Asianet Suvarna News Asianet Suvarna News

ಕೇರಳ ಸಿಎಂ ಪುತ್ರಿ ವೀಣಾ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಎರಡು ಕಂಪನಿಗಳ ನಡುವಿನ ಆರ್ಥಿಕ ವಹಿವಾಟುಗಳು ಅನುಮಾನಾಸ್ಪದವಾಗಿದ್ದು, ಆ ಕುರಿತು ತನಿಖೆ ನಡೆಸುವಂತೆ ಎಸ್‌ಎಫ್‌ಐಒಗೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಯ ನಿರ್ದೇಶಕಿ ವೀಣಾ ಪಿಣರಾಯಿ ವಿಜಯನ್‌ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

Do Not Coercive action against Kerala CM's Daughter Veena Says High Court of Karnataka grg
Author
First Published Feb 13, 2024, 6:56 AM IST

ಬೆಂಗಳೂರು(ಫೆ.13):  ಬೆಂಗಳೂರಿನ ಐಟಿ ಕಂಪನಿ ಎಕ್ಸಾಲಜಿಕ್ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಕೊಚ್ಚಿನ್ ಮಿನರಲ್ಸ್‌- ರುಟೈಲ್ ಲಿಮಿಟೆಡ್‌ ನಡುವಿನ ಆರ್ಥಿಕ ವಹಿವಾಟುಗಳ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಕೇಂದ್ರ ಸರ್ಕಾರದ ಅಧೀನದ ಗಂಭೀರ ವಂಚನೆಗಳ ತನಿಖಾ ಕಚೇರಿಗೆ (ಎಸ್‌ಎಫ್‌ಐಒ) ಹೈಕೋರ್ಟ್‌ ಸೂಚಿಸಿದೆ. 

ಎರಡು ಕಂಪನಿಗಳ ನಡುವಿನ ಆರ್ಥಿಕ ವಹಿವಾಟುಗಳು ಅನುಮಾನಾಸ್ಪದವಾಗಿದ್ದು, ಆ ಕುರಿತು ತನಿಖೆ ನಡೆಸುವಂತೆ ಎಸ್‌ಎಫ್‌ಐಒಗೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಯ ನಿರ್ದೇಶಕಿ ವೀಣಾ ಪಿಣರಾಯಿ ವಿಜಯನ್‌ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರು ಎಸ್‌ಎಫ್‌ಐಒಗೆ ಒದಗಿಸಬೇಕು. ಅರ್ಜಿದಾರರ ವಿರುದ್ಧ ಬಂಧನದಂತಹ ಯಾವುದೇ ಬಲವಂತದ ಕ್ರಮವನ್ನು ಎಸ್‌ಫ್‌ಐಒ ಕೈಗೊಳ್ಳಬಾರದು ಎಂದು ಸೂಚಿಸಿರುವ ನ್ಯಾಯಪೀಠ ವಿಚಾರಣೆ ಮುಂದೂಡಿತು.

ನಾಡಗೀತೆ ನಿಯಮ ಖಾಸಗಿ ಶಾಲೆಗೂ ಅನ್ವಯವೇ? ಸ್ಪಷ್ಟನೆ ಕೇಳಿದ ಹೈಕೋರ್ಟ್‌

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಕಂಪನಿಗಳ ನಡುವಿನ ಆರ್ಥಿಕ ವ್ಯವಹಾರದ ಮಾಹಿತಿ ನೀಡದಿರುವುದು ವಂಚನೆಯಾಗುವುದಿಲ್ಲ. ಯಾವುದೇ ಅಪರಾಧ ಎಸಗದಿದ್ದರೂ ಅರ್ಜಿದಾರರ ವಿರುದ್ಧ ಎಸ್‌ಎಫ್‌ಓ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಪರ ವಕೀಲರು, ಕೊಚ್ಚಿನ್ ಮಿನರಲ್ಸ್ ಕಂಪನಿ ಅರ್ಜಿದಾರರ ಆಪೇಕ್ಷೆಯಂತೆ 135 ಕೋಟಿ ರು. ರಾಜಕೀಯ ವ್ಯಕ್ತಿಗಳಿಗೆ ನೀಡಿದೆ ಹಾಗೂ ಸಾಫ್ಟ್‌ವೇರ್‌ ಸೇವೆಗೆಂದು 1.72 ಕೋಟಿ ರು. ನೀಡಿದೆ. ಆದರೆ, ವಾಸ್ತವವಾಗಿ ಯಾವುದೇ ಸೇವೆ ನೀಡದಿದ್ದರೂ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್ ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಈ ಎರಡು ಕಂಪನಿಗಳ ನಡುವಿನ ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿವೆ ಎಂದು ಆರೋಪಿಸಿದರು.

ಚುನಾವಣೆ ವೇಳೆ ಮತದಾರರಿಗೆ ಉಚಿತ ಭಾಗ್ಯಗಳ ಆಮಿಷ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಕಂಪನಿಗಳ ನಡುವಿನ ಆರ್ಥಿಕ ವ್ಯವಹಾರದ ಮಾಹಿತಿ ನೀಡದಿರುವುದು ವಂಚನೆಯಾಗುವುದಿಲ್ಲ. ಯಾವುದೇ ಅಪರಾಧ ಎಸಗದಿದ್ದರೂ ಅರ್ಜಿದಾರರ ವಿರುದ್ಧ ಎಸ್‌ಎಫ್‌ಓ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಪರ ವಕೀಲರು, ಕೊಚ್ಚಿನ್ ಮಿನರಲ್ಸ್ ಕಂಪನಿ ಅರ್ಜಿದಾರರ ಆಪೇಕ್ಷೆಯಂತೆ 135 ಕೋಟಿ ರು. ರಾಜಕೀಯ ವ್ಯಕ್ತಿಗಳಿಗೆ ನೀಡಿದೆ ಹಾಗೂ ಸಾಫ್ಟ್‌ವೇರ್‌ ಸೇವೆಗೆಂದು 1.72 ಕೋಟಿ ರು. ನೀಡಿದೆ. ಆದರೆ, ವಾಸ್ತವವಾಗಿ ಯಾವುದೇ ಸೇವೆ ನೀಡದಿದ್ದರೂ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್ ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಈ ಎರಡು ಕಂಪನಿಗಳ ನಡುವಿನ ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿವೆ ಎಂದು ಆರೋಪಿಸಿದರು.

Follow Us:
Download App:
  • android
  • ios