ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ; ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು? ಯಾರೆಲ್ಲ ಬದಲಾಗಲಿದ್ದಾರೆ ನೋಡಿ!
ನಾವು ಮೇಕೆದಾಟು ಯೋಜನೆ ಶುರು ಮಾಡ್ತಿದ್ದೇವೆ. ಅವ್ರು ನಮಗೆ ಹೇಳಿದ್ದಾರೆ ಡೇಟ್ ಫಿಕ್ಸ್ ಮಾಡ್ತೀವಿ ಅಂತ ಅದಕ್ಕೆ ತಯಾರು ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನ ನಾವು ಮಾಡಿಕೊಳ್ತಾ ಇದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು.

ಬೆಂಗಳೂರು (ನ.9): ನಾವು ಮೇಕೆದಾಟು ಯೋಜನೆ ಶುರು ಮಾಡ್ತಿದ್ದೇವೆ. ಅವ್ರು ನಮಗೆ ಹೇಳಿದ್ದಾರೆ ಡೇಟ್ ಫಿಕ್ಸ್ ಮಾಡ್ತೀವಿ ಅಂತ ಅದಕ್ಕೆ ತಯಾರು ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನ ನಾವು ಮಾಡಿಕೊಳ್ತಾ ಇದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೇಕೆದಾಟು ಯೋಜನೆಗೆ 2018ರಲ್ಲೇ ಸುಪ್ರೀಂಕೋರ್ಟ್ನಲ್ಲಿ ತೀರ್ಮಾನ ಆಗಿತ್ತು. 24 ಟಿಎಂಸಿ ನೀರು ಬೆಂಗಳೂರಿಗೆ ಸೀಮಿತವಾಗಿದೆ ಎಂದು ತೀರ್ಮಾನ ಆಗಿತ್ತು. ಈಗ ಅದನ್ನ ಗೋ ಇಶ್ಯು ಮಾಡ್ತಿದ್ದೇವೆ ಎಂದರು.
ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಬಂದ್ರೂ ಸ್ವಾಗತ: ಗೃಹ ಸಚಿವ ಪರಮೇಶ್ವರ್
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರದ್ದೆಲ್ಲಾ 3-4 ವರ್ಷ ಅವಧಿ ಆಗಿದೆಯೋ ಅವರದ್ದೆಲ್ಲ ಬದಲಾವಣೆ ಆಗಬೇಕು ಅಂತ ಇದೆ. ಹೊಸ ಆಯ್ಕೆ ಬಗ್ಗೆ ನಮ್ಮ ಸಚಿವರಿಗೆ ಜಿಲ್ಲೆಗೆ ಹೋಗಿ ಪ್ರಪೋಸಲ್ ಕೊಡಲು ಹೇಳಿದ್ದೇವೆ. ಹೆಚ್ಚುಕಮ್ಮಿ 75% ಹೋಗಿ ಬಂದು ತೀರ್ಮಾನ ಮಾಡಿದ್ದಾರೆ. ಮಿಕ್ಕಿದವರ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಶಾಸಕ ಮುನಿರತ್ನ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಬಹಳ ಸಂತೋಷ ಅವರು ಹೋಗಬೇಕು. ಬಸವರಾಜ ಬೊಮ್ಮಾಯಿ ಅವರಿಗೆ ರಿಪೋರ್ಟ್ ಕೊಡ್ತೀನಿ, ಲೋಕಾಯುಕ್ತ ರಿಪೋರ್ಟ್ ಎಲ್ಲಾ ಕಳಿಸಿಕೊಡ್ತಿನಿ ಬಿಡಿ ಎಂದರು.
ಪರೀಕ್ಷಾ ಅಕ್ರಮ ಕಿಂಗ್‌ಪಿನ್ ಪರಾರಿಗೆ ಪೊಲೀಸರ ಸಾಥ್? ತನಿಖೆಗೆ ಸೂಚನೆ!
ಇನ್ನು ಎಲ್ಲ ಶಾಸಕರಿಗೂ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಎಲ್ಲ ಶಾಸಕರಿಗೂ ಸ್ವಲ್ಪ ಟೈಂ ಕನ್ಫ್ಯೂಸ್ ಆಗ್ತಾ ಇತ್ತು. ಅದಕ್ಕೆ ಪ್ರತಿ ಶಾಸಕರಿಗೂ 10 ಗಂಟೆಯಿಂದ 10:30 ವರೆಗೂ ಅರ್ಧ ಗಂಟೆ ಟೈಂ ನಿಗದಿ ಮಾಡಿದೆ. ಆದಾದ ಬಳಿಕ ನಮ್ಮ ಕಾರ್ಯಕರ್ತರಿಗೂ ಟೈಂ ನಿಗದಿ ಮಾಡ್ತಾ ಇದ್ದೇನೆ. ಸಕರಿಗೆ ಕಾರ್ಯಕರ್ತರಿಬ್ಬರಿಗೂ ಟೈಂ ನಿಗದಿ ಮಾಡಿದ್ದೇವೆ. ಇಲ್ಲಿ ಕ್ಷೇತ್ರದ ಕೆಲಸ ಚರ್ಚೆ ಆಗ್ತದೆ. ಹೀಗಾಗಿ ಇನ್ಮುಂದೆ ಪ್ರತಿದಿನ 10 ಗಂಟೆಯಿಂದ 10:30 ವರೆಗೆ ಶಾಸಕರ ಭೇಟಿ ಆಗೋ ಕೆಲಸ ಆಗುತ್ತೆ ಎಂದರು.