ಭಕ್ತರು ನಮಗೆ ಚಪ್ಪಲಿ ಎಸೆದಿಲ್ಲ. ಹೂ ಹಾಕಿ ಸ್ವಾಗತಿಸಿದ್ದಾರೆ: ರಂಭಾಪುರಿ ಶ್ರೀಗಳು ಸ್ಪಷ್ಟನೆ
ಜನವರಿ 1 ರಂದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಉಪಗ್ರಹ ಉಡಾವಣೆ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶನಿವಾರ ಮತ್ತೊಂದು ಮೈಲುಗಲ್ಲು ಸಾಧಿಸಿದೆ.
ಬಾಗಲಕೋಟೆ (ಫೆ.17): ಬಾಗಲಕೋಟೆಯ ಕಲಾದಗಿಯಲ್ಲಿರುವ ರಂಭಾಪುರಿ ಶಾಖಾ ಮಠದ ದುರಸ್ತಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ರಂಭಾಪುರಿ ಜಗದ್ಗುರುಗಳ ಕಾರನ್ನು ಅಡ್ಡಗಡ್ಡಿ ಪ್ರತಿಭಟನೆ ನಡೆಸಲಾಗಿದೆ. ಈ ಘಟನೆ ಸಂಬಂಧ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ತೋರಿಸಲಾಗಿದ್ದು, ಉದಗಟ್ಟಿ ಗ್ರಾಮದಲ್ಲಿ ರಂಭಾಪುರಿ ಶ್ರೀ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಕಾರಿಗೆ ಭಕ್ತರು ಚಪ್ಪಲಿ ಎಸೆದರು ಎಂದು ಮಾಧ್ಯಮದಲ್ಲಿ ಬಂದಿದೆ. ಆದರೆ ಅದು ಸುಳ್ಳು ನಮಗೆ ಭಕ್ತರು ಹೂ ಹಾಕಿ ಸ್ವಾಗತಿಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ನೋಡಿ ಭಕ್ತರು ನೊಂದು ಕರೆ ಮಾಡುತ್ತಿದ್ದಾರೆ. ತಪ್ಪು ಅಭಿಪ್ರಾಯ ಆಗಬಾರದು ಎಂದರು.
Rambhapuri Sri: ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರಿಂದ ಪ್ರತಿಭಟನೆ: ಕಾರಿಗೆ ಚಪ್ಪಲಿ ತೂರಿದ ಮಹಿಳೆ !
ನಾವು ಬಂದಿದ್ದು ಉದಗಟ್ಟಿ ಗ್ರಾಮದಲ್ಲಿನ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ. ಕಲಾದಗಿ ಮಠಕ್ಕೂ ಅದಕ್ಕೂ ಸಂಬಂಧವಿಲ್ಲ. ಮಠದ ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿ ವಿಲ್ ಬರೆದಿದ್ದರು. ಅದರಂತೆ ನಾವು ಗಂಗಾಧರ ಸ್ವಾಮೀಜಿ ಪೀಠಾಧಿಪತಿ ಮಾಡಿದ್ದೇವೆ. ಆ ಪ್ರಕಾರ ಆಯ್ಕೆ ಆಗಿದೆ.
ರಂಭಾಪುರಿ ಪೀಠ ಮಾಧ್ಯಮದ ಜೊತೆ ಸಂಪರ್ಕದಲ್ಲಿದೆ. ನಾವು ಕೂಡ ಪೂರ್ವಾಶ್ರಮದಲ್ಲಿ ಪತ್ರಕರ್ತ ವೃತ್ತಿ ಮಾಡಿದ್ದೇವೆ. ನಮ್ಮ ಕಾರಿಗೆ ಚಪ್ಪಲಿ ಎಸೆದಿಲ್ಲ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ರವಾನೆಯಾಗಿದೆ. ಹೀಗೆ ತಪ್ಪು ಮಾಹಿತಿ ತೋರಿಸಿದ್ರಿಂದ ಮನಸಿಗೆ ನೋವಾಗಿದೆ. ತಪ್ಪು ಸರಿಪಡಿಸಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.
ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಮಠದ ಭಕ್ತರು!
ವಿವಾದ ಕೋರ್ಟ್ ನಲ್ಲಿ ಇರೋದರಿಂದ ಹೆಚ್ಚು ಮಾತಾಡೋದಿಲ್ಲ. ಕೆಲ ಜಾತಿ ಶಕ್ತಿಗಳು ಕೆಲಸ ಮಾಡುತ್ತಿವೆ. ನಾವೆಲ್ಲ ಮಾನವ ಧರ್ಮಕ್ಕೆ ಜಯವಾಗಲಿ ಅಂದವರು. ನಿಸ್ವಾರ್ಥ ವೀರಶೈವ ಧರ್ಮ ಸಂಸ್ಕೃತಿ ಕಾರ್ಯ ಮಾಡುತ್ತಿದ್ದೇವೆ. ವಿವಾದ ಮಾಡುವ ಕೆಲವರಿಗೆ ಮಠದ ಕಳಕಳಿ ಇದ್ರೆ ಮೂಲಮಠಕ್ಕೆ ಬರಲಿ ಪರಿಹಾರ ಮಾರ್ಗ ಇದ್ದೇ ಇವೆ. ರಾಜಕೀಯ ಅನ್ನುವಂತದ್ದು ಬೆರೆತು ಗೌರವಕ್ಕೆ ಚ್ಯುತಿ ಬರುತ್ತಿದೆ. ಹಿರಿಯರೇ ಕಾಣದಂತ ಸ್ಥಿತಿ ಆಗಿದೆ. ಎಲ್ಲ ತಿಳಿದ ಹಿರಿಯರು ಕೆಲವರು ಮುಂದೆ ಬಾರದೆ ಇದ್ದಾರೆ. ಇದು ರಂಭಾಪುರಿ ಶಾಖಾ ಮಠ ಅಲ್ಲ ಅನ್ನುವವರು ದಾಖಲೆ ತೋರಿಸಲಿ. ನಾವು ಇಲ್ಲಿ ಚಂದ್ರಶೇಖರ ಶಿವಾಚಾರ್ಯರು ವಿಲ್ ಬರೆದ ಪ್ರಕಾರ ಗಂಗಾಧರ ಸ್ವಾಮೀಜಿ ಆಯ್ಕ ಮಾಡಿದ್ದೇವೆ ಎಂದು ಘಟನೆ ಕುರಿತು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.