Asianet Suvarna News Asianet Suvarna News

ಜಾತಿಗಣತಿ ವರದಿ ಓದದೇ ಅವೈಜ್ಞಾನಿಕ ಎನ್ನದಿರಿ: ಜಯಪ್ರಕಾಶ ಹೆಗ್ಡೆ

ಸರ್ಕಾರ ಕೊಟ್ಟ ಕೆಲಸವನ್ನು ಮಾಡಿದ್ದೇವೆ. ನಮ್ಮ ಮೇಲೆ ಯಾವುದೇ ಒತ್ತಡ ಇರ ಲಿಲ್ಲ. ವರದಿ ಅವೈಜ್ಞಾನಿಕ ಮತ್ತು ಸರಿ ಇಲ್ಲ ಎಂದು ಅದನ್ನು ನೋಡುವ ಮೊದಲೇ ಹೇಳಲು ಹೇಗೆ ಸಾಧ್ಯ? ಓದಿದ ಮೇಲೆ ಪ್ರತಿ ಕ್ರಿಯೆ ನೀಡಬಹುದು. ಈ ಹಿಂದೆ ಒಂದೆರೆಡು ಅಂಶಗಳು ಲೀಕ್ ಆಗಿರಬಹುದು ಎಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ 

Do Not Says Unscientific without Reading the Caste Census Report Says Jayaprakash Hegde grg
Author
First Published Mar 1, 2024, 8:38 AM IST

ಬೆಂಗಳೂರು(ಮಾ.01):  ದತ್ತಾಂಶ ಆಧಾರಿತ ವೈಜ್ಞಾನಿಕ ಜಾತಿಗಣತಿ ವರದಿಯನ್ನು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಯಾವುದೇ ಒತ್ತಡ ಇಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.

ಗುರುವಾರ ವರದಿ ಸಲ್ಲಿಸಿದ ಬಳಿಕಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಕೊಟ್ಟ ಕೆಲಸವನ್ನು ಮಾಡಿದ್ದೇವೆ. ನಮ್ಮ ಮೇಲೆ ಯಾವುದೇ ಒತ್ತಡ ಇರ ಲಿಲ್ಲ. ವರದಿ ಅವೈಜ್ಞಾನಿಕ ಮತ್ತು ಸರಿ ಇಲ್ಲ ಎಂದು ಅದನ್ನು ನೋಡುವ ಮೊದಲೇ ಹೇಳಲು ಹೇಗೆ ಸಾಧ್ಯ? ಓದಿದ ಮೇಲೆ ಪ್ರತಿ ಕ್ರಿಯೆ ನೀಡಬಹುದು. ಈ ಹಿಂದೆ ಒಂದೆರೆಡು ಅಂಶಗಳು ಲೀಕ್ ಆಗಿರಬಹುದು ಎಂದರು. 

News Hour: ಜಾತಿಗಣತಿ ಸ್ವೀಕಾರ.. ‘ಕೈ’ನಲ್ಲೇ ಕಿಚ್ಚು!

'ಮೂಲ ಪ್ರತಿ ನಾಪತ್ತೆಯಾಗಿದೆ ಎನ್ನುವ ಆರೋಪ ಇತ್ತು. ಅದು ಸಿಕ್ಕಿದೆಯೇ?' ಎಂಬ ಸುದ್ದಿಗಾರರ ಪ್ರಶ್ನೆಗೆ, 'ಮೂಲಪ್ರತಿ ನಾಪತ್ತೆ ಯಾಗಿಲ್ಲ ಎಂದು ನಾವು ಹೇಳಿಲ್ಲ. ಹಸ್ತಪ್ರತಿ ನಾಪತ್ತೆಯಾಗಿತ್ತು. ಆದರೆ, ಈಗ ನಾವು ಬರೆದಿದ್ದೇವೆ' ಎಂದರು. 'ನಾಪತ್ತೆಯಾಗಿದ್ದ ಪ್ರತಿ ಸಿಕ್ಕಿ ದೆಯೇ?' ಎಂಬ ಪ್ರಶ್ನೆಗೆ, 'ಅದು ಸಿಕ್ಕಿದೆಯೋ, ಬಿಟ್ಟಿದೆಯೋ ಬೇರೆ. ಆದರೆ, ವರದಿ ಇದೆ' ಎಂದರು. ವರದಿಯ ಮೇಲೆ ಕಾವ್ಯದರ್ಶಿ ಸಹಿ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ಸದಸ್ಯರು, ಸದಸ್ಯ ಕಾವ್ಯದರ್ಶಿ ಸೇರಿ ಎಲ್ಲರೂ ಸಹಿ ಮಾಡಿದ್ದಾರೆ. ಅವರು ಕೂಡ ವರದಿ ಸಲ್ಲಿಕೆ ವೇಳೆ ಇದ್ದರು ಎಂದು ಹೇಳಿದರು.

ಗಣತಿ ವೇಳೆ ನನ್ನನ್ನಂತೂ ಸಂದರ್ಶನ ಮಾಡಿಲ್ಲ

ತುಮಕೂರು: ಸರ್ಕಾರ ನಡೆಸಿರುವ ಜಾತಿಗಣತಿ ಮಾಡಲು ಸಾಧ್ಯವಿಲ್ಲ, ಆದರೆ ಗಣತಿಯು ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಇದೀಗ ವೈಜ್ಞಾನಿಕವಾಗಿ ಆಗಿಲ್ಲ, ವ್ಯಾಪಕವಾಗಿ ಎಲ್ಲ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ ಗಳು ಕೂಡ ಪರೋಕ್ಷವಾಗಿ ಹೇಳಿದ್ದಾರೆ. ಜಾತಿ ಗಣತಿ ಮಾಡುವಾಗ ಎಲ್ಲರನ್ನು ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ. ರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ ಎಂದರು. ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ. ನನ್ನನ್ನಂತೂ ಯಾರೂ ಬಂದು ಸಂದರ್ಶನ ಮಾಡಿಲ್ಲ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ ಎಂದ ಅವರು, ಎಲ್ಲ ರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತದೆ ಎಂದರು.

Follow Us:
Download App:
  • android
  • ios