*  ಹಿಂಬಾಲಕ ಸಂಸ್ಕೃತಿ ಬಗ್ಗೆ ಬಾಲೆಹೊಸೂರು ದಿಂಗಾಲೇಶ್ವರ ಶ್ರೀ ಚಾಟಿ* ಪರೋಕ್ಷವಾಗಿ ಮುರಘಾ ಮಠ ವಿರುದ್ಧ ಕಿಡಿ* ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು

ಗದಗ, (ಸೆ.19): ಎಮ್ಮೆಗಳ ಹಿಂದೆ ಅಡ್ಡಾಡಿದ್ರೆ ಹಾಲು ಸಿಕ್ಕುತ್ತೆ. ಎಮ್‌ಎಲ್‌ಎಗಳ ಹಿಂದೆ ಅಡ್ಡಾಡಿದ್ರೆ ಏನೂ ಸಿಕ್ಕಲ್ಲ ಎಂದು ಹಿಂಬಾಲಕ ಸಂಸ್ಕೃತಿ ಬಗ್ಗೆ ಬಾಲೆಹೊಸೂರು ದಿಂಗಾಲೇಶ್ವರ ಶ್ರೀ ಚಾಟಿ ಬೀಸಿದ್ದಾರೆ.

ಲಕ್ಕುಂಡಿಯಲ್ಲಿ ಖಾಸಗಿ ಸಂಸ್ಥೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಎಮ್ಮೆ ಹಿಂದೆ ಅಡ್ಡಾಡುವವರಿಗೆ ಬೆಲೆ ಇರುತ್ತೆ ಹೊರತಾಗಿ ಎಮ್‌ಎಲ್‌ಎ ಹಿಂದೆ ಅಡ್ಡಾಡುವವರಿಗೆ ಬೆಲೆ ಇರಲ್ಲ ಎಂದು ಭಾಷಣದಲ್ಲಿ ಪರೋಕ್ಷವಾಗಿ ಮುರಘಾ ಮಠ ಬಗ್ಗೆ ಹೇಳಿದರು.

ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ, ಇಂದಿನಿಂದ ಐಪಿಎಲ್ ಕಲರವ; ಸೆ.19ರ ಟಾಪ್ 10 ಸುದ್ದಿ!

ಮಠದ ಆಸ್ತಿ, ಹೊಲ ಮಾರುವ ಸ್ವಾಮಿಗಳನ್ನ ನಾವು ನೋಡಿದ್ದೇವೆ. ಹೊರಗಡೆ ಸಾಲ ಪಡೆದು ಒದ್ದಾಡಿದ ಸ್ವಾಮಿಗಳೂ ಇದ್ದಾರೆ ಎಂದು ದಿಂಗಾಲೇಶ್ವರ ಶ್ರೀ ಟಾಂಗ್ ಕೊಟ್ಟರು.