Asianet Suvarna News Asianet Suvarna News

ಡಿಕೆಶಿ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಗುತ್ತಿಗೆದಾರ ಹೇಮಂತ್ ಸವಾಲು!

ಬಿಬಿಎಂಪಿ ಗುತ್ತಿಗೆದಾರ ಬಾಕಿ ಬಿಲ್ ಕೊಡಲು ಹಣಕ್ಕೆ ಬೇಡಿಕೆ‌ ಇಟ್ಟರಾ ಡಿಸಿಎಂ ಡಿಕೆ ಶಿವಕುಮಾರ್? ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಿಬಿಎಂಪಿ ಗುತ್ತಿಗೆದಾರ ಹೇಮಂತ್ ಹಾಕಿರುವ ಸವಾಲು ಇದೀಗ ಭಾರೀ ವೈರಲ್ ಆಗಿದೆ.

Demand for money Contractor Hemanta accused DK Shivakumar at bengaluru pressclub viral news rav
Author
First Published Aug 8, 2023, 11:58 AM IST

ಬೆಂಗಳೂರು (ಆ.8) : ಬಿಬಿಎಂಪಿ ಗುತ್ತಿಗೆದಾರ ಬಾಕಿ ಬಿಲ್ ಕೊಡಲು ಹಣಕ್ಕೆ ಬೇಡಿಕೆ‌ ಇಟ್ಟರಾ ಡಿಸಿಎಂ ಡಿಕೆ ಶಿವಕುಮಾರ್? ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಿಬಿಎಂಪಿ ಗುತ್ತಿಗೆದಾರ ಹೇಮಂತ್ ಹಾಕಿರುವ ಸವಾಲು ಇದೀಗ ಭಾರೀ ವೈರಲ್(Viral video) ಆಗಿದೆ.

ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷಷ್ಠಿಯಲ್ಲಿ ಮಾತನಾಡಿರುವ ಹೇಮಂತ್, ಡಿಕೆಶಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದರೆ ಅವರು ನಂಬಿರುವ ಅಜ್ಜಯ್ಯನ ಮಠಕ್ಕೆ ಪ್ರಮಾಣ ಮಾಡಲಿ. ಅವರು ಹಣ ಕೇಳಿದ್ದಾರೆ ಎಂದು ನಾನು‌‌ ಪ್ರಮಾಣ ಮಾಡುತ್ತೇನೆ ಎಂದು ಸವಾಲು ಹಾಕಿದ್ದರು.

ಸರಿಯಾದ ಕಾಮಗಾರಿಗೆ ಮಾತ್ರ ಹಣ: ಡಿಸಿಎಂ ಸ್ಪಷ್ಟನೆ

ನ್ಯಾಯಯುತವಾಗಿ ಕೆಲಸ ಮಾಡಿದ್ದೇವೆ. ಕಮಿಷನರ್ ಮೇಲೆ ಯಾಕೆ ಆರೋಪ ಮಾಡ್ತಿರಾ? ಇಷ್ಟು ದಿನ ಅವರೇ ಅಲ್ವಾ ಬಿಲ್  ಪಾವತಿ ಮಾಡ್ತಿದ್ದುದು? ಈಗ ಯಾಕೆ ಅವರು ಬಿಲ್ ತಡೆಯುತ್ತಾರೆ?  ಅವರಿಗೆ ಬಿಲ್ ತಡೆಹಿಡಿಯುವಂತೆ ಹೇಳಿರೋದು ಯಾರು ಅವರ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿರುವ ಗುತ್ತಿಗೆದಾರ ಸಂಘದ ಸದಸ್ಯ ಹೇಮಂತ್.

ಈಗ ಸಮಿತಿ ಮಾಡಿದ್ದಾರೆ, ಬಿಲ್  ಸ್ಯಾಂಕ್ಷನ್ ಮಾಡಿಸಿಕೊಳ್ಳುತ್ತೀರಾ..? ನಾವೇನು ಕಳ್ಳತನ ಮಾಡಿಲ್ಲ, ನಡೀರಿ ಕೋರ್ಟ್ ಗೆ ಹೋಗೋಣ. ಅಲ್ಲೇ ವಾದ ನಡೆಯಲಿ. ನಾನು ಕೂಡ ಕಾಂಗ್ರೆಸ್ ಗೆ ಓಟ್ ಹಾಕಿದವನು. ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ.  94 ಕೋಟಿ ರೂ. ಬಿಲ್ ಬಾಕಿ ಬಿಲ್ ಬರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗುತ್ತಿಗೆದಾರ ಹೇಮಂತ. ಆಕ್ರೋಶ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಡಿಕೆಶಿ ಸವಾಲು ಸ್ವೀಕರಿಸಿ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡುತ್ತಾರಾ? ಕಾದು ನೋಡಬೇಕು.

ಪಾಲಿಕೆ ಬಾಕಿ ಬಿಲ್ ವಿಳಂಬ: ಎಚ್‌ಡಿಕೆ ಮುಂದೆ ಬಿಬಿಎಂಪಿ ಗುತ್ತಿಗೆದಾರರ ಅಳಲು

Follow Us:
Download App:
  • android
  • ios