Asianet Suvarna News Asianet Suvarna News

ರಾಮನಗರ ಜಿಲ್ಲೆ ಹೆಸರು ಮರು ಸ್ಥಾಪನೆ ಮಾಡೇ ಮಾಡ್ತೀವಿ; ಡಿಕೆಶಿಗೆ ಸವಾಲೆಸೆದ ನಿಖಿಲ್ ಕುಮಾರಸ್ವಾಮಿ

ಡಿ.ಕೆ. ಶಿವಕುಮಾರ್ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದರೂ, ನಾವು ಪುನಃ ರಾಮನಗರ ಹೆಸರನ್ನು ಪುನಃಸ್ಥಾಪನೆ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Nikhil Kumaraswamy challenges to DK Shivakumar we have restore Ramanagara district name sat
Author
First Published Jul 29, 2024, 12:03 PM IST | Last Updated Jul 29, 2024, 12:03 PM IST

ಬೆಂಗಳೂರು (ಜು.30): ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳ್ತಾರೆ. ಆದ್ರೆ, ಅವರಿಗೆ ಒಳ್ಳೆಯದಾಗಲಿ. ಆದ್ರೆ ನಾವು ರಾಮನಗರ ಜಿಲ್ಲೆ ಹೆಸರು ಮರು ಸ್ಥಾಪನೆ ಮಾಡೇ ಮಾಡ್ತೀವಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಹಣೆಬರಹ ಬರೆಯೋದು ಭಗವಂತ ಮತ್ತು ಏಳೂವರೆ ಕೋಟಿ ಜನತೆ. ರಾಜ್ಯದ ಜನತೆ ಕುಮಾರಸ್ವಾಮಿ ಹಣೆಬರಹ ಬರೆಯುತ್ತಾರೆ. ಕಾದು ನೋಡೊಣ ಭಗವಂತ ಯಾರ್ ಯಾರ್ ಹಣೆಬರಹ ಏನು ಬರೆಯುತ್ತಾನೆ, ಈಗಾಗಲೇ ಏನೇನು ಬರೆದಿದ್ದಾನೆ ಅಂತ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಎಂದು ಹೇಳಿದರು.

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ವಿರೋಧ ಎಡಬಿಡಂಗಿತನದ್ದು: ಡಿ.ಕೆ.ಶಿವಕುಮಾರ್‌

ನಾವು ಯಾವತ್ತು ಡಿ.ಕೆ.ಶಿವಕುಮಾರ್ ಅವರನ್ನ ನೆನಪು ಮಾಡಿಕೊಳ್ಳೊಲ್ಲ. ಆದರೆ, ಡಿ.ಕೆ.ಶಿವಕುಮಾರ್ ಹಾಗೆ ಹೇಳ್ತಾರೆ. ನಮ್ಮನ್ನು ನೆನಪು ಮಾಡಿಕೊಳ್ಳುವ ಅವರಿಗೆ ನಾವು ಒಳ್ಳೆಯದಾಗಲಿ ಅಂತ ಹೇಳ್ತೀವಿ. ರಾಜಕೀಯವಾಗಿ ಅವರು ತೆಗೆದುಕೊಳ್ತಿರೋ ನಡೆಗಳು ಸರಿಯಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದ್ರೆ ಅನೇಕ ಟೆಕ್ನಿಕಲ್ ಸಮಸ್ಯೆ ಆಗಲಿವೆ. ರೆವಿನ್ಯೂ ರೆಕಾರ್ಡ್, ಸರ್ಕಾರದ ದಾಖಲೆಗಳು 5 ತಾಲೂಕುಗಳಲ್ಲಿ ಬದಲಾವಣೆ ಆಗಬೇಕು. ಜನರು ಪ್ರತಿನಿತ್ಯ ಜನ ತಾಲೂಕು ಕಚೇರಿಗೆ ಓಡಾಬೇಕು. ಓಟರ್ ಐಡಿ, ಗ್ಯಾಸ್ ಬಿಲ್ ಅಡ್ರೆಸ್ ಇರಬಹುದು. ಇವೆಲ್ಲ ಸಮಸ್ಯೆ ಗಳಾಗುತ್ತವೆ. ಅಷ್ಟು ಸುಲಭವಾಗಿ ಹೆಸರು ಬದಲಾವಣೆ ಮಾಡೋದು ಸಾಧ್ಯವಿಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು 2006ರಲ್ಲಿ ಚಿಕ್ಕಬಳ್ಳಾಪುರ, ರಾಮನಗರ ಅಂತ ಜಿಲ್ಲೆ ಮಾಡಿದ್ದಾರೆ. ಅವತ್ತು ಯಾರೂ ವಿರೋಧ ಮಾಡಿಲ್ಲ. ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಇವತ್ತು ಈ ರಾಮನ ಹೆಸರು ಅಳಿಸುವ ಪ್ರಯತ್ನವನ್ನ ಕಾಂಗ್ರೆಸ್ ಸರ್ಕಾರ ಮಾಡ್ತಿದೆ. ಇವರನ್ನು ಅ ರಾಮನೇ ನೋಡಿಕೊಳ್ತಾನೆ. ಮುಂದಿನ ದಿನಗಳಲ್ಲಿ ರಾಮನಗರದ ಇತಿಹಾಸ, ರಾಮನ ಇತಿಹಾಸ ಯಾರಿಗೂ ಅಳಿಸುವ ಶಕ್ತಿ ಇಲ್ಲ. ಕಾಂಗ್ರೆಸ್ ಸರ್ಕಾರ ಇವತ್ತು ಏನು ಬೇಕಾದ್ರು ತೀರ್ಮಾನ ತೆಗೆದುಕೊಳ್ಳಲಿ. ಸರ್ಕಾರ ಅವರ ಕೈಯಲ್ಲಿ ಇದೆ. ಆಡಳಿತ ಪಕ್ಷ. ಮುಂದಿ‌ನ ದಿನಗಳಲ್ಲಿ ಭಗವಂತ, ರಾಜ್ಯದ ಜನತೆ ಕುಮಾರಸ್ವಾಮಿಗೆ ಶಕ್ತಿ ಕೊಡ್ತಾರೆ. ಆಗ ಮತ್ತೊಮ್ಮೆ ರಾಮನಗರ ಜಿಲ್ಲೆ ಹೆಸರು ಪ್ರತಿಷ್ಠಾಪನೆ ಮಾಡ್ತೀವಿ ಎಂದು ಸವಾಲು ಹಾಕಿದರು.

ಮುಡಾ ಹಗರಣದಿಂದ ಸಿಎಂ ಪಾರಾಗಲು ದೇಸಾಯಿ ಆಯೋಗ ರಚನೆ: ಎಚ್.ಡಿ.ಕುಮಾರಸ್ವಾಮಿ

ಕುಮಾರಸ್ವಾಮಿ ಅನಾರೋಗ್ಯ ವಿಚಾರದ ಬಗ್ಗೆ ಮಾತನಾಡಿ, ಅವರು ಆರೋಗ್ಯವಾಗಿ ಇದ್ದಾರೆ. ನಿನ್ನೆ ಸಣ್ಣಪುಟ್ಟ ವ್ಯತ್ಯಾಸಗಳು ಆಗಿತ್ತು. ಅಪೋಲೋ ಆಸ್ಪತ್ರೆಯಲ್ಲಿ ತಪಾಸಣೆ ಆಗಿದೆ. ಒಂದೂವರೆ ಅಥವಾ ಎರಡು ತಿಂಗಳಿಗೊಮ್ಮೆ ರೋಟಿನ್ ಚೆಕ್ ಅಪ್ ಮಾಡಬೇಕಿತ್ತು. ಡಾಕ್ಟರ್ ಸಲಹೆ ಕೊಟ್ಟಿದ್ದರು. ಆದರೆ, ಕೆಲಸದ ಒತ್ತಡದಲ್ಲಿ ಅದು ಆಗಿರಲಿಲ್ಲ. ರೊಟೀನ್ ಚೆಕ್ಅಪ್ ಆಗಿರಲಿಲ್ಲ. ನಿನ್ನೆ ಎಲ್ಲಾ ಚೆಕಪ್ ಆಗಿದೆ. ಸ್ವಲ್ಪ ಆಯಾಸವಾಗಿದೆ. ಕೆಲಸದ ಒತ್ತಡ, ಹೆಚ್ಚು ಟ್ರಾವೆಲ್ ನಿಂದ ನಿದ್ರೆ ಆಗ್ತಿಲ್ಲ. ತಂದೆಯವರು ಆರಾಮವಾಗಿ ಇದ್ದಾರೆ. ದೆಹಲಿಗೆ ಹೊರಟಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios