Asianet Suvarna News Asianet Suvarna News

Karnataka Assembly Elections 2023: ನಾಳೆಯೇ ಓಟು, ಮಿಸ್‌ ಮಾಡ್ಬೇಡಿ, ಪ್ರತಿ ಮತವೂ ಅಮೂಲ್ಯ..!

ಮಳೆ ಸಾಧ್ಯತೆ ಇದೆ. ಹಾಗಂತ ಉದಾಸೀನ ಮಾಡದೆ ಮತ ಚಲಾಯಿಸಿರಿ, ಬೇರೆ ಊರಿನಲ್ಲಿ ನಿಮ್ಮ ಮತವಿದ್ದರೆ ಇಂದೇ ಹೋಗುವ ಸಿದ್ಧತೆ ಮಾಡಿಕೊಳ್ಳಿ, ಸ್ನೇಹಿತರು, ಅಕ್ಕಪಕ್ಕದವರು ಹಾಗೂ ಬಂಧುಗಳಿಗೂ ಮತದಾನಕ್ಕೆ ಪ್ರೇರೇಪಿಸಿ. 

Do Not Miss Caste your Vote of Karnataka Assembly Elections 2023 grg
Author
First Published May 9, 2023, 7:03 AM IST

ಬೆಂಗಳೂರು(ಮೇ.09):  ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನಕ್ಕೆ ಇನ್ನು ಒಂದೇ ದಿನ ಬಾಕಿ. ಮೇ 10, ಇದು ನೀವು ನಿಮ್ಮ ಜನಪ್ರತಿನಿಧಿಯನ್ನು ಆರಿಸುವ ದಿನ. ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಲ್ಲ, ನಿಮಗೆ ಸಮರ್ಥರು ಎನಿಸಿದ ಅಭ್ಯರ್ಥಿಯನ್ನು ಆರಿಸಲು ಇದೊಂದೇ ಅವಕಾಶ. ‘ನನ್ನ ಒಂದು ಮತದಿಂದ ಏನು ಮಹಾ ಆದೀತು’ ಎಂಬ ಭಾವನೆ ತಾಳದಿರಿ, ‘ಪ್ರತಿ ಮತವೂ ಅಮೂಲ್ಯ. ಅದರಲ್ಲಿ ನನ್ನದೂ ಒಂದು’ ಎಂಬುದನ್ನು ನೆನಪಿಡಿ. ತಪ್ಪದೇ ಮತ ಚಲಾಯಿಸಿ.

ಮನೆಯಿಂದಲೇ ಮತಕ್ಕೆ ನೋಂದಣಿ ಮಾಡಿದ್ದ 33 ಮಂದಿ ಸಾವು: 2,282 ವೃದ್ಧರು, ವಿಶೇಷ ಚೇತನರಿಂದ ಮತ ಚಲಾವಣೆ

- ನಿಮ್ಮ ಮತದಾರರ ಗುರುತಿನ ಚೀಟಿಯನ್ನು (ವೋಟರ್‌ ಐಡಿ) ತೆಗೆದಿಟ್ಟುಕೊಳ್ಳಿ
- ವೋಟರ್‌ ಐಡಿ ಇಲ್ಲದಿದ್ರೆ 12 ಗುರುತಿನ ಚೀಟಿಗಳಲ್ಲಿ ಯಾವುದಾದ್ರೂ ಬಳಸಿ
- nvsp.in ಅಥವಾ chunavana ಆ್ಯಪ್‌ ಬಳಸಿ ನಿಮ್ಮ ಹೆಸರನ್ನು ಖಾತ್ರಿಪಡಿಸಿ
- ವೆಬ್‌ಸೈಟ್‌ ಅಥವಾ ಆ್ಯಪ್‌ ಬಳಸಲು ಗೊತ್ತಾಗದವರು 1950ಗೆ ಕರೆ ಮಾಡಿ
- ನೀವು ಮತದಾನ ಮಾಡಬೇಕಾದ ವಿಧಾನಸಭಾ ಕ್ಷೇತ್ರದ ಕುರಿತೂ ಅರಿವಿರಲಿ
- ನೀವು ಮತ ಚಲಾಯಿಸಬೇಕಾದ ಮತಗಟ್ಟೆಯಾವುದು ಎಂದು ತಿಳಿದುಕೊಳ್ಳಿ
- ನಾಳೆ ಸಾರ್ವತ್ರಿಕ ರಜೆ. ಹಾಗೆಂದು ಮತ ಹಾಕದೆ ಸುತ್ತಾಡಲು ಹೋಗದಿರಿ
- ಸ್ಪರ್ಧಿಸುತ್ತಿರುವ ಅಭ್ಯರ್ಥಿ ಕುರಿತೂ ಮಾಹಿತಿ ಇರಲಿ. ಸಮರ್ಥರನ್ನು ಆರಿಸಿ
- ಮಳೆ ಸಾಧ್ಯತೆ ಇದೆ. ಹಾಗಂತ ಉದಾಸೀನ ಮಾಡದೆ ಮತ ಚಲಾಯಿಸಿರಿ
- ಬೇರೆ ಊರಿನಲ್ಲಿ ನಿಮ್ಮ ಮತವಿದ್ದರೆ ಇಂದೇ ಹೋಗುವ ಸಿದ್ಧತೆ ಮಾಡಿಕೊಳ್ಳಿ
- ಸ್ನೇಹಿತರು, ಅಕ್ಕಪಕ್ಕದವರು ಹಾಗೂ ಬಂಧುಗಳಿಗೂ ಮತದಾನಕ್ಕೆ ಪ್ರೇರೇಪಿಸಿ

Follow Us:
Download App:
  • android
  • ios