ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್; ಡಿಕೆಶಿ ಭೇಟಿಗಾಗಿ ದೇವರಾಜೇಗೌಡನೇ ದುಂಬಾಲು ಬಿದ್ದಿದ್ದ: ಶಿವರಾಮೇಗೌಡ

ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ವಿಚಾರವಾಗಿ ವಕೀಲ ದೇವರಾಜೇಗೌಡನೇ ಡಿ.ಕೆ. ಶಿವಕುಮಾರ್ ಭೇಟಿ ಮಾಡಿಸುವಂತೆ ದುಂಬಾಲು ಬಿದ್ದಿದ್ದನು ಎಂದು ಮಾಜಿ ಸಂಸದ ಶಿವರಾಮೇಗೌಡ ಟ್ವಿಸ್ಟ್ ನೀಡಿದ್ದಾರೆ.

Mandya former MP LR Shivaramegowda given another twist for Prajwal Revanna Pen drive Case sat

ಬೆಂಗಳೂರು (ಮೇ 08): ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ಸ್ವತಃ ದೇವರಾಜೇಗೌಡನೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ದುಂಬಾಲು ಬಿದ್ದಿದ್ದನು. ಆದರೂ, ದೇವರಾಜೇಗೌಡ ನನ್ನ ಹೆಸರು ಬಳಕೆ ಮಾಡಿದ್ದು ವಿಷಾದನೀಯ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.

ಹೌದು, ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಕೇಸ್ ಪ್ರತಿದಿನ ಒಂದೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ನಾಯಕನೂ ಆಗಿರುವ ವಕೀಲ ದೇವರಾಜೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಅನ್ನು ಹಂಚಿಕೆ ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದರು. ಜೊತೆಗೆ, ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿದ್ದು, ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದು ಹೇಳಿದ್ದರು. ಜೊತೆಗೆ, ಸಂಧಾನ ಹಾಗೂ ಆಮಿಷವೊಡ್ಡಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ನನ್ನನ್ನು ಭೇಟಿ ಮಾಡಿದ್ದು, ಆಗ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ಮಾಡಿ ದೊಡ್ಡ ಆಫರ್ ನೀಡಿದ್ದರು ಎಂದು ಆಡಿಯೋ ಬಿಡುಗಡೆ ಮಾಡಿದ್ದರು.

ಹಾಸನ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಟ್ವಿಸ್ಟ್ ಕೊಟ್ಟ ದೇವರಾಜೇಗೌಡ; ಡಿಕೆಶಿ ಆಮಿಷದ ಆಡಿಯೋ ರಿಲೀಸ್

ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಕೇಸ್ ವಿಚಾರದ ಬಗ್ಗೆ ಬುಧವಾರ ಸುದ್ದೊಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ಪೆನ್ ಡ್ರೈವ್ ಗೂ ನನೆಗೂ ಸಂಭಂಧವಿಲ್ಲ. ದೇವರಾಜೇಗೌಡ ನನ್ನ ಹೆಸರು ಬಳಕೆ ಮಾಡಿದ್ದು ವಿಷಾದನೀಯ. ಏ.29 ಕ್ಕೆ ದೇವರಾಜೇಗೌಡನನ್ನು ನಾನು ಮೊದಲನೇ ಭೇಟಿಯಾಗಿದ್ದೇನೆ. ಅಲ್ಲಿ ತನಕ ಅವರನ್ನ ನಾನು ಭೇಟಿಯಾಗಿರಲಿಲ್ಲ. ಸ್ವತಃ ದೇವರಾಜೇಗೌಡ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸಿ ಎಂದು ನನ್ನ ಭೇಟಿಯಾಗಿದ್ದನು ಎಂದು ತಿಳಿಸಿದರು.

ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್; ಡಿಕೆಶಿ ಆಡಿಯೋ ಡಿಲೀಟ್‌ಗೆ ಎಸ್‌ಐಟಿ ಅಧಿಕಾರಿಯಿಂದಲೇ ಬೆದರಿಕೆ: ವಕೀಲ ದೇವರಾಜೇಗೌಡ

ಹೊಳೆನರಸೀಪುರದವರು ಬಂದು ನಿಮ್ಮನ್ನ ದೇವರಾಜೇಗೌಡ ಕೇಳ್ತಿದ್ದರು ಎಂದರು. ಆಗ ಫೋನ್ ನಲ್ಲಿ ನಾನು ದೇವರಾಜೇಗೌಡ ಜೊತೆ ಮಾತನಾಡಿದೆ. ಆಗ ನಿಮ್ಮ‌ಭೇಟಿಯಾಗಬೇಕು ಎಂದರು. ಸರಿ ಬಾ ಇದೇ ಏಟ್ರಿಯಾದಲ್ಲಿ ಇರ್ತಿನಿ ಬಾ ಎಂದೆ. ಆಗ ನಾನು ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಮಾಡಿದೆ. ಅವರು ರಾಣೇಬೆನ್ನೂರಲ್ಲಿ ಎಲ್ಲೋ ಇದ್ದರು. ನಾನು ಬರೋದು ರಾತ್ರಿಯಾಗುತ್ತೆ ಎಂದರು. ಅಮೇಲೆ ನಾನೇ ರಾತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಹಾಸನದ ದೇವರಾಜೇಗೌಡ ನಿಮ್ಮನ್ನ ಭೇಟಿಯಾಗಬೇಕು ಎಂದು ಕೇಳುತ್ತಿದ್ದಾನೆ ಎಂದು ಹೇಳಿದೆ. ಅದಕ್ಕೆ ಡಿ.ಕೆ.ಶಿವಕುಮಾರ್ ಅವರು, ಹೇ ಅವನ ಹತ್ತಿರ ಏನು ಮಾತನಾಡೋಕಿದೆ? ನೀವು ಉಪಮುಖ್ಯಮಂತ್ರಿ ನೀವೆ ಹೀಗೆ ಅಂದ್ರೆ ಹೇಗೆ ಎಂದು ನಾನು ಹೇಳಿದೆ. ಆಗ ನನ್ನ ಮೊಬೈಲ್ ನಿಂದಲ್ಲೇ  ದೇವರಾಜೇಗೌಡ ಜೊತೆ ಡಿಕೆಶಿ ಮಾತನಾಡಿದರು. ಹೇಗೆ ನಿನ್ನ‌ ಹೋರಾಟ ಎಂದು ಡಿಕೆಶಿ ಕೇಳಿದರು. ನಿನ್ನ ಬಳಿ ಇರೋದನ್ನ ಎಸ್ ಐಟಿಗೆ ಕೊಡು ಎಂದಷ್ಟೇ ಡಿಕೆಶಿ ಹೇಳಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios