ನಾನು ಖೇಡಿ ರವಿ ಅಲ್ಲ: ಡಿಕೆಶಿಗೆ ಸಿ.ಟಿ.ರವಿ ತಿರುಗೇಟು ಸಿ.ಟಿ.ರವಿ ಅಲ್ಲ, ಪಟಾಕಿ ರವಿ: ಡಿಕೆಶಿ ಲೇವಡಿ ಲೂಟಿ ರವಿ ಎಂದ ಡಿಕೆಶಿಗೆ, ಕೋತ್ವಾಲ್ ಚೇಲಾ ಅಲ್ಲ ಎಂದ ಸಿಟಿ ರವಿ
ಬೆಂಗಳೂರು(ಡಿ.22): ‘ಪಟಾಕಿ ರವಿ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ತೀವ್ರ ಕಿಡಿಕಾರಿದ್ದಾರೆ. ಪಟಾಕಿ ಎಂಬುದು ಸಂಸ್ಕೃತಿಯ ಸಂಕೇತ. ನಾನು ಖೇಡಿ ರವಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ಜನರ ಪರ ಹೋರಾಟ ಮಾಡಿದ್ದೇ ನನ್ನ ಟ್ರ್ಯಾಕ್ ರೆಕಾರ್ಡ್. ನನ್ನ ರೆಕಾರ್ಡ್ ಬಹಳ ಶುದ್ಧವಾಗಿದೆ. ನನ್ನ ಟ್ರ್ಯಾಕ್ ರೆಕಾರ್ಡ್‌ನಲ್ಲಿ ತಿಹಾರ್ ಜೈಲಿಲ್ಲ, ನಾನು ತಿಹಾರ್ ಜೈಲ್ ರಿಟರ್ನ್ ಅಲ್ಲ ಎಂದು ಹೇಳಿದರು.
ಸಿ.ಟಿ.ರವಿ ಅಲ್ಲ, ಪಟಾಕಿ ರವಿ: ಡಿಕೆಶಿ ಲೇವಡಿ
‘ಸಿ.ಟಿ.ರವಿಗೂ ನನಗೂ ಸಂಬಂಧವೇ ಇಲ್ಲ. ಆದರೂ ಅವರು ನನ್ನ ಬಗ್ಗೆ ಮಾತನಾಡುತ್ತಾರೆ. ಅವರು ಸಿ.ಟಿ.ರವಿ ಅಲ್ಲ, ಪಟಾಕಿ ರವಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿ.ಟಿ.ರವಿ ಪಟಾಕಿ ಹಚ್ಚೋದು ಬಿಟ್ಟು ಬಿಡೋದು. ನನಗೂ ಈ ಪಟಾಕಿ ರವಿಗೂ ಸಂಬಧವೇ ಇಲ್ಲ. ಆದರೂ ನನ್ನ ಬಗ್ಗೆ ಮಾತನಾಡುತ್ತಾರೆ. ಈ ಪಟಾಕಿ ರವಿಗೆ ಏನು ಹೇಳೋದು ಎಂದು ವ್ಯಂಗ್ಯವಾಗಿ ಹೇಳಿದರು.
Anti Conversion Bill: ಪ್ರತ್ಯೇಕ ಕಾಯ್ದೆ ಯಾಕ್ರಿ ಬೇಕು.? ಕಾಂಗ್ರೆಸ್ ವಿರೋಧ
ಬೆಳಗಾವಿ ವಿಚಾರದಲ್ಲಿ(Belagavi Violence) ಆರಂಭಗೊಂಡ ಮಾತಿನ ಸಮರ ಇದೀಗ ತಾರಕಕ್ಕೇರಿದೆ. ಉಭಯ ನಾಯಕರು ಜಟಾಪಟಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತತ್ತಿಲ್ಲ.
ಡಿ.ಕೆ.ಶಿವಕುಮಾರ್ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್
ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುತ್ತಿರುವ ಮರಾಠಿಗರ ಪುಂಡಾಟಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದರು.
ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಡಬೇಕಾದರೆ ಎಂಇಎಸ್ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಿದ್ದರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದು ಕೂಡ ಅವರೇ. ಡಿ.ಕೆ ಶಿವಕುಮಾರ್, ಜಮೀರ್ ಅಹ್ಮದ್‌ರ ಕಟ್ಟಾಬೆಂಬಲಿಗರಿಂದಲೇ ಈ ಕೃತ್ಯ ನಡೆದಿದೆ. ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಪ್ರತಿಮೆಗೆ ಅಪಮಾನ ಕೂಡ ಕಾಂಗ್ರೆಸ್, ಎಂಇಎಸ್ ಕಾರ್ಯಕರ್ತರೇ ಮಾಡಿದ್ದಾರೆ ಎಂದು ದೂರಿದರು.
DKS VS CT Ravi: ಯಾರ್ರೀ ಅವನು ಪಟಾಕಿ ರವಿ, ನನಗೂ ಅವನಿಗೂ ಸಂಬಂಧ ಇಲ್ರಿ: ಡಿಕೆಶಿ
ಕಾಂಗ್ರೆಸ್‌ನವರು ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ನಡೆಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಡಬೇಕಾದರೆ ಎಂಇಎಸ್ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಿದ್ದರು. ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದು ಕೂಡ ಅವರೇ. ಡಿ.ಕೆ ಶಿವಕುಮಾರ್, ಜಮೀರ್ ಅಹ್ಮದ್‌ರ ಕಟ್ಟಾಬೆಂಬಲಿಗರಿಂದಲೇ ಈ ಕೃತ್ಯ ನಡೆದಿದೆ. ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಪ್ರತಿಮೆಗೆ ಅಪಮಾನ ಕೂಡ ಕಾಂಗ್ರೆಸ್, ಎಂಇಎಸ್ ಕಾರ್ಯಕರ್ತರೇ ಮಾಡಿದ್ದಾರೆ ಎಂದು ಸಿಟಿ ರವಿ ದೂರಿದರು.
ಜಾತಿ ಸಂಘರ್ಷ, ಭಾಷಾ ಸಂಘರ್ಷವನ್ನು ಹುಟ್ಟು ಹಾಕುವುದೇ ಇವರ ಉದ್ದೇಶವಾಗಿದೆ. ಹಾಗಾಗಿಯೇ ಎಂಇಎಸ್ ಸಂಘಟನೆಯನ್ನು ಕೆಪಿಸಿಸಿ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ. ಈ ಷಡ್ಯಂತ್ರಗಳನ್ನು ಬಯಲಿಗೆಳೆಯಬೇಕೆಂದು ಮುಖ್ಯಮಂತ್ರಿ, ಗೃಹ ಸಚಿವರನ್ನು ಆಗ್ರಹಿಸುವುದಾಗಿ ಅವರು ತಿಳಿಸಿದರು.
ನಾವು ಪುಂಡಾಟಿಕೆ ಮಾಡಿದ್ದರೆ ಬಂಧಿಸಿ:ಡಿಕೆಶಿ ತಿರುಗೇಟು
ಸುವರ್ಣಸೌಧ: ಪುಂಡಾಟಿಕೆ ನಾವು ಮಾಡಿದ್ದರೆ ನಮ್ಮನ್ನೇಕೆ ಬಂಧಿಸಿಲ್ಲ? ತಾಕತ್ತಿದ್ದರೆ ಬಂಧಿಸಿ. ಸಿ.ಟಿ.ರವಿ ವಿಧಾನಪರಿಷತ್ ಫಲಿತಾಂಶದಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗೃಹ ಸಚಿವರ ಅಸಮರ್ಥತೆಯೇ ಈ ಘಟನೆಗಳಿಗೆ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಲೂಟಿ ರವಿ ಹೇಳಿಕೆಗೆ ಸಿಟಿ ರವಿ ತಿರುಗೇಟು
ನಾನು ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ. ಕೊತ್ವಾಲ್ ರಾಮಚಂದ್ರನ ಚೇಲಾಗಳಾಗಿದ್ದವರಿಗೆ ಉಳಿದವರು ಕೂಡ ಹಾಗೆಯೇ ಕಾಣುತ್ತಾರೆ’ ಎನ್ನುವ ಮೂಲಕ ‘ಲೂಟಿ ರವಿ’ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ದತ್ತಪೀಠದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ದೇಶಭಕ್ತ ಸಂಘಟನೆ ಆರ್‌ಎಸ್‌ಎಸ್‌ನ ಸ್ವಯಂ ಸೇವಕ. ನಾನು ಶಾಸಕನಾದ ಮೇಲೆ ನನ್ನ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ. ಅಕ್ರಮ ಸಂಪತ್ತು ಮಾಡಿಕೊಂಡು ಜೈಲು-ಬೇಲು ಕಂಡವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಾರೆ ಎಂದು ಹೇಳಿದರು. ದತ್ತಪೀಠ-ಜನಪರ ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆ. ಹಣ ಲೂಟಿ ಮಾಡಿ, ಇನ್ನೊಬ್ಬರ ಆಸ್ತಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ. ಅಕ್ರಮ ಸಂಪತ್ತು ಗಳಿಸಿ ಜೈಲಿಗೆ ಹೋಗಿರುವ, ಬೇಲ್‌ನಲ್ಲಿರುವ ಯಾವುದೇ ಕುಖ್ಯಾತಿ ನನಗಿಲ್ಲ ಎಂದು ವಾಗ್ದಾಳಿ ನಡೆಸಿದರು.
