ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ, ಅನಾರೋಗ್ಯದಿಂದ ಮೃತಪಟ್ಟ ಲಾರೆನ್ಸ್ ಎಂಬುವವರ ಶವವನ್ನು ಕಂಡು ಅವರ ಪ್ರೀತಿಯ ನಾಯಿ ಕೂಡ ಪ್ರಾಣ ಬಿಟ್ಟಿದೆ. ಮಾಲೀಕನ ಶವದ ಪಕ್ಕದಲ್ಲೇ ಮಲಗಿ ದುಃಖ ವ್ಯಕ್ತಪಡಿಸಿದ ಶ್ವಾನ, ಅಲ್ಲೇ ಕೊನೆಯುಸಿರು., ಈ ಘಟನೆ ಮನುಷ್ಯ-ಪ್ರಾಣಿ ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.

ಭದ್ರಾವತಿ (ನ.4): ಮನೆ ಮಾಲೀಕನ ಮೃತದೇಹ ನೋಡಿ ಆತನ ಪ್ರೀತಿಯ ನಾಯಿ ಕೂಡ ಪ್ರಾಣ ಬಿಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಮಾಲೀಕನ ಶವ ಕಂಡು ಮಲಗಿದ್ದಲ್ಲೇ ಕೊನೆಯುಸಿರು

ಇತ್ತೀಚೆಗೆ ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್ (61) ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಮನೆಗೆ ತಂದಾಗ ನೆಚ್ಚಿನ ಮಾಲೀಕನ ಶವ ಕಂಡು ಶವದ ಪಕ್ಕದಲ್ಲೇ ಮಲಗಿ ತೀವ್ರ ದುಖಃ ವ್ಯಕ್ತಪಡಿಸಿದ ಶ್ವಾನವು ಅಲ್ಲೇ ಕೊನೆಯುಸಿರೆಳೆದಿದೆ.

ಮಾಲೀಕನ ಶವದೊಂದಿಗೆ ಶ್ವಾನದ ಅಂತ್ಯಕ್ರಿಯೆ

ಲಾರೆನ್ಸ್ ಅಂತ್ಯಕ್ರಿಯೆ ಬಳಿಕ ಅವರೊಟ್ಟಿಗೆ ಮೃತಪಟ್ಟ ಶ್ವಾನದ ಮೃತದೇಹವನ್ನು ಮನೆಯ ಹಿಂಭಾಗದಲ್ಲಿಯೇ ಮಣ್ಣು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಯಿ ಜೊತೆ ವಾಕ್ ಮಾಡ್ತೀರಾ ಹುಷಾರ್: ನಿಮ್ಮ ನಾಯಿನೂ ಬಿಡಲ್ಲ ಕಳ್ಳರು: ವೀಡಿಯೋ

ಮನುಷ್ಯರ ಜೊತೆ ಮೂಕ ಪ್ರಾಣಿಗಳು ಸಹ ಬಿಟ್ಟಿರಲಾರದ ಸಂಬಂಧ ಹೊಂದಿರುತ್ತವೆ. ಅದರಲ್ಲೂ ಅವರೊಂದಿಗೆ ಕುಟುಂಬದ ಸದಸ್ಯರಂತೆಯೇ ಬದುಕುತ್ತಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.