ಆಂಬುಲೆನ್ಸ್ ಚಾಲಕ, ಗರ್ಭಿಣಿ ಪತ್ನಿಗೆ ಹಲ್ಲೆ, ಜೀವಬೆದರಿಕೆ: ದೂರು, ಪ್ರತಿದೂರು ದಾಖಲು
ಖಾಸಗಿ ಸೇವಾ ಸಂಸ್ಥೆಯ ತುರ್ತು ಚಿಕಿತ್ಸಾ ವಾಹನದ ಚಾಲಕ ಮತ್ತು ಅವರ ತುಂಬು ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ವಿರಾಜಪೇಟೆ ನಗರ ಠಾಣೆಯಲ್ಲಿ ದಾಖಲಾಗಿದೆ.
ವಿರಾಜಪೇಟೆ (ಜು.30) : ಖಾಸಗಿ ಸೇವಾ ಸಂಸ್ಥೆಯ ತುರ್ತು ಚಿಕಿತ್ಸಾ ವಾಹನದ ಚಾಲಕ ಮತ್ತು ಅವರ ತುಂಬು ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ವಿರಾಜಪೇಟೆ ನಗರ ಠಾಣೆಯಲ್ಲಿ ದಾಖಲಾಗಿದೆ.
ಮೂಲತಃ ಬೆಳ್ತಂಗಡಿ ತಾಲೂಕಿನ ನಿವಾಸಿಯಾಗಿರುವ ವಿರಾಜಪೇಟೆ ನಗರದ ಪಂಜರಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಆಂಬುಲೆನ್ಸ್ ಚಾಲಕ ಶಿಜೊ (30 ) ಮತ್ತು ಅವರ ಪತ್ನಿ ನಿಶಾ (30) ಹಲ್ಲೆಗೆ ಒಳಗಾದವರು.
ಅರ್ಧ ಚಂದ್ರಾಕೃತಿಯಲ್ಲಿ ಕಣ್ಮನ ಸೆಳೆಯುತ್ತಿದೆ ಕೊಡಗಿನ ಮಿನಿ ನಯಾಗರ!
ಘಟನೆಯ ವಿವರ: ನಗರದ ಖಾಸಗಿ ಸಂಸ್ಥೆಯ ಆಂಬುಲೆನ್ಸ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಶಿಜೊ ಚಾಲಕನಾಗಿದ್ದಾರೆ. ಪತ್ನಿ, 8 ತಿಂಗಳ ತುಂಬು ಗರ್ಭಿಣಿ ನಿಶಾ ಅವರು ಖಾಸಗಿ ನರ್ಸಿಂಗ್ ಹೋಂನಲ್ಲಿ ದಾದಿಯಾಗಿದ್ದಾರೆ. ಶಿಜೊ ಸ್ವತಃ ವಾಹನ ಹೊಂದಲು ಆಭರಣ ಅಡವಿಟ್ಟು ವಾಹನವೊಂದನ್ನು ಖರೀದಿಸಿದ್ದಾರೆ. ಈ ವಿಷಯ ಸಂಸ್ಥೆಗೆ ತಿಳಿದು, ಶಿಜೊ ಅವರನ್ನು ಜು.27ರಂದು ಸಂಸ್ಥೆಯ ಕಚೇರಿಗೆ ಬರಲು ಹೇಳಿದ್ದರು. ಅಲ್ಲಿಗೆ ತೆರಳಿದ ಶಿಜೊ ಮೇಲೆ ಸಂಸ್ಥೆಯ ಸದಸ್ಯರು ಏಕಾಏಕಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಇತ್ತ ಪತ್ನಿ ನಿಶಾ ಅವರು ಶಿಜೋ ಕರೆ ಸ್ವೀಕರಿಸದ ಕಾರಣ ತಮ್ಮ ಕರ್ತವ್ಯ ಮುಗಿಸಿ ಸಂಜೆ ಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯ ಕಚೇರಿಗೆ ಹೋಗಿದ್ದಾರೆ. ಅಲ್ಲಿ ಸಂಸ್ಥೆಯ ಸದಸ್ಯರು ತಮ್ಮಿಬ್ಬರ ಮೇಲೂ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ವಿರಾಜಪೇಟೆ ನಗರ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸಂಸ್ಥೆಯ ಸದಸ್ಯ ಮೊಹಮದ್ ರಫಿ, ಇರ್ಷಾದ್ ಮತ್ತು ರಿಯಾಜ್ ಎಂಬವವರ ಮೇಲೆ ಶಿಜೊ ಅವರ ಪತ್ನಿ ನಿಶಾ ಜೀವ ಬೆದರಿಕೆ ಮತ್ತು ಕೂಡಿಹಾಕಿ ಹಾಕಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Mangaluru crimes: ಪ್ರೀತಿಸುವುದಾಗಿ ನಂಬಿಸಿ ಕೇರಳ ಮೂಲದ ಯುವಕರಿಂದ ಅಪ್ರಾಪ್ತೆಯ ಅತ್ಯಾಚಾರ
ಪ್ರತಿ ದೂರು ದಾಖಲು: ಆಂಬುಲೆನ್ಸ್ ವಾಹನ ಚಾಲಕನಾಗಿದ್ದ ಶಿಜೊ ಮತ್ತು ಈತನ ಪತ್ನಿ ನಿಶಾಳಿಗೆ ವಿರಾಜಪೇಟೆ ಖಾಸಗಿ ನರ್ಸಿಂಗ್ ಹೋಂನಲ್ಲಿ ನಮ್ಮ ಸಂಸ್ಥೆ ದೊರಕಿಸಿಕೊಟ್ಟಿದೆ. ದಂಪತಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದೆ. ಕೆಲವು ಸಮಯದಿಂದ ಚಾಲಕ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಾನೆ. ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ವಾಹನದ ಚಾಲನೆಯಲ್ಲಿ ದೊರೆತ ಹಣ ದುರುಪಯೋಗ ಪಡಿಸಿಕೊಂಡಿದ್ದು, ಇದಕ್ಕೆ ಆತನ ಪತ್ನಿ ಸಾಥ್ ನೀಡಿದ್ದಾರೆಂದು ಆರೋಪಿಸಿ ವಿರಾಜಪೇಟೆಯ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವಿರಾಜಪೇಟೆ ನಗರ ಠಾಣೆಯಲ್ಲಿ ಶಿಜೊ ಮತ್ತು ನಿಶಾ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.