ಕನ್ನಡ ನಾಡಿನ ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಊಟದ ತಟ್ಟೆ; ಡಿಸಿಎಂ ಡಿ.ಕೆ. ಶಿವಕುಮಾರ್
ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಎಲ್ಲರೂ ಕೂಡ ಈ ಕಟ್ಟೆಯಿಂದ ಅನ್ನದ ತಟ್ಟೆ ಇಟ್ಟುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಡ್ಯ (ಜು.29): ಭಾರತದ ಏಳು ಪವಿತ್ರಾ ನದಿಗಳಲ್ಲಿ ಕಾವೇರಿ ಕೂಡ ಒಂದು. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಎಲ್ಲರೂ ಕೂಡ ಈ ಕಟ್ಟೆಯಿಂದ ಅನ್ನದ ತಟ್ಟೆ ಇಟ್ಟುಕೊಂಡಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಮಳೆಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಂದಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಒಂದು ಸಂಭ್ರಮದ ದಿನವಾಗಿದೆ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಎಲ್ಲರೂ ಕೂಡ ಈ ಕಟ್ಟೆಯಿಂದ ಅನ್ನದ ತಟ್ಟೆ ಇಟ್ಟುಕೊಂಡಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಮಳೆಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಮೇಲಿರುವ ತಾಯಿಗೆ ಯಾರು ಅಧಿಕಾರದಲ್ಲಿ ಇದ್ದಾರೆ ಎಂದು ಗೊತ್ತಿಲ್ಲ. ಮನುಷ್ಯನ ಪ್ರಯತ್ನ ವಿಫಲ ಆಗಬಹುದು. ಆದರೆ ಪ್ರಾರ್ಥನೆಗೆ ಫಲ ಸಿಗುತ್ತದೆ. ಭಾರತದ ಏಳು ಪವಿತ್ರಾ ನದಿಗಳಲ್ಲಿ ಕಾವೇರಿ ಕೂಡ ಒಂದಾಗಿದೆ ಎಂದು ಹೇಳಿದರು.
ರಾಮನಗರ ಜಿಲ್ಲೆ ಹೆಸರು ಮರು ಸ್ಥಾಪನೆ ಮಾಡೇ ಮಾಡ್ತೀವಿ; ಡಿಕೆಶಿಗೆ ಸವಾಲೆಸೆದ ನಿಖಿಲ್ ಕುಮಾರಸ್ವಾಮಿ
ನಮ್ಮ ಸರ್ಕಾರ 82 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಗೆ ಗುರಿ ಹೊಂದಲಾಗಿದೆ. ಕಳೆದ ವರ್ಷ ಬರಗಾಲವಿತ್ತು. ಈ ವರ್ಷ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಹಲವರು ನಮ್ಮ ಸರ್ಕಾರ ಬಗ್ಗೆ ಟೀಕೆ ಮಾಡಿದ್ದರು. ಕಾಂಗ್ರೆಸ್ ಬಂದರೆ ಬರಗಾಲ ಬರುತ್ತೆ ಅಂತೆ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಹೊಸ ಕಾನೂನು ತಂದಿದ್ದೇವೆ. ಎಲ್ಲರ ಸಹಕಾರ ಬೇಕಿದೆ. ಕೊನೆ ಭಾಗದ ರೈತನಿಗೂ ನೀರು ತಲುಪಬೇಕಿದೆ. ರೈತರನ್ನು ಉಳಿಸಬೇಕು. ಟೀಕೆ ಟಿಪ್ಪಣಿಗೆ ನಾವು ಉತ್ತರ ಹೇಳಬೇಕಿದೆ ಎಂದು ಹೇಳಿದರು.
ತಮಿಳುನಾಡಿಗೆ ನಾವು 40 ಟಿಸಿಎಂ ಬಿಡಬೇಕಿತ್ತು. ಈ ತಿಂಗಳ ಕೊನೆಗೂ ಈಗಾಗಲೇ 83 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಬಂದರೇ ರೈತರಿಗೆ ಅನುಕೂಲ ಆಗಲಿದೆ. ಇನ್ನು ಮೇಕೆದಾಟು ಯೋಜನೆ ಇದಕ್ಕೆಲ್ಲ ಪರಿಹಾರವಾಗಲಿದೆ. ಇದಕ್ಕಾಗಿ ನಾವು ಹೋರಾಟ ಮಾಡಿದ್ದೇವೆ. ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. ನಮ್ಮ ಮೇಲೆ ಕೇಸ್ ಹಾಕಿದರು. ನಾವು ಜೈಲಿಗೆ ಹೋದರು ಚಿಂತೆ ಇಲ್ಲ. ಕೇಸ್ ಹಾಕಿದ್ರು ಪರವಾಗಿಲ್ಲ. ಎಂದು ಬೆಂಗಳೂರುವರೆಗೂ ನಡೆದಿದ್ದೇವೆ. ನೀವು ಈಗ ಕಾಂಗ್ರೆಸ್ ಶಾಸಕರನ್ನ ಆಯ್ಕೆ ಮಾಡಿದ್ದಾರೆ. ನಿಮ್ಮ ಋಣವನ್ನ ತೀರಿಸುತ್ತೇವೆ. ನನಗೆ ವಿಶ್ವಾಸವಿದೆ ಎಂದು ತಿಳಿಸಿದರು.
ಮೇಕೆದಾಟು ಅಣೆಕಟ್ಟೆಯಿಂದ ನಮಗಿಂತ ತಮಿಳುನಾಡಿಗೆ ಅನುಕೂಲವಾಗಲಿದೆ. ತಮಿಳುನಾಡಿನ ಜನತೆಗೆ ಒಳ್ಳೆಯ ಬುದ್ದಿ ಕೊಡಲಿ. ನಮಗೆ ಅಣೆಕಟ್ಟು ಕಟ್ಟಲು ಅವಕಾಶ ಮಾಡಿಕೊಡಲಿ. ಅರ್ಚಕನ ಪ್ರಭಾವದಿಂದ ಶಿಲೆಯಲ್ಲೂ ರಂಗನನ್ನ ಕಾಣಬಹದು. ನಮಗಲ್ಲ ಆರ್ಶಿವಾದ ರಾಜ್ಯದ ಸಮೃದ್ದಿಗೆ. ಪಿಪಿಪಿ ಮಾದರಿಯಲ್ಲಿ ಕೆ ಆರ್ ಎಸ್ ಬೃಂದಾವನ ಅಭಿವೃದ್ಧಿಗೆ ಮುಂದಾಗಿದ್ದೇವೆ. ಯಾರ ಜಮೀನು ವಶಪಡಿಸಿಕೊಳ್ಳುವುದಿಲ್ಲ. ರ್ಕಾರದ ಜಮೀನು ಸಾಕು. ಜಲಾಶಯದ ಭದ್ರತೆಯನ್ನ ಗಮನವನ್ನು ಇಟ್ಟುಕೊಂಡು ಅಭಿವೃದ್ಧಿ ಮಾಡುತ್ತೇವೆ. ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಮುಡಾದಿಂದ ಮಾಜಿ ಪ್ರಧಾನಿ ದೇವೇಗೌಡರು ಎಷ್ಟು ಸೈಟು ಪಡೆದಿದ್ದಾರೆ ಪಟ್ಟಿ ಕೊಡ್ಲಾ? ಎಂದ ಸಿಎಂ ಸಿದ್ದರಾಮಯ್ಯ
ಕಾವೇರಿಗೆ ಆರತಿ ಮಾಡಲು ತೀರ್ಮಾನ ಮಾಡಿದ್ದೇವೆ. ಪ್ರವಾಸ ಮಾಡಿ ವರದಿ ಕೊಡಲು ಹೇಳಿದ್ದೇವೆ. ಐದು ಜನರಿಗೆ ಮುಂದಿನ ವರ್ಷದಿಂದ ಪ್ರಶಸ್ತಿ ಕೊಡಲು ತೀರ್ಮಾನ ಮಾಡಿದ್ದೇವೆ. ರೈತ, ಸವಡಿ (ನೀರುಗಂಟಿ), ಇಂಜಿನಿಯರ್ ಗೆ ಪ್ರಶಸ್ತಿ ಕೊಡುತ್ತೇವೆ. ಸತತ ಹತ್ತು ಬಾರಿ ಬಂದು ಬಾಗಿನ ಅರ್ಪಿಸಲು ತಾಯಿ ಚಾಮುಂಡೇಶ್ವರಿ ಅವಕಾಶ ಮಾಡಿಕೊಡಲಿ. ನಾವು ಯಾರ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.