ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲೂ ಡೆಡ್ಲಿ ವ್ಹೀಲಿಂಗ್ ಪುಂಡರ ಹಾವಳಿ: ಇಲ್ಲಿದೆ ಝಲಕ್
ಬೆಂಗಳೂರು ಹಾಗೂ ರಾಮನಗರದ ಕೆಲವು ಬೈಕ್ ವ್ಹೀಲಿಂಗ್ ಮಾಡುವ ಪುಂಡರು, ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು (ಜು.07)): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಲ್ಲಿ, ಗಲ್ಲಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದ ಪುಂಡರ ಗುಂಪು ಈಗ, ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ (Bengaluru Mysuru Expressway) ಗೂ ಲಗ್ಗೆಯಿಟ್ಟಿದೆ. ವಾಹನಗಳು ಬರುವ ವಿರುದ್ಧ ದಿಕ್ಕಿನಲ್ಲಿ ಬೈಕ್ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ಯುವಕರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಾಜ್ಯ ರಾಜಧಾನಿ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಅವರನ್ನು ವಶಕ್ಕೆ ಪಡೆದು ಬುದ್ಧಿ ಕಲಿಸುವ ನಿಟ್ಟಿನಲ್ಲಿ ಪೊಲೀಸರು ಭಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಇನ್ನು ಬೆಂಗಳೂರಿನ ಗಲ್ಲಿ, ಗಲ್ಲಿಗಳಲ್ಲಿಯೂ ಸಿಸಿ ಕ್ಯಾಮೆರಾಗಳಿದ್ದು, ಸಿಕ್ಕಿಕೊಳ್ಳುತ್ತೇವೆ ಎಂಬ ಭಯದಿಂದ ಈಗ ವ್ಹೀಲಿಂಗ್ ಮಾಡಿ ಇತರೆ ವಾಹನ ಸವಾರರಿಗೆ ಕಿರುಕುಳ ನೀಡುವ ಪುಂಡರ ಗುಂಪು ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವ್ಹೀಲಿಂಗ್ ಮಾಡಲು ಲಗ್ಗೆಯಿಟ್ಟಿದ್ದಾರೆ.
Bengaluru: ಹೊಂಡಾ ಕಂಪನಿ ನಕಲಿ ಬಿಡಿಭಾಗಗಳ ಮಾರಾಟ: ನಿಮ್ಮ ಗಾಡಿಗೂ ಈ ಪಾರ್ಟ್ಸ್ ಇದೆನಾ ನೋಡಿ..
ರಾಜ್ಯದ ರಾಜಧಾನಿ ಬೆಂಗಳೂರು- ಸಾಂಸ್ಕೃತಿಕ ರಾಜಧಾನಿ ಮೈಸೂರು ಸಂಪರ್ಕ ಮಾಡುವ ಎಕ್ಸ್‌ಪ್ರೆಸ್ ವೇನಲ್ಲಿ ಪುಂಡರ ಡೆಡ್ಲಿ ವೀಲ್ಹಿಂಗ್ ಮಾಡುತ್ತಿದ್ದಾರೆ. ಇಷ್ಟು ದಿನ ಬೆಂಗಳೂರಿನ ಗಲ್ಲಿಗಳು, ಪ್ರಮುಖ ರಸ್ತೆಗಳಲ್ಲಿ ಹಾಗೂ ಹೊರ ವರ್ತುಲ ರಸ್ತೆಗಳು ಹಾಗೂ ನೈಸ್ ರಸ್ತೆಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಪುಂಡರ ಗುಂಪು ಈಗ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಗೂ ವ್ಹೀಲಿಂಗ್ ಮಾಡಲು ಆಗಮಿಸಿದ್ದಾರೆ. ಇನ್ನು ಅದರಲ್ಲಿಯೂ ಎಕ್ಸ್‌ಪ್ರೆಸ್ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ವ್ಹೀಲಿಂಗ್ ಮಾಡಿದ ಅಸಾಮಿ ಎದುರಿನಿಂದ ಬರುವವರಿಗೆ ಜೀವಭಯ ತಂದಿಟ್ಟಿದ್ದಾನೆ.
ಇನ್ನು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೈಸೂ ಕಡೆಯಿಂದ ಬೆಂಗಳೂರಿನ ಕಡೆಗೆ ವೇಗವಾಗಿ ಬರುತ್ತಿದ್ದ ವಾಹನಗಳ ಎದುರು ವೀಲ್ಹಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಜೊತೆಗೆ, ವೀಲ್ಹಿಂಗ್ ಮಾಡುವುದು ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ, ತಮ್ಮೊಂದಿಗೆ ಬೈಕ್‌ನಲ್ಲಿ ಯುವತಿಯನ್ನ ಹಿಂಬದಿ ಕೂರಿಸಿಕೊಂಡು ವೀಲ್ಹಿಂಗ್ ಮಾಡಿದ್ದು, ಆ ಯುವತಿ ಪ್ರಾಣಭಯದಿಂದ ಕೂಗುವ ದೃಶ್ಯವೂ ಕಂಡುಬರುತ್ತಿದೆ.
ಇನ್ನು ಎಕ್ಸ್‌ಪ್ರೆಸ್ ವೇನ ಮತ್ತೊಂದು ರಸ್ತೆಯಲ್ಲಿ ಯುವತಿಯನ್ನ ಹಿಂಬದಿ ಕೂರಿಸಿಕೊಂಡು ಡೆಡ್ಲಿ ವ್ಹೀಲಿಂಗ್ ಮಾಡಲಾಗಿದೆ. ಯುವಕನ ಡೆಡ್ಲಿ ವ್ಹೀಲಿಂಗ್ ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ಕಿಡಿಗೇಡಿ ಯುವಕರ ಮೇಲೆ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರ ನಡುವೆ ಎಕ್ಸ್‌ಪ್ರೆಸ್ ವೇನಲ್ಲಿ ಭಯಾನಕ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರ ಜೀವಕ್ಕೆ ಕುತ್ತು ತರುತ್ತೆ ಎಂದು ದೂರು ದಾಖಲಿಸಿದ್ದಾರೆ.
ಹಾಸನದಲ್ಲಿ ಗನ್ ಹಿಡಿದು ಮುಸ್ಲಿಂ ಯುವಕರ ಪುಂಡಾಟ: ಸಾರ್ವಜನಿಕರಲ್ಲಿ ಆತಂಕ
ವ್ಹೀಲಿಂಗ್ ಪುಂಡರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು: ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ದೂರು ಗಮನಿಸಿ ವ್ಹೀಲಿಂಗ್ ಪುಂಡರಿಗೆ ಪೊಲೀಸರು ಬಲೆ ಬೀಸಿದ್ದಾರೆ. ವ್ಹೀಲಿಂಗ್ ಮಾಡುತ್ತಿರುವ ಬೈಕ್ ನಂಬರ್ ಪರಿಶೀಲನೆ ನಡೆಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ತಾವು ಸಿಕ್ಕಿಕೊಂಡರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಅನುಕೂಲ ಆಗುವಂತೆ ಯುವಕರು ಬೈಕ್‌ನ ನಂಬರ್ ಪ್ಲೇಟ್ ನಲ್ಲಿ ವಾಹನ ಸಂಖ್ಯೆ ಆಳಿಸಿ ಹಾಕಿದ್ದರು. ಈಗ ವ್ಹೀಲಿಂಗ್ ಮಾಡಿದ ಬೆಂಗಳೂರಿನ ಶೋಯೆಬ್ ಮತ್ತು ಆತನ ಸ್ನೇಹಿತನನ್ನ ರಾಮನಗರ ಪೊಲೀಸರು ಬಂಧಿಸಿದ್ದಾರೆ.