ಡಿಕೆ ಶಿವಕುಮಾರ್ ಮೇಲೆ ಕೇಸ್ ಕೊಡುವಾಗ ನಿಯಮ ಪಾಲನೆ ಮಾಡಿಲ್ಲ. ಅಂದಿನ ಸಿಎಂ ಮೌಖಿಕವಾಗಿ ಆದೇಶ ಮಾಡಿದ್ರು. ಅಂದಿನ ಸರ್ಕಾರ ಅಡ್ವೋಕೇಟ್ ಜನರಲ್ ಅಭಿಪ್ರಾಯ ಯಾಕೆ ತೆಗೆದುಕೊಂಡಿಲ್ಲ? ಸ್ಪೀಕರ್ ಅನುಮತಿ ಯಾಕೆ ಪಡೆದಿಲ್ಲ? ತಾಂತ್ರಿಕವಾಗಿ ಅವರು ತಪ್ಪು ಮಾಡಿದ್ದಾರೆ. ಅವರು ಮಾಡಿದ್ದು ತಪ್ಪು ಅಂತಾ ನಾವು ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ ಎಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು (ನ.24): ಭ್ರಷ್ಟಾಚಾರಿಗಳು ಇರುವ ಪಕ್ಷ ಅಂದರೆ ಅದು ಬಿಜೆಪಿ. ಬಿಜೆಪಿ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.

ಡಿಕೆ ಶಿವಕುಮಾರ್ ಕೇಸ್ ವಾಪಸ್ ಪಡೆದ ಪ್ರಕರಣ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮೇಲೆ ಕೇಸ್ ಕೊಡುವಾಗ ನಿಯಮ ಪಾಲನೆ ಮಾಡಿಲ್ಲ. ಅಂದಿನ ಸಿಎಂ ಮೌಖಿಕವಾಗಿ ಆದೇಶ ಮಾಡಿದ್ರು. ಅಂದಿನ ಸರ್ಕಾರ ಅಡ್ವೋಕೇಟ್ ಜನರಲ್ ಅಭಿಪ್ರಾಯ ಯಾಕೆ ತೆಗೆದುಕೊಂಡಿಲ್ಲ? ಸ್ಪೀಕರ್ ಅನುಮತಿ ಯಾಕೆ ಪಡೆದಿಲ್ಲ? ತಾಂತ್ರಿಕವಾಗಿ ಅವರು ತಪ್ಪು ಮಾಡಿದ್ದಾರೆ. ಅವರು ಮಾಡಿದ್ದು ತಪ್ಪು ಅಂತಾ ನಾವು ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ ಎಂದರು.

ಸಿಬಿಐ ಅವರು ಮೇಲ್ಮನವಿಗೆ ಹೋಗೋಕೆ ಅವಕಾಶ ಇದ್ದರೆ ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ಹೋಗಲಿ. ನಾವು ಮಾಡಿದ ನಿರ್ಧಾರ ಸರಿಯಾಗಿದೆ. ಸರಿಯಾಗಿ ಇದೆ ಅಂತಾನೇ ಕೇಸ್ ವಾಪಸ್ ಪಡೆದಿರೋದು. ದೇಶದಲ್ಲಿ ಭ್ರಷ್ಟಾಚಾರಿಗಳು ತುಂಬಿ ತುಳುಕುತ್ತಿರೋ ಪಕ್ಷ ಎಂದರೆ ಬಿಜೆಪಿ ಪಕ್ಷ. ಐಟಿ, ಇಡಿ, ಸಿಬಿಐ ಬಳಸಿಕೊಂಡು ಹೇಗೆಲ್ಲ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂಬುದು ಗೊತ್ತಿದೆ. ಅಧಿಕಾರಕ್ಕೆ ಬಂದು ಒಂಬತ್ತೂವರೆ ವರ್ಷ ಏನ್ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯಂತಹ ಭ್ರಷ್ಟಾಚಾರ ಪಕ್ಷ ಮತ್ತೊಂದಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ