ಬೆಂಗಳೂರು : ‘ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಮಾಧ್ಯಮಗಳಲ್ಲಿ ನಾವು ಬಿಜೆಪಿ ಸೇರಲು ಮುಂದಾಗಿದ್ದೇವೆ ಎಂಬ ವರದಿಗಳು ಬರುತ್ತಿದ್ದು, ಇದು ಸತ್ಯಕ್ಕೆ ದೂರವಾಗಿವೆ. ನಾವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದು, ಯಾವ ಕಾರಣಕ್ಕೂ ಪಕ್ಷ ತೊರೆ ಯುವುದಿಲ್ಲ.’

 ಹೀಗೆಂದು ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ ಹಾಗೂ ಬಿ. ನಾಗೇಂದ್ರ ಅವರು ಪಕ್ಷ ತಮಗೆ ನೀಡಿರುವ ಶೋಕಾಸ್ ನೋಟಿಸ್ ಗೆ ಮಾರುತ್ತರ ಬರೆದಿದ್ದಾರೆ. 

ಈ ನಡುವೆ, ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಶಾಸಕಾಂಗ ಸಭೆಗೆ ಬಾರದ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬುದು ನಿಜವಲ್ಲ. ಆಪ ರೇಷನ್ ಕಮಲ ವಿಫಲವಾಗಿದೆ’ ಎಂದಿದ್ದಾರೆ. 

ಶೋಕಾಸ್ ನೋಟಿಸ್: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ನಾಲ್ಕು ಮಂದಿ ಅತೃಪ್ತ ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಶೋಕಾಸ್ ನೋಟಿಸ್ ನೀಡಿದ್ದರು. ಇದಕ್ಕೆ ಅತೃಪ್ತರ ಪೈಕಿ ಉಮೇಶ್ ಜಾಧವ್ ಅವರೊಬ್ಬರನ್ನು ಹೊರತು ಪಡಿಸಿ ಉಳಿದ ಮೂವರು ಬಹುತೇಕ ಒಂದೇ ರೂಪದ ಉತ್ತರವನ್ನು ಬರೆದಿದ್ದು, ಪಕ್ಷಕ್ಕೆ ತಾವು ನಿಷ್ಠರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ವೈಯಕ್ತಿಕ ಕಾರಣಗಳಿಂದಾಗಿ ಸಭೆಗೆ ಗೈರು ಹಾಜರಾಗಲು ಸಾಧ್ಯವಾಗಲಿಲ್ಲ. ಮಾಧ್ಯಮಗಳಲ್ಲಿ ನಾವು ಬಿಜೆಪಿ ಸೇರಲು ಮುಂದಾಗಿದ್ದೇವೆ. ಪಕ್ಷ ತ್ಯಜಿಸಲಿದ್ದೇವೆ ಎಂದೆಲ್ಲ ವರದಿಯಾಗುತ್ತಿರುವು ದನ್ನು ಗಮನಿಸಿದ್ದೇವೆ. ಆದರೆ, ಯಾವ ಕಾರ ಣಕ್ಕೂ ಕಾಂಗ್ರೆಸ್ ತ್ಯಜಿಸುವುದಿಲ್ಲ. ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.