ಮೃತಪಟ್ಟವ್ಯಕ್ತಿಯ ಮರಣ ದೃಢೀಕರಣ ಮಹಜರು ಮಾಡುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್‌ ಮೇಲೆ ಹಲ್ಲೆ ನಡೆದಿರುವ ಘಟನೆ ಸೋಂಪುರ ಹೋಬಳಿಯ ಘಂಟೆಹೊಸಹಳ್ಳಿಯಲ್ಲಿ ನಡೆದಿದೆ.

ದಾಬಸ್‌ಪೇಟೆ (ಆ.1) :  ಮೃತಪಟ್ಟವ್ಯಕ್ತಿಯ ಮರಣ ದೃಢೀಕರಣ ಮಹಜರು ಮಾಡುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್‌ ಮೇಲೆ ಹಲ್ಲೆ ನಡೆದಿರುವ ಘಟನೆ ಸೋಂಪುರ ಹೋಬಳಿಯ ಘಂಟೆಹೊಸಹಳ್ಳಿಯಲ್ಲಿ ನಡೆದಿದೆ.

ಕೃಷ್ಣಪ್ಪ ಹಲ್ಲೆ ಮಾಡಿದವರು. ಈತನ ಅಣ್ಣ ಹನುಮಂತರಾಯಪ್ಪನÜ ಮಗ ಚಿದಂಬರ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದರೆನ್ನಲಾಗಿದೆ. ಮರಣ ಪ್ರಮಾಣ ಪತ್ರಕ್ಕಾಗಿ ಆತನ ಪೋಷಕರು ಅರ್ಜಿ ಸಲ್ಲಿಸಿದ್ದರು. ಮರಣ ದೃಢೀಕರಣಕ್ಕಾಗಿ ಚಿದಂಬರ ಅವರ ಪಕ್ಕದ ಮನೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ವಿಚಾರಣೆ ಮಾಡುತ್ತಿದ್ದ ವೇಳೆ ಚಿದಂಬರ ಅವರ ಚಿಕ್ಕಪ್ಪನಾದ ಕೃಷ್ಣಪ್ಪ ಪಕ್ಕದ ಮನೆಯಲ್ಲಿ ಕೇಳಿದ್ದಕ್ಕಾಗಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಚಿತ್ತೂರಿನಲ್ಲಿ ರೈಲು ಸೀಟಿನ ವಿಚಾರಕ್ಕೆ ಮಾರಾಮಾರಿ

ಗಾಯಗೊಂಡ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್‌ ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಹಸೀಲ್ದಾರ್‌ ಕೆ.ಅರುಂಧತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ, ಗೋಪಾಲ್‌ ಆರೋಗ್ಯ ವಿಚಾರಿಸಿದರು. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮೇಲೆ ಹಲ್ಲೆ ಮಡುವುದು ಸರಿಯಲ್ಲ. ಸಮಸ್ಯೆಗಳಿದ್ದರೆ ಮೇಲಿನ ಅಧಿಕಾರಿಗಳಿಗೆ ತಿಳಿಸಬೇಕು. ಅಧಿಕಾರಿಗಳಿಗೆ ಕೆಲಸ ಮಾಡುವ ವಾತಾವರಣ ಕಲ್ಪಿಸಿದಾಗ ಮಾತ್ರ ಜನಸ್ನೇಹಿ ಆಡಳಿತ ನೀಡಬಹುದು. ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾರೆಂದು ಅರುಂಧತಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ರಘುಪತಿ ಮಾತನಾಡಿ, ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಬಾರದು. ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘದಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಂಬುಲೆನ್ಸ್‌ ಚಾಲಕ, ಗರ್ಭಿಣಿ ಪತ್ನಿಗೆ ಹಲ್ಲೆ, ಜೀವಬೆದರಿಕೆ: ದೂರು, ಪ್ರತಿದೂರು ದಾಖಲು

ಈ ವೇಳೆ ಆರ್‌ಐಗಳಾದ ಕುಮಾರಸ್ವಾಮಿ, ಮುನಿರಾಜು, ರವಿಕುಮಾರ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಬಾಲಕೃಷ್ಣ ರಘುಪತಿ, ರೋಹಿತ್‌, ಕಿರಣ್‌ ಪ್ರಕಾಶ್‌, ಆಕಾಶ್‌ ಗಾಯ್ಕವಾಡ್‌, ಸಹಾಯಕರಾದ ಮಂಜುನಾಥ್‌, ಪ್ರಕಾಶ್‌, ನಾಗರಾಜು ಇತರರಿದ್ದರು.