* ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ನಾವು ಭಯ ಹುಟ್ಟಿಸಲ್ಲ* ಮೇಕೆದಾಟು ಡ್ಯಾಂ ನಿರ್ಮಾಣ ತಕ್ಷಣ ಆರಂಭಿಸಿ: ಡಿಕೆಶಿ ಆಗ್ರಹ* ಗೊರವಯ್ಯರಿಗೆ ತಲಾ 1 ಸಾವಿರ ರು. ದಕ್ಷಿಣೆ ನೀಡಿದ ಶಿವಕುಮಾರ್‌

ಬೆಂಗಳೂರು(ಜು.10): ರಾಜ್ಯ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯ ಮಾಡಿದ್ದಾರೆ.

ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇಳೆ ರಾಜ್ಯ ಸರ್ಕಾರ ತುರ್ತು ಅಗತ್ಯವಿರುವ ಯೋಜನೆಗಳ ಬಗ್ಗೆ ಗಮನ ನೀಡಬೇಕು. ಕೂಡಲೇ ಮೇಕೆದಾಟು ಯೋಜನೆಯನ್ನು ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿರುವ ವಿಚಾರವನ್ನು ಸರ್ಕಾರ ನೋಡಿಕೊಳ್ಳುತ್ತದೆ. ಅದಕ್ಕಾಗಿ ತಾಂತ್ರಿಕ ತಜ್ಞರ ಸಮಿತಿ ಇದೆ. ಸಮಿತಿ ಜೊತೆ ಸರ್ಕಾರ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹೀಗಾಗಿ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಜನರಲ್ಲಿ ಆತಂಕ ಮೂಡಿಸುವ ಕೆಲಸ ನಾವು ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ : ಯತ್ನಾಳ್‌

ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸಿ:

ಕೆಆರ್‌ಎಸ್‌ ಜಲಾಶಯದ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಯಾವುದೇ ಪರಿಶೀಲನೆ ನಡೆಸದೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಮುಂದಿನ ಸಿಎಂ ಡಿಕೆಶಿ: ಗೊರವಯ್ಯ ಭವಿಷ್ಯ

ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಂದು ಗೊರವಯ್ಯ ಭವಿಷ್ಯ ನುಡಿದ ಪ್ರಸಂಗ ನಡೆಯಿತು. ಶುಕ್ರವಾರ ಸದಾಶಿವನಗರದ ಶಿವಕುಮಾರ್‌ ನಿವಾಸದ ಬಳಿ ಬಂದಿದ್ದ ಇಬ್ಬರು ಗೊರವಯ್ಯರು ‘ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌’ ಎಂದು ಹೇಳಿದರು. ಬಳಿಕ ಅವರಿಗೆ ಶಿವಕುಮಾರ್‌ ಅವರು ತಲಾ 1 ಸಾವಿರ ರು. ದಕ್ಷಿಣೆ ನೀಡಿದರು.