ಬೆಂ-ಮೈ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾಟಕದ ಅಭಿವೃದ್ಧಿ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಬೆಂಗಳೂರು ಐಟಿಬಿಟಿ ರಾಜಧಾನಿಯಾದರೆ ಮೈಸೂರು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕ. ಈ ಎರಡೂ ನಗರಗಳನ್ನು ಬೆಸೆಯುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಹಾ ಮಾರ್ಗವು ಕರ್ನಾಟಕದ ಅಭಿವೃದ್ಧಿಗೆ ಭಾರೀ ಕೊಡುಗೆ ನೀಡಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು /ಮಂಡ್ಯ (ಮಾ.13): ಬೆಂಗಳೂರು ಐಟಿಬಿಟಿ ರಾಜಧಾನಿಯಾದರೆ ಮೈಸೂರು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕ. ಈ ಎರಡೂ ನಗರಗಳನ್ನು ಬೆಸೆಯುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಹಾ ಮಾರ್ಗವು ಕರ್ನಾಟಕದ ಅಭಿವೃದ್ಧಿಗೆ ಭಾರೀ ಕೊಡುಗೆ ನೀಡಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆದ 117 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275ರ ಪ್ಯಾಕೇಜ್ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ 17000 ಕೋಟಿ ರು. ವೆಚ್ಚದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಇದರಿಂದ ಮೈಸೂರಿಗೆ ಬರುವ ಹಾದಿ ಮತ್ತಷ್ಟುಸುಗಮವಾಗಲಿದೆ. ಈ ರಸ್ತೆ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರ ಸ್ಮರಣೀಯ ಎಂದರು. ಚನ್ನಪಟ್ಟಣದ ಆಟದ ಗೊಂಬೆಗಳಿಗೆ ಉತ್ತೇಜನ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೆಲಿಪೋರ್ಟ್, ರೋಡ್ ಪೋರ್ಟ್, ಗ್ಯಾಸ್ ಸ್ಟೇಷನ್, ಮೆಟ್ರೋ ಸ್ಟೇಷನ್, ವಾಷ್ ರೂಮ್, ಹೋಟೆಲ್, ಕರಕುಶಲ ವಸ್ತುಗಳು, ಮೈಸೂರು ರೇಷ್ಮೆ, ಮರದ ಫರ್ನಿಚರ್, ಜೇನುತುಪ್ಪ, ಶ್ರೀಗಂಧದ ಸೋಪುಗಳಂತಹ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲು ಇದು ಅನುಕೂಲಕರವಾಗಲಿದೆ. ಇದು ಮಹತ್ವಪೂರ್ಣ ಪರ್ಯಾಯ ಮಾರ್ಗವಾಗಲಿದೆ. ಈ ಭಾಗದಲ್ಲಿನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೊದಲ ಮೆಥನಾಲ್ ಚಾಲಿತ ಬಸ್ ಲೋಕಾರ್ಪಣೆ ಮಾಡಿದ ಸಚಿವ ನಿತಿನ್ ಗಡ್ಕರಿ
ಎನ್ ಎಚ್ 209 ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸಲಿದೆ. ಬಂಡೀಪುರ ಅಭಯಾರಣ್ಯದಿಂದ ಸಂಪರ್ಕ ಸುಗಮವಾಗಲಿದೆ. ಇನ್ನು ಎನ್‌ಎಚ್ 202 ಕೇರಳದ ಸುಲ್ತಾನ್ ಬತ್ತೇರಿಗೆ ತಮಿಳುನಾಡು ಸಂಪರ್ಕ ಕಲ್ಪಿಸಲಿದೆ. ಈ ಕಾರಣಗಳಿಂದ ಶ್ರೀರಂಗಪಟ್ಟಣ, ಮೈಸೂರು ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಮಂಗಳೂರು-ಮೈಸೂರು ಸಂಪರ್ಕ ವೃದ್ಧಿಯಿಂದ ಮಂಗಳೂರಿನ ಬಂದರಿನಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಲಿದೆ. ಸಂಚಾರ ಸಮಸ್ಯೆ ಬಗೆಹರಿಯಲಿದೆ. ಕೊಡಗಿಗೆ ಹೋಗುವ ದಾರಿ ಕೂಡ ಇನ್ನೂ ಸುಲಭವಾಗಲಿದೆ ಎಂದು ಹೇಳಿದರು.
ಡಿಸೆಂಬರ್‌ನಲ್ಲಿ ಬೆಂ-ಚೆನ್ನೈ ಎಕ್ಸ್‌ಪ್ರೆಸ್ ವೇ ಸಿದ್ಧ: 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ 2024ರ ಮಾರ್ಟ್ ವೇಳೆಗೆ ಆ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.
ನವಲಗುಂದ ಬಂಡಾಯ: ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಸ್ಪರ್ಧೆಗೆ 8 ಕಾಂಗ್ರೆಸಿಗರು ಸಿದ್ಧ!
ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಮೋದಿ ಶ್ಲಾಘನೆ: ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯು ಪ್ರಮುಖ ಸಂಪರ್ಕ ಯೋಜನೆಯಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ ನೂತನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಪ್ರಧಾನಿ ಮೋದಿ ಮಾ.12 ರಂದು ಉದ್ಘಾಟಿಸಲಿದ್ದಾರೆ. ಈ ನಿಮಿತ್ತ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು,‘ರಾಷ್ಟ್ರೀಯ ಹೆದ್ದಾರಿ 275 ರ ಭಾಗವಾಗಿರುವ ನೂತನ ಹೆದ್ದಾರಿಯು 4 ರೈಲು ಮೇಲ್ಸೇತುವೆ, 9 ಸೇತುವೆ, 40 ಕಿರುಸೇತುವೆ ಮತ್ತು 89 ಸುರಂಗಮಾರ್ಗವನ್ನು ಹೊದಿರುತ್ತದೆ’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನ್ನು ಪ್ರಧಾನಿ ಮೋದಿ ಟ್ಯಾಗ್ ಮಾಡಿ ‘ಕರ್ನಾಟಕದ ನೂತನ ಹೆದ್ದಾರಿಯು ಬಹುಮುಖ್ಯ ಯೋಜನೆಯಾಗಿದೆ’ ಎಂದಿದ್ದಾರೆ.