ಪೊಲೀಸ್ ವರ್ಗಾವಣೆ ಕಾಯ್ದೆಗೆ ಮತ್ತೆ ತಿದ್ದುಪಡಿ?: ರಾಜಕೀಯ ಗಾಡ್ ಫಾದರ್ ಮೂಲಕ ಅಧಿಕಾರಿಗಳ ಒತ್ತಡ
ರಾಜ್ಯ ಪೊಲೀಸ್ ವರ್ಗಾವಣೆ ಕಾಯ್ದೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡುವ ಕುರಿತು ಪೊಲೀಸರ ಒಂದು ವರ್ಗದಿಂದ ತೀವ್ರ ಲಾಬಿ ನಡೆಯುತ್ತಿದೆ. ತಮ್ಮ ರಾಜಕೀಯ ಗಾಡ್ ಫಾದರ್‌ಗಳ ಮೂಲಕ ಕೆಲ ಪೊಲೀಸ್ ಅಧಿಕಾರಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಡಿ.06): ವರ್ಷದ ಹಿಂದಷ್ಟೇ ಪರಿಷ್ಕರಣೆಗೊಂಡಿದ್ದ ಪೊಲೀಸ್ ವರ್ಗಾವಣೆ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರುವ ವಿಚಾರವಾಗಿ ಇದೀಗ ಚರ್ಚೆ ಶುರುವಾಗಿದೆ. ಈಗಾಗಲೇ ತಿದ್ದುಪಡಿಯಾಗಿರುವ ಕಾಯ್ದೆಯನ್ನು ಮತ್ತೆ ತಿದ್ದುಪಡಿಗೊಳಪಡಿಸುವಂತೆ ಗೃಹ ಇಲಾಖೆ ಮೇಲೆ ಕೆಲ ಪೊಲೀಸ್ ಅಧಿಕಾರಿಗಳ ಒತ್ತಡ ತಂತ್ರ ಹೆಚ್ಚಾಗಿದ್ದು, ಈ ಕುರಿತು ಸರ್ಕಾರದ ಅಂಗಳದಲ್ಲೂ ಚರ್ಚೆಯಾಗಿದೆ.
ರಾಜ್ಯ ಪೊಲೀಸ್ ವರ್ಗಾವಣೆ ಕಾಯ್ದೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡುವ ಕುರಿತು ಪೊಲೀಸರ ಒಂದು ವರ್ಗದಿಂದ ತೀವ್ರ ಲಾಬಿ ನಡೆಯುತ್ತಿದೆ. ತಮ್ಮ ರಾಜಕೀಯ ಗಾಡ್ ಫಾದರ್‌ಗಳ ಮೂಲಕ ಕೆಲ ಪೊಲೀಸ್ ಅಧಿಕಾರಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರ ಪರಿಣಾಮ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಕಾಯ್ದೆಗೆ ಮತ್ತೆ ತಿದ್ದುಪಡಿ ಮಾಡುವ ಕುರಿತ ಚರ್ಚೆ ಸರ್ಕಾರದ ಮಟ್ಟದಲ್ಲಿ ಮುನ್ನೆಲೆಗೂ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರ ವರ್ಗಾವಣೆ ನೀತಿ ಬದಲಾಯಿಸುವ ಅಥವಾ ಪುನರ್ ಪರಿಶೀಲನೆಗೆ ಒಳಪಡಿಸುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಒಲವು ವ್ಯಕ್ತಪಡಿಸಿ ದಂತಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಏನಿದು ವರ್ಗಾವಣೆ ನಿಯಮ?:
ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕ ಪೊಲೀಸ್ ವರ್ಗಾವಣೆ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದಿತ್ತು. ಅಂತೆ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲ್ಮಟ್ಟದ ಅಧಿಕಾರಿಗಳು ಒಂದೇ ಹುದ್ದೆಯಲ್ಲಿ 2 ವರ್ಷಗಳ ಕಾರ್ಯನಿರ್ವಹಣೆಗೆ ಕಾಲಾವಧಿ ನಿಗದಿಪಡಿಸಿತ್ತು. ಈ ಹೊಸ ವರ್ಗಾವಣೆ ನೀತಿ ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಆಡಳಿತ ಸುಧಾರಣೆಗೆ ಅನುಕೂಲವಾಗಿದೆ ಎಂದು ಅಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದರು.
ಆದರೆ ಎರಡು ವರ್ಷಗಳ ಕಾಲಾವಧಿ ನಿಗದಿ ಪಡಿಸಿದ ಪರಿಣಾಮ ಹುದ್ದೆಯ ನಿರೀಕ್ಷೆಯಲ್ಲಿದ್ದ ಕೆಲ ಅಧಿಕಾರಿಗಳಿಗೆ ಇದು ನಿರಾಸೆ ಮೂಡಿಸಿತು. ಈ ಮೊದಲು ಒಂದು ವರ್ಷದ ಅವಧಿ ಮುಗಿದ ಕೂಡಲೇ ಠಾಣೆಗಳಿಂದ ಹಿಡಿದು ಆಯುಕ್ತ ರವರೆಗೆ ಅಧಿಕಾರಿಗಳು ಎತ್ತಂಗಡಿಯಾಗುತ್ತಿದ್ದರು. ಆದರೆ ಈಗ ಎರಡು ವರ್ಷಗಳ ಕಾಲಾವಧಿ ನಿಗದಿಪಡಿಸಿದ ನಂತರ ಇಲಾಖೆಯಲ್ಲಿ ಫಲವತ್ತಾದ ಹುದ್ದೆ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಭಾರೀ ನಿರಾಸೆ ಮೂಡಿತು. ಈ ಗೊಂದಲಗಳಿಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹ ಇಲಾಖೆ, ಪ್ರಸುತ್ತ ಪ್ರಸುತ್ತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂದಿಗೂ ಹೊಸ ವರ್ಗಾವಣೆ ನೀತಿ ಅನ್ವಯವಾಗಲಿದೆ ಎಂದು ಸಷ್ಟಪಡಿಸಿತು. ಇದರೊಂದಿಗೆ ಆಯಕಟ್ಟಿನ ಹುದ್ದೆಗೆ ಯತ್ನಿಸುತ್ತಿದ್ದ ಕೆಲ' ಅಧಿಕಾರಿಗಳ ಆಸೆಗೆ ತಣ್ಣೀರು ಬಿತ್ತು.
ಕಾಯ್ದೆ ವಾಪಸ್ ಸಾಧ್ಯತೆ ಇಲ್ಲ?:
ವರ್ಗಾವಣೆ ನಿಯಮ ಬದಲಿಸುವಂತೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ಮೇಲೆ ಕೆಲವರು ಒತ್ತಡ ಹೇರುತ್ತಿದ್ದಾರೆ. ಆದರೆ ಈ ಲಾಬಿಗೆ ಸಿಎಂ ಹಾಗೂ ಗೃಹ ಸಚಿವರು ಸ್ಪಂದಿಸಿಲ್ಲ. ತಾವೇ ವರ್ಷದ ಹಿಂದೆ ವರ್ಗಾವಣೆ ಕಾಯ್ದೆಗೆ ತಿದ್ದು ಪಡಿ ತಂದು ಮತ್ತೆ ವಾಪಸ್ ಪಡೆ ದರೆ ರಾಜ ಕೀಯವಾಗಿಯೂ ಮುಜುಗರ ಅನುಭವಿಸ ಬೇಕಾಗುತ್ತದೆ ಎಂಬುದು ಸರ್ಕಾರ ನಿಲುವು ಎನ್ನಲಾಗಿದೆ.
ಕರ್ನಾಟಕ ಪೊಲೀಸರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ; ಸಿಕ್ಕೇ ಬಿಡ್ತು ಅಂತರ ಜಿಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್!
ಪೊಲೀಸ್ ವರ್ಗಾವಣೆ ಕಾಯ್ದೆಯನ್ನು ಮತ್ತೆ ಪರಿಷ್ಕರಣೆ ಗೊಳಿಸುವ ಯಾವುದೇ ಯೋಚನೆ ಇಲ್ಲ. ಈ ಸಂಬಂಧ ಸರ್ಕಾರದ ಮಟ್ಟದಲ್ಲೂ ಇಲಾಖೆ ಪ್ರಸ್ತಾಪಿಸಿಲ್ಲ. ಕಾಯ್ದೆ ತಿದ್ದುಪಡಿ ಅಪ್ರಸುತ್ತ ವಿಷಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಪೊಲೀಸ್ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಯೋಚನೆ ಯಾರ ತಲೆಗೂ ಬಂದಿಲ್ಲ. ಎರಡು ವರ್ಷಗಳ ಕಾಲಾವಧಿ ಮುಗಿದ ನಂತರವೇ ವರ್ಗಾವಣೆ ನಡೆಯಲಿದೆ. ಕೆಲ ಪೊಲೀಸರು ನಿಯಮ ಬದಲಿಸುವಂತೆ ಹೇಳಬಹುದು. ಆದರೆ ಸರ್ಕಾರದ ಮಟ್ಟದಲ್ಲಿ ಆ ಬಗ್ಗೆ ಪ್ರಸ್ತಾಪವಿಲ್ಲ.ಇನ್ನು ಹುದ್ದೆ ನಿರೀಕ್ಷೆಯಲ್ಲಿರುವ ಪೊಲೀಸ್ ಅಧಿಕಾರಿಗಳ ವರ್ಗಾವ ಣೆಯನ್ನು ಡಿಜಿಪಿ ನೇತೃತ್ವದ ಪಿಇಬಿ ಮಂಡಳಿ ನಡೆಸಲಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದ್ದಾರೆ.