ಬಿಜೆಪಿ, ದಳಕ್ಕೆ ವೋಟು ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದು: ಡಿಕೆಶಿ ಎಚ್ಚರಿಕೆ!
ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾದಾಗ ರಾಜ್ಯ ದಿವಾಳಿ ಆಗುತ್ತೆ ಅಂತಾ ಬೊಬ್ಬೆ ಹೊಡೆದಿದ್ದ ಬಿಜೆಪಿಯವರು ಇದೀಗ ಅವರೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಬಿಜೆಪಿ ಅಥವಾ ದಳಕ್ಕೆ ವೋಟು ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ ಎಚ್ಚರಿಕೆ ನೀಡಿದರು.

ಬೆಂಗಳೂರು (ನ.19): ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾದಾಗ ರಾಜ್ಯ ದಿವಾಳಿ ಆಗುತ್ತೆ ಅಂತಾ ಬೊಬ್ಬೆ ಹೊಡೆದಿದ್ದ ಬಿಜೆಪಿಯವರು ಇದೀಗ ಅವರೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಬಿಜೆಪಿ ಅಥವಾ ದಳಕ್ಕೆ ವೋಟು ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ ಎಚ್ಚರಿಕೆ ನೀಡಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ 106ನೆಯ ಜನ್ಮ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಾನು ಡಿಸಿಎಂ ಆದಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ತಂದ್ರೆ ಸಾಕು ಅಂದ್ರು. ಆದರೆ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಹಾಸನಾಂಬೆ ಜಾತ್ರಾ ಸಂಧರ್ಭದಲ್ಲಿ ಹದಿನಾಲ್ಕು ಕೋಟಿ ಆದಾಯ ಬಂದಿದೆ. ಬಸ್ ಫ್ರೀ ಕೊಟ್ಟಿದ್ದರಿಂದಲೇ ಇಷ್ಟೊಂದು ಆದಾಯ ಜಾಸ್ತಿ ಆಗಿದೆ. ಗೃಹ ಲಕ್ಷ್ಮಿ ಯೋಜನೆ ಟೆಕ್ನಿಕಲ್ ಸಮಸ್ಯೆಯಿಂದ ಏಳು ಪರ್ಸೆಂಟ್ ಜನರಿಗೆ ತಲುಪಿಲ್ಲ. ಉಳಿದೆಲ್ಲರಿಗೂ ಯೋಜನೆ ತಲುಪಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಯುವನಿಧಿ ಕೂಡಾ ಜಾರಿಗೆ ತರ್ತೀವಿ. ಈ ಬಗ್ಗೆ ಜನರಿಗೆ ನೀವೆಲ್ಲ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.
'ಅನ್ನ ಹಳಸಿತ್ತು, ನಾಯಿ ಹಸಿದಿತ್ತು' ಎಚ್‌ಡಿಕೆ ವಿರುದ್ಧ ಸಿಎಂ ಕಿಡಿ
ಕಾರ್ಯಕರ್ತರಿಗೆ ಗದರಿಸುವ ಭರದಲ್ಲಿ ಡಿಕೆಶಿ ಎಡವಟ್ಟು:
ಕಾರ್ಯಕ್ರಮದಲ್ಲಿ ಮಾತಾಡುವ ವೇಳೆ ನಿರಂತರವಾಗಿ ಜೈಕಾರ ಹಾಕುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಡಿಕೆ ಶಿವಕುಮಾರ ಒಂದು ಕ್ಷಣ ಸಿಡಿಮಿಡಿಗೊಂಡರು. ಎಲ್ಲಾ ಜೈಕಾರ ನಿಲ್ಲಿಸ್ರಿ ಸಾಕು. ಹೋಗಿ ಬಿಜೆಪಿ ದಳ ಕಾರ್ಯಕ್ರಮದಲ್ಲಿ ಜೈಕಾರ ಹಾಕಿ ಎಂದ ಡಿಕೆ ಶಿವಕುಮಾರ. ಇದೇನಪ್ಪ ಅವರು ಪಾರ್ಟಿಗೆ ಹೋಗಿ ಜೈಕಾರ ಹಾಕ್ರಿ ಅಂತಿದ್ದಾರಲ್ಲ.. ಅಂತಾ ಬ್ಬಿಬ್ಬಾದ ಕಾರ್ಯಕರ್ತರು. ಬಳಿಕ ಹೇಳಿರೋದರಲ್ಲಿ ಎಡವಟ್ಟಾಗಿರೋದು ಅರಿತು ತಪ್ಪು ಸರಿಪಡಿಸಿಕೊಂಡು ನಿಮ್ಮ ಹೋರಾಟ ಏನಾದ್ರೂ ಇದ್ರೆ ಅದು ಬಿಜೆಪಿ ಹಾಗೂ ದಳದವರ ಮೇಲೆ ಇರಬೇಕು. ಇಲ್ಲಿ ಸುಮ್ಮನೆ ಜೈಕಾರ ಹಾಕೋದಲ್ಲ ಎಂದರು.
ಕುಮಾರಸ್ವಾಮಿ ಹೇಳೋದೆಲ್ಲ ಶೇ. 99 ಸುಳ್ಳು, ಜೆಡಿಎಸ್ ಸೆಕ್ಯುಲರ್ ಆಗಿಲ್ಲ: ಸಿಎಂ ಸಿದ್ದರಾಮಯ್ಯ
ಟೀ ಇಂಡಿಯಾ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ:
ವಿಶ್ವಕಪ್ ಗೆದ್ದೇ ಗೆಲ್ತಾರೆ. ಇವತ್ತು ಮನೆಗೆ ಹೋಗಿ ಕುಟುಂಬದ ಜೊತೆಗೆ ಕುಳಿತು ಪಂದ್ಯ ನೋಡುತ್ತೇನೆ. ನನ್ನ ಮಗ ಪಂದ್ಯ ನೋಡಲು ಹೋಗಿದ್ದಾನೆ. ನನಗೂ ಕೆಎಸ್‌ಇಎ ಆಹ್ವಾನ ನೀಡಿತ್ತು. ನಾನು ಕಾರ್ಯಕ್ರಮ ಇರುವ ಕಾರಣಕ್ಕೆ ಬಂದಿದ್ದೇನೆ. ಪಂದ್ಯವನ್ನು ಮನೆಯಲ್ಲಿ ಕುಟುಂಬದವರ ಜೊತೆಗೆ ವೀಕ್ಷಣೆ ಮಾಡ್ತೇನೆ. ಇಂದು ಭಾರತ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.