ಯಾವುದೇ ಸಮಾಜಕ್ಕೆ ನೋವುಂಟಾಗುವುದಿದ್ದರೆ ಜಾತಿಗಣತಿ ವರದಿ ಬಿಡುಗಡೆ ಮಾಡಬೇಡಿ: ದಿಂಗಾಲೇಶ್ವರ ಸ್ವಾಮೀಜಿ
ಯಾವುದೇ ಒಂದು ಸಮುದಾಯ ಅಥವಾ ಸಮಾಜಕ್ಕೆ ಅನ್ಯಾಯವಾಗುವುದಾದರೆ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವುದೇ ಬೇಡ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಬಾಗಲಕೋಟೆ (ನ.26): ರಾಜ್ಯದಲ್ಲಿ ಸರ್ಕಾರ ಜಾತಿಗಣತಿ ವರದಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಪರ-ವಿರೋಧಗಳು ಕೂಡ ಹೆಚ್ಚಾಗಿವೆ. ಈ ಬಗ್ಗೆ ಮೌನಮುರಿದು ಮಾತನಾಡಿದ ಬಾಗಲಕೋಟೆಯ ದಿಂಗಾಲೇಶ್ವರ ಸ್ವಾಮೀಜಿ ಅವರು, ಯಾವುದಾದರೂ ಸಮಾಜಕ್ಕೆ ನೋವುಂಟಾಗುವುದಾದರೆ ಸರ್ಕಾರದಿಂದ ಜಾತಿಗಣತಿ ವರದಿ ಬಿಡುಗಡೆ ಮಾಡುವುದೇ ಬೇಡವೆಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜಾತಿಗಣತಿ ವರದಿ ಬಿಡುಗಡೆ ವಿಚಾರದಲ್ಲಿ ನಾವು ಸ್ಪಷ್ಟವಾಗಿ ಹೇಳೋದಿಷ್ಟೇ. ಯಾವುದೇ ಸಮಾಜಕ್ಕೆ ಅನ್ಯಾಯ ಆಗಲಾರದಂತಹ ವರದಿ ಬಿಡುಗಡೆಯಾಗಬೇಕು. ಒಂದು ಸಮಾಜಕ್ಕೆ ಬೆಣ್ಣೆ, ಒಂದು ಸಮಾಜಕ್ಕೆ ಸುಣ್ಣ ಎಂಬ ಪರಿಸ್ಥಿತಿ ವರದಿಗಳಲ್ಲಿ ಇರಬಾರದು. ಇದು ನನ್ನ ಸ್ಪಷ್ಟ ಅಭಿಪ್ರಾಯ. ಆ ವರದಿಯಲ್ಲಿ ಏನಿದೆ ಅನ್ನೋದನ್ನ ನಾವು ಬಲ್ಲವರಲ್ಲ. ಇರೋ ವರದಿಯಲ್ಲಿ ಸತ್ಯಾಂಶ ಏನಿದೆ ಅನ್ನೋದು ನಮಗೆ ಗೊತ್ತಿಲ್ಲ. ವರದಿ ಬಂದ ಬಳಿಕ ನಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಬಹುದು. ಜಾತಿಗಣತಿ ವರದಿಯಿಂದ ಯಾವ ಸಮಾಜಕ್ಕೂ ಅನ್ಯಾಯ ಆಗಬಾರದೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ ಪರಿಣಾಮ ಹೆಚ್ಚಾಗಿ ಬೀರಿದ್ದು ನನ್ನಮೇಲೆ: ಮಾಜಿ ಶಾಸಕ ಪ್ರೀತಮ್‌ಗೌಡ!
ನನ್ನ ಜೀವನದಲ್ಲಿ ನನಗೆ ಅಧಿಕೃತ ದಾಖಲೆ ಇರಿಸಿ ಮಾತನಾಡೋ ರೂಢಿ ಇದೆ. ಹಾರಿಕೆ ಸುದ್ದಿ ಮಾತನಾಡಿ ನನಗೆ ಗೊತ್ತಿಲ್ಲ. ಆಯಾ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಲು ಸ್ವತಂತ್ರರು ಇದ್ದಾರೆ. ಯಾವುದೇ ಸಮಾಜಕ್ಕೆ ನೋವುಂಟು ಮಾಡಬಾರದು. ನಮಗೆ ಯಾವುದು ಸರಿ ಕಾಣೋದಿಲ್ವೋ ಅದನ್ನು ನಾವು ಖಂಡಿಸುತ್ತೇವೆ. ಖಂಡಿಸುವಾಗ ಯಾವುದೇ ಸರ್ಕಾರ ಇರಲಿ, ವ್ಯಕ್ತಿ ಇರಲಿ. ಅದು ನಮ್ಮ ಗುರಿ. ಆ ವರದಿಯಲ್ಲಿ ಯಾವುದಾದರೂ ಸಮಾಜಕ್ಕೆ ನೋವುಂಟು ಮಾಡುವಂತಿದ್ದರೆ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದು ಬೇಡ ಎಂದರು.
4 ಮಾರ್ಗಗಳಲ್ಲಿ ಮೆಟ್ರೋ ಫೀಡರ್ ಬಸ್ ಹೆಚ್ಚಳ, ಯಾವೆಲ್ಲ ಮಾರ್ಗದಲ್ಲಿ ಓಡಾಡಲಿದೆ?
ಇನ್ನು ರಾಜ್ಯದಲ್ಲಿ ಲಿಂಗಾಯತರೇ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ, ನಾನು ಹೇಳುವುದಿಷ್ಟೇ ಯಾರಿಗೆ ಅರ್ಹತೆ ಇರುತ್ತೋ ಅವರು ಮುಖ್ಯಮಂತ್ರಿ ಆಗ್ತಾರೆ. ಈ ಬಗ್ಗೆ ಇಂಥವರೇ ಆಗಬೇಕು ಎಂದು ನಾನು ಹೇಳುವುದಿಲ್ಲ ಎಂದು ಬಾಗಲಕೋಟೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.