆ ಬರುವಂತೆ ಸೂಚನೆ
ನಟ ದರ್ಶನ್ ಮನೆ ನಾಯಿ ಪಕ್ಕದ ಮನೆ ಮಹಿಳೆಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಸಿದಂತೆ ನಾಯಿ ನೋಡಿಕೊಳ್ಳುತ್ತಿದ್ದ ಹೇಮಂತ್ ಎಂಬಾತನನ್ನು ಠಾಣೆಗೆ ಕರೆಯಿಸಿಕೊಂಡು ಹೇಳಿಕೆ ದಾಖಲಿಸಿಕೊಂಡ ರಾಜರಾಜೇಶ್ವರಿನಗರ ಪೊಲೀಸರು.

ಬೆಂಗಳೂರು (ನ.2): ನಟ ದರ್ಶನ್ ಮನೆ ನಾಯಿ ಪಕ್ಕದ ಮನೆ ಮಹಿಳೆಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಸಿದಂತೆ ನಾಯಿ ನೋಡಿಕೊಳ್ಳುತ್ತಿದ್ದ ಹೇಮಂತ್ ಎಂಬಾತನನ್ನು ಠಾಣೆಗೆ ಕರೆಯಿಸಿಕೊಂಡು ಹೇಳಿಕೆ ದಾಖಲಿಸಿಕೊಂಡ ರಾಜರಾಜೇಶ್ವರಿನಗರ ಪೊಲೀಸರು.
ಪೊಲೀಸರ ಮುಂದೆ ಹೇಮಂತ್ ಹೇಳಿದ್ದೇನು?
ನಟ ದರ್ಶನ್ ಮನೆಯ ನಾಯಿ ಪಕ್ಕದ ಮನೆ ಮಹಿಳೆ ಮೇಲೆ ದಾಳಿ ನಡೆಸಿ ಕಚ್ಚಿ ಗಂಭೀರ ಗಾಯಗೊಳಿಸಿದೆ ಈ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಹೇಮಂತ್, ನಾವು ಉದ್ದೇಶಪೂರ್ವಕವಾಗಿ ನಾಯಿ ಹೊರಗೆ ಬಿಟ್ಟಿಲ್ಲ, ಅದು ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದಿದ್ದಾರೆ. ಹೇಳಿಕೆ ಪಡೆದುಕೊಂಡ ಬಳಿಕ ಮತ್ತೊಮ್ಮೆ ಕರೆದಾಗ ವಿಚಾರಣೆಗೆ ಬರಬೇಕು ಎಂದು ಸೂಚಿಸಿರುವ ಪೊಲೀಸರು. ಹೇಮಂತ್ ಬಳಿಕ ನಟ ದರ್ಶನ್ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು. ಮಹಿಳೆಯನ್ನು ವಿಚಾರಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ಮಹಿಳೆ ನಟ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ದರ್ಶನ್ ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆ. ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
'ಡಿ ಬಾಸ್' ಪುತ್ರ ವಿನೀಶ್‌ಗೆ ಹುಟ್ಟುಹಬ್ಬದ ಸಂಭ್ರಮ: ಅವನ ಉತ್ಸಾಹವನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದ ವಿಜಯಲಕ್ಷ್ಮೀ!
ಹಿನ್ನೆಲೆ:
ದರ್ಶನ್ ಮನೆ ಬಳಿ ಕಾರ್ ಪಾರ್ಕ್ ಮಾಡಿದ್ದ ಮಹಿಳೆ. ಕಾರನ್ನು ತೆಗೆದುಕೊಂಡು ಹೋಗಲು ಬಂದ ವೇಳೆ ಕಾರ್ ಬಳಿ ದರ್ಶನ್ ಮನೆಯಲ್ಲಿ ಸಾಕಲಾಗಿದ್ದ ಮೂರು ನಾಯಿಗಳು ಇದ್ದವು. ಈ ನಾಯಿಗಳನ್ನು ಹಿಡಿದುಕೊಳ್ಳಿ ನಾನು ಕಾರನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ನಾಯಿಗಳ ಕೇರ್ ಟೇಕರ್ ಗೆ ಹೇಳಿದ್ದ ಮಹಿಳೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡದೇ ಸುಮ್ಮನೇ ನಿಂತಿದ್ದಕ್ಕೆ ಮಹಿಳೆ ಕೋಪಗೊಂಡು ವಾಗ್ವಾದ ನಡೆಸಿದ್ದಳು. ಈ ವೇಳೆ ಪಕ್ಕದಲಿದ್ದ ನಾಯಿಗಳು ಮಹಿಳೆಯ ಹೊಟ್ಟೆ ಭಾಗಕ್ಕೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದವು. ಅದರಲ್ಲಿ ಒಂದು ನಾಯಿ ಮಹಿಳೆಯ ಹೊಟ್ಟೆ ಭಾಗಕ್ಕೆ ಕಚ್ಚಿದೆ. ಇದರಿಂದ ಕುಪಿತಗೊಂಡ ಮಹಿಳೆ ದರ್ಶನ್ ಹಾಗೂ ನಾಯಿಗಳನ್ನು ನೋಡಿಕೊಳ್ತಿದ್ದವರ ಮೇಲೂ ಕೇಸ್ ದಾಖಲಿಸಿದ್ದರು. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 289 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕೇಸ್ ಹಿನ್ನೆಲೆ ನಟ ಹಾಗೂ ಹೇಮಂತ್ ವಿರುದ್ಧ ವಿಚಾರಣೆಗೆ ಮುಂದಾಗಿರುವ ಪೊಲೀಸರು.
ನಟ ದರ್ಶನ್ ಮೇಲೆ ದಾಖಲಾಯ್ತು ಎಫ್‌ಐಆರ್: ಹರಿದ ಬಟ್ಟೆಯಲ್ಲಿ ಬಂದು ದೂರು ಕೊಟ್ಟ ಮಹಿಳೆ