ಸೀಡಿ ಪ್ರಕರಣದಲ್ಲಿ ಹೆಸರು ಕೇಳಿ ಬಂದರೂ ತಲೆ ಕೆಡೆಸಿಕೊಳ್ಳೋದಿಲ್ಲ. ಯುವತಿ ಪೋಷಕರಿಂದ ಆರೋಪ ಮಾಡಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕಲಬುರಗಿ (ಮಾ.31): ಸೀಡಿ ಪ್ರಕರಣದ ಬಗ್ಗೆ ಏನು ಮಾತಾಡಬೇಕೋ ಅದನ್ನು ವಿಧಾನಸಭೆಯಲ್ಲೇ ಮಾತನಾಡಿರುವೆ. ಈಗ ಚುನಾವಣೆಗೋಸ್ಕರ ಬಂದಿದ್ದು, ಸೀಡಿ ಬಗ್ಗೆ ಮಾತನಾಡಲಾರೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೀಡಿ ಪ್ರಕರಣದಲ್ಲಿ ಹೆಸರು ಕೇಳಿ ಬಂದರೂ ತಲೆ ಕೆಡೆಸಿಕೊಳ್ಳೋದಿಲ್ಲ. ತನಿಖೆ ಸಾಗಿದೆಯಲ್ಲ, ಅದರ ಫಲಿತಾಂಶಕ್ಕಾಗಿ ಕಾದು ನೋಡೋಣ ಎಂದಿದ್ದಾರೆ.
ಬಸವಕಲ್ಯಾಣದಲ್ಲಿ ಪ್ರಚಾರಕ್ಕೆ ತೆರಳುವ ಮಾರ್ಗಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸಂಸ್ಕೃತಿ ಸೇರಿದಂತೆ ಎಲ್ಲರ ಸಂಸ್ಕೃತಿಯನ್ನ ಜನ ಗಮನಿಸುತ್ತಿದ್ದಾರೆ. ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ. ಅವರ ಸರ್ಕಾರ ಅವರ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿಸುತ್ತಿರಬಹುದು. ಅವರು ಏನಾದರೂ ಹೇಳಿಕೆ ಕೊಡಲಿ, ನಾನು ತಲೆ ಕೆಡಿಸಿಕೊಳ್ಳಲ್ಲ. ದಯವಿಟ್ಟು ಸೀಡಿ ಬಗ್ಗೆ ನೀವು ಇಲ್ಲಿ ಮಾತನಾಡಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.
ಸೀಡಿ ಶಂಕಿತ ಕಿಂಗ್‌ಪಿನ್ ನರೇಶ್ ಟೀಂಗೆ ಈಗ ಬಲೆ ...
ಸೀಡಿ ಹಗರಣದಲ್ಲಿ ವಿಚಾರಣೆ ಮಾಡುತ್ತಿರುವ ಎಸ್‌ಐಟಿ ತಮಗ್ಯಾಕೆ ನೋಟೀಸ್ ಕೊಡುತ್ತದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಸೀಡಿ ವಿಚಾರದಲ್ಲಿ ಯುವತಿ ಪೋಷಕರು ಅದೇನು ಹೇಳುತ್ತಾರೋ ಹೇಳಲಿ. ನಾನು ಸದ್ಯಕ್ಕೆ ಈ ಬಗ್ಗೆ ಉತ್ತರ ನೀಡೋದಿಲ್ಲ ಎಂದರು.
ತನಿಖೆ ನಡೆದಿದೆ. ತಾವು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಕುರಿತು ಮಾತನಾಡುವುದಿಲ್ಲ. ಸದ್ಯ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ, ಪ್ರಚಾರದಲ್ಲಿಯೂ ಸಹ ಸೀಡಿ ವಿಷಯ ಕುರಿತು ಪ್ರಸ್ತಾಪ ಮಾಡುವುದಿಲ್ಲ ಎಂದು ಹೇಳಿದರು.
