ಸಿಎಂ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಪೋಸ್ಟ್; ತುಮಕೂರಿನ ಶ್ರೀನಿವಾಸ ಎಂಬಾತನ ವಿರುದ್ಧ ಎಫ್‌ಐಆರ್
:ನಾಡಹಬ್ಬ ದಸರಾ ಫೊಟೊ ವಿರೂಪಗೊಳಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಶ್ರೀನಿವಾಸ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು (ಅ.21):ನಾಡಹಬ್ಬ ದಸರಾ ಫೊಟೊ ವಿರೂಪಗೊಳಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಶ್ರೀನಿವಾಸ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮಹಿಷಾಸುರ ಪ್ರತಿಮೆ ಚಿತ್ರಕ್ಕೆ ಸಿಎಂ ಸಿದ್ದರಾಮಯ್ಯರ ಭಾವಚಿತ್ರ ಜೋಡಿಸಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಆರೋಪ. ಹಿಂದೂಸ್ಥಾನಿ ಸೇನಾ ಎಂಬ ಪೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ, ತೋಲಾಂಡಿಗಳು ಸೇರಿಕೊಂಡು ಮುಂದಿನ ವರ್ಷ ಸಿದ್ದಸುರಾ ದಸರಾ ಮಾಡಿದ್ರು ಆಚ್ಚರಿ ಇಲ್ಲ ಎಂದು ಬರೆದುಕೊಂಡಿರುವ ವ್ಯಕ್ತಿ.
ರಾಜ್ಯದಲ್ಲಿ ತೀವ್ರ ಬರಗಾಲ ಇರುವಾಗ ಸಚಿವರಿಗೆ ಹೊಸ ಗೂಟದ ಕಾರು ಅಗತ್ಯವಿತ್ತೇ? : ವಿಜಯೇಂದ್ರ ಪ್ರಶ್ನೆ
ಅವಹೇಳನಕಾರಿ ಪೋಸ್ಟ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿರುವ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್. ಮಹಿಷಾಸುರ ಪ್ರತಿಮೆ ವಿರೂಪಗೊಳಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದ್ದಾರೆಂದು ದೂರು. ಪೋಸ್ಟ್ ಮಾಡಿರುವ ವ್ಯಕ್ತಿ ಮತ್ತು ಖಾತೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ.. ಸದ್ಯ ಶ್ರೀನಿವಾಸ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿರುವ ಹೈಗ್ರೌಂಡ್ ಪೊಲೀಸರು
ಬೆಂಗಳೂರು ಐಟಿ ರೇಡ್ ವೇಳೆ ಸಿಕ್ಕ ಹಣ ಸಿಎಂ, ಡಿಸಿಎಂ ಗೆ ಸೇರಿದ್ದು ಎಂಬ ಸುಳ್ಳು ಆರೋಪ ಮಾಡಿದ್ದಾರೆಂದು ಬಿಜೆಪಿ ಸೋಷಿಯಲ್ ಮೀಡಿಯಾ ಖಾತೆಗಳ ಲಿಂಕ್ ಹಾಕಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು. ನಿನ್ನೆ ದೂರು ನೀಡಿದ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಈ ಬಗ್ಗೆ ಎನ್ ಸಿಆರ್ ದಾಖಲಿಸಿದ ಹೈಗ್ರೌಂಡ್ಸ್ ಪೊಲೀಸರು. ಅಪರಿಚಿತ ವ್ಯಕ್ತಿ ಹೆಸರಲ್ಲಿ ಎನ್ ಸಿಆರ್ ದಾಖಲು. ಬಿಜೆಪಿ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಐಟಿ ರೇಡ್ ವೇಳೆ ಸಿಕ್ಕ ಹಣದ ಬಗ್ಗೆ ಸುಳ್ಳು ಆರೋಪ. ಬಿಜೆಪಿಯ ಅಧೀಕೃತ ಟ್ವಿಟರ್ ಖಾತೆಗಳ ಮೇಲೆ ಕ್ರಮಕ್ಕಾಗಿ ದೂರು ನೀಡಿದ್ದ ಕಾಂಗ್ರೆಸ್ ಸೂರ್ಯ ಮುಕುಂದರಾಜ್
ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ