ಕುಮಾರಸ್ವಾಮಿ ಹೇಳೋದೆಲ್ಲ ಶೇ. 99 ಸುಳ್ಳು, ಜೆಡಿಎಸ್ ಸೆಕ್ಯುಲರ್ ಆಗಿಲ್ಲ: ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳೋದೆಲ್ಲಾ ಶೇ.99.999 ಪರ್ಸೆಂಟ್ ಸುಳ್ಳು. ನಾನು ಇದ್ದಾಗ ಜೆಡಿಎಸ್‌ನಲ್ಲಿ ಸೆಕ್ಯೂಲರ್ ಉಳಿದಿತ್ತು. ಈಗ ಸೆಕ್ಯೂಲರ್ ಉಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ನ.15): ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳೋದೆಲ್ಲಾ ಶೇ.99.9999 ಪರ್ಸೆಂಟ್ ಸುಳ್ಳು. ಜೆಡಿಎಸ್ ಈಗ ಬಿಜೆಪಿ ಜೊತೆ ಹೋಗಿದ್ದಾರೆ. ಹಾಗಾಗಿ ಅವರಾಗಿಯೇ ಸೆಕ್ಯೂಲರ್ ಅನ್ನು ತೆಗೆದು ಹಾಕಿದರೆ ಒಳ್ಳೆಯದು, ಇಲ್ಲದಿದ್ದರೆ ಜನರೇ ಅದನ್ನ ತೆಗೆದು ಹಾಕುತ್ತಾರೆ. ನಾನು ಇದ್ದಾಗ ಜೆಡಿಎಸ್ ಸೆಕ್ಯುಲರ್ ಆಗಿತ್ತು, ಈಗ ಸೆಕ್ಯುಲರ್ ಆಗಿ ಉಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಮಾಜಿ ಶಾಸಕ ಮಂಜುನಾಥ್ ಹಾಗೂ ಶಾಸಕ ಗೌರಿಶಂಕರ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಈ ಕ್ಷಣದವರೆಗೆ ಗೌರಿಶಂಕರ್ ಜೆಡಿಎಸ್ ಪಕ್ಷದಲ್ಲಿ ಇದ್ದರು. ಜೆಡಿಎಸ್ ಪಕ್ಷ ಕೂಡ ಕೋಮುವಾದಿ ಪಕ್ಷ ಆಗತ್ತದೆಂದು ಅರಿತು ಜಾತ್ಯಾತೀತ ಪಕ್ಷ ಕಾಂಗ್ರೆಸ್ ಸೇರಿದ್ದಾರೆ. ಅವರನ್ನ ನಾನು ಸ್ವಾಗತ ಮಾಡುತ್ತೇನೆ. ಇವರು ತುಮಕೂರು ಗ್ರಾಮಾಂತರ ಶಾಸಕರಾಗಿದ್ದಾರೆ. ಇನ್ನು ದಾಸರಹಳ್ಳಿ ಮಾಜಿ ಶಾಸಕರು, ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನಲ್ಲಿ ಸೆಕ್ಯೂಲರ್ (ಎಸ್) ಅಕ್ಷರವನ್ನು ನಾವು ಹೇಳೋ ಹಾಗಿಲ್ಲ. ಈಗ ಅದು ಸೆಕ್ಯುಲರ್ ಆಗಿ ಉಳಿದಿಲ್ಲ. ಹಾಗಾಗಿ ಕೋಮುವಾದಿ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಹೇಳಿದರು.
ಪೊಲೀಸರ ಮುಂದೆ ಹೇಳಿಕೆ ಕೊಟ್ಟ ನಟ ದರ್ಶನ್: ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್ ಆಗ್ತಿರಲಿಲ್ಲ
ನಾನು ಹಿಂದೆ ರಾಹುಲ್ ಗಾಂಧಿ ಕಿವಿಯಲ್ಲಿ ಹೇಳಿದ್ದೆನು. ಜನತಾದಳ ಬಿಜೆಪಿ 'ಬಿ' ಟೀಮ್ ಅಂತ. ಆಗ ಕುಮಾರಸ್ವಾಮಿ, ದೇವೆಗೌಡರು ನನ್ನ ಮೇಲೆ ಕೆಂಡಾಮಂಡಲ ಆಗಿದ್ದರು. ಈಗ ಅಧಿಕೃತವಾಗಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿ ಜೊತೆ ಹೋದಾಗಲೇ ಜೆಡಿಯು ಹಾಗೂ ಜೆಡಿಎಸ್ ಆಯ್ತು. ನಾನು ಇದ್ದಾಗ ಜೆಡಿಎಸ್ ಸೆಕ್ಯುಲರ್ ಆಗಿತ್ತು, ಈಗ ಸೆಕ್ಯುಲರ್ ಆಗಿ ಉಳಿದಿಲ್ಲ. ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದ ಜೊತೆ ಸಂಬಂಧ ಇಟ್ಟುಕೊಳ್ಳಬಾರದು ಅಂದುಕೊಂಡವನು. ಆದರೆ ನನ್ನನ್ನೇ ಪಕ್ಷದಿಂದ ತೆಗೆದು ಬಿಜೆಪಿ ಜೊತೆಗೆ ಸರ್ಕಾರ ಮಾಡಿದರು.
ಜೆಡಿಎಸ್ ಪಾರ್ಟಿ ಏನಿಲ್ಲಾ, ಅದು ಪಾರ್ಟಿ ಆಫ್ ದಿ ಫ್ಯಾಮಿಲಿ ಆಗಿದೆ. ದೇವೇಗೌಡ ಅಂಡ್ ಫ್ಯಾಮಿಲಿ ಪಾರ್ಟಿಯಾಗಿದೆ. ಇನ್ನು ದೇವೇಗೌಡರ ಕಾರಣಕ್ಕೆ ಜೆಡಿಎಸ್ ಬಿಜೆಪಿಯೊಂದಿಗೆ ಮರ್ಜ್ ಮಾಡಿಲ್ಲ. ಮುಂದೆ ಬಿಜೆಪಿ ಜೊತೆ ಮರ್ಜ್ ಆಗೇ ಆಗತ್ತದೆ. ಬಿಜೆಪಿಯವರು ಕುಮಾರಸ್ವಾಮಿ ಅವರನ್ನ ಛೂ ಬಿಟ್ಟಿದ್ದಾರೆ. ಅದಕ್ಕೆ ಅವರೇ ಜಾಸ್ತಿ ಮಾತಾಡ್ತಿದ್ದಾರೆ. ಜೆಡಿಎಸ್ ಈಗ ಬಿಜೆಪಿ ಜೊತೆ ಹೋಗಿದ್ದಾರೆ. ಹಾಗಾಗಿ ಸೆಕ್ಯುಲರ್ ಅನ್ನ ತೆಗೆದು ಹಾಕಬೇಕು. ಅವರಾಗಿಯೇ ಇದನ್ನ ತೆಗೆದು ಹಾಕಿದರೆ ಒಳ್ಳೆಯದು, ಇಲ್ಲದಿದ್ದರೆ ಜನರೇ ಅದನ್ನ ತೆಗೆದು ಹಾಕುತ್ತಾರೆ. ನಾವಿದ್ದಾಗ ಮಾತ್ರ ಜೆಡಿಎಸ್ ಜಾತ್ಯಾತೀತ ಪಕ್ಷವಾಗಿತ್ತು ಎಂದರು.
ಕಾಂಗ್ರೆಸ್ ಸೇರಿದ ಗೌರಿಶಂಕರ್, ಮಂಜುನಾಥ್, ಪ್ರಸಾಸ್‌ಗೌಡ ಸೇರಿ ಮೂವರಿಗೆ ನಮೋ ನಮಃ. ನೀವೆಲ್ಲಾ ಬಂದು ಒಳ್ಳೇ ಕೆಲಸ ಮಾಡಿದ್ದೀರಿ. ನಿಮ್ಮ ಸ್ನೇಹಿತರಿಗೂ ಸ್ವಲ್ಪ ಹೇಳಬೇಕು. ನೀವೆಲ್ಲಾ ಬಹಳ ಬೇಗ ಜಾಗೃತರಾಗಿದ್ದೀರಿ. ಜೆಡಿಎಸ್‌ನ ಕುಟಿಲತನವನ್ನ ಬೇಗ ಅರ್ಥ ಮಾಡಿಕೊಂಡಿದ್ದೀರಿ. ನೀವೆಲ್ಲಾ ಬೇಗನೆ ಕಾಂಗ್ರೆಸ್ ಸೇರ್ಪಡೆ ಆಗಿದ್ದೀರಾ ನಿಮಗೆಲ್ಲಾ ನಮೋ ನಮಃ. ಮುಂದೆ ಇನ್ನೂ ಸಾಕಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಅವರ ಹೆಸರುಗಳನ್ನ ಹೇಳೋದು ಬೇಡ. ಅದಕ್ಕೆ ಮೊನ್ನೆ ಹಾಸನದಲ್ಲಿ ಅವರ ಶಾಸಕರನ್ನ ಕರೆದುಕೊಂಡು ರೆಸಾರ್ಟ್‌ಗೆ ಹೋಗಿದ್ದರು. ಅಲ್ಲಿ ಏನೇನೋ ಮಾಡಿದ್ದಾರೆ ಎಂದು ಹೇಳಿದರು.
ಕರೆಂಟ್ ಕಳ್ಳ ಪೋಸ್ಟರ್: ಗ್ಯಾರಂಟಿ ಕೊಡಲಾಗದ ಕಾಂಗ್ರೆಸ್ ಶಿಖಂಡಿಂತೆ ಪೋಸ್ಟರ್ ಅಂಟಿಸುತ್ತಿದೆ ಜೆಡಿಎಸ್ ಟಾಂಗ್!
ಜೆಡಿಎಸ್‌ನವರು ಮಾಯ ಮಂತ್ರ ಎಲ್ಲ ಮಾಡ್ತಾರೆ. 2008 ರಲ್ಲಿ ನನ್ನ ಸೋಲಿಸೋದಕ್ಕೆ ಏನೇನೋ ಮಾಡಿದ್ರು, ನಾನು ಸೋಲಲಿಲ್ಲ. ಅದನ್ನ ನಂಬುವವರು ಭಯಪಡುತ್ತಾರೆ. ಕೆಲವರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಎರಡು ಖುರ್ಚಿಗೆ 2 ಕೋಟಿ ಅಂದು ಬಿಟ್ರು ಈಗ ಕುಮಾರಸ್ವಾಮಿ, ಎರಡು ಖುರ್ಚಿಗೆ ಎರಡು ಕೋಟಿ ಆಗತ್ತಾ? ಕುಮಾರಸ್ವಾಮಿ ಹೇಳೋದೆಲ್ಲ ಶೇ. 99.9999 ಪರ್ಸೆಂಟ್ ಸುಳ್ಳು. ನಾನು ಸುಳ್ಳುಗಳಿಗೆಲ್ಲ ರಿಯಾಕ್ಟ್ ಮಾಡಲ್ಲಪ್ಪ. ಅವರ ಹೊಟ್ಟೆ ಉರಿ ಅವರನ್ನೇ ಸುಡುತ್ತದೆ. ಭಯ ಪಡದೇ ಇರುವವರಿಗೆ ಅವರ ಮಾಯ ಮಂತ್ರ ಎಲ್ಲ ಏನೂ ಆಗಲ್ಲ. ಭಯ ಪಡುವವರಿಗೆ ಮಾತ್ರ ಏನಾದ್ರೂ ಆಗಬಹುದು ಎಂದರು.