ಇವತ್ತೂ ಸಿಗ್ಲಿಲ್ಲ ಜಾಮೀನು: ಅ.17ಕ್ಕೆ ಡಿಕೆಶಿ ಭವಿಷ್ಯ ನಿರ್ಧಾರ ಸಾಧ್ಯತೆ
ಒಂದೆಡೆ ಇಡಿ ಕೋರ್ಟ್ ನಿಂದ ಅ.25ರವರೆಗೂ ಡಿಕೆಶಿಗೆ ನ್ಯಾಯಾಂಗ ಬಂಧನ| ಮತ್ತೊಂದೆಡೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ| 1 ತಾಸು ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ| ವಾದ ಆಲಿಸಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದ ದೆಹಲಿ ಹೈಕೋರ್ಟ್.
ನವದೆಹಲಿ, [ಅ.15]: ದೆಹಲಿ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣದ ಆರೋಪದಡಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮತ್ತೆ ಮುಂದೂಡಿದೆ.
ಡಿಕೆಶಿ ಮತ್ತೆ ನ್ಯಾಯಾಂಗ ಬಂಧನಕ್ಕೆ: ಜೈಲಿನಿಂದ ಆಚೆ ಬರಲು ಒಂದೇ ಹಾದಿ
ಅ.17ಕ್ಕೆ ಗುರುವಾರ ಮಧ್ಯಾಹ್ನ 3.30ಕ್ಕೆ ಮುಂದೂಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ಇಂದು ಡಿ.ಕೆ.ಶಿವಕುಮಾರ್ಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲರು ವಾದ ಮಂಡನೆ ಮಾಡಿದರು. ಇನ್ನು ಗುರುವಾರ ಇ.ಡಿ.ಅಧಿಕಾರಿಗಳು ಪ್ರತಿವಾದ ಮಂಡಿಸಲಿದ್ದಾರೆ.
ಮುಗಿಯದ ಜೈಲು ವಾಸ: ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ!
ಮೊದಲಿಗೆ ಡಿ.ಕೆ.ಶಿವಕುಮಾರ್ ಪರ ಮೊದಲು ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು. ಅಷ್ಟರಲ್ಲಿ ಆಗಮಿಸಿದ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಿದರು.
ಡಿಕೆಶಿ ಪರ ಮನು ಸಿಂಘ್ವಿ ವಾದದ ಹೈಲೆಟ್ಸ್
* ನನ್ನ ಕಕ್ಷಿದಾರರಾದ ಡಿ.ಕೆ.ಶಿವಕುಮಾರ್ ಈಗಾಗಲೇ 45 ದಿನದಿಂದ ಬಂಧನದಲ್ಲಿ ಇದ್ದಾರೆ. ಇ.ಡಿ.ಅಧಿಕಾರಿಗಳು ಈ ಪ್ರಕರಣವನ್ನು ಹ್ಯಾಂಡಲ್ ಮಾಡಿದ ಕ್ರಮದಲ್ಲಿ ತಪ್ಪಿದೆ. ಇದು ಬಂಧನ ಮಾಡುವ ಕೇಸ್ ಅಲ್ಲವೇ ಅಲ್ಲ.
ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?
* ಅರೆಸ್ಟ್ ಮಾಡದೆ ವಿಚಾರಣೆ ನಡೆಸಬಹುದಿತ್ತು. ಪಿಎಂಎಲ್ಎ ಕಾಯ್ದೆ 120 ಬಿ ಸೆಕ್ಷನ್ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಡಿ.ಕೆ.ಶಿವಕುಮಾರ್ ಅವರ ಈ ಪ್ರಕರಣದಲ್ಲಿ ಅದು ಅನಗತ್ಯವಾಗಿತ್ತು ಎಂದು ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
* ಐಟಿ ಕಾಯ್ದೆಯಡಿ ಅನವಶ್ಯಕವಾಗಿ ಕಸ್ಟಡಿಗೆ ತೆಗೆದುಕೊಳ್ಳುವಂತಿಲ್ಲ. ನನ್ನ ಕಕ್ಷಿದಾರರು ಶಾಸಕರು. ಅವರು ದೇಶ ಬಿಟ್ಟು ಹೋಗುವ ಅವಕಾಶವೂ ಇಲ್ಲ. ವಿಚಾರಣೆಗೆ ಎಂದೂ ಪ್ರತಿರೋಧ ಒಡ್ಡಿಲ್ಲ.
* ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಇ.ಡಿ.ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಆಧಾರವೇ ಇಲ್ಲ. ಸಾಕ್ಷ್ಯ ನಾಶ ಮಾಡಿದ್ದರೆ ವಿಚಾರಣೆಯಿಂದಲೇ ಅವರು ನುಣುಚಿಕೊಳ್ಳುತ್ತಿದ್ದರು. ಅಷ್ಟಕ್ಕೂ ಅವರೇನು ಸಾಕ್ಷಿ ನಾಶ ಮಾಡಿದ್ದಾರೆಂದು ಇ.ಡಿ.ಅಧಿಕಾರಿಗಳೇ ಹೇಳಬೇಕು.
* ಡಿ.ಕೆ.ಶಿವಕುಮಾರ್ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ವೈದ್ಯಕೀಯ ವರದಿಗಳನ್ನೂ ಪರಿಗಣಿಸಿ ಜಾಮೀನು ನೀಡಬೇಕು ಎಂದು ಹೇಳಿದರು. ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಬೆಳಗ್ಗೆ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ್ದ ಇ.ಡಿ.ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಮತ್ತೆ 10 ದಿನಗಳ ಕಾಲ ಅಂದ್ರೆ ಅ.25ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.