ಬೆಂಗಳೂರು :  ದಕ್ಷಿಣ ವಿಭಾಗದ ಪೊಲೀಸರು ರಾತ್ರೋ ರಾತ್ರಿ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ

ಡಿಸಿಪಿ ಅಣ್ಣಾಮಲೈ ಹಾಗೂ ಎಸಿಪಿ ಮಹದೇವ್ ನೇತೃತ್ವದ ತಂಡವು ದಾಳಿ ನೇತೃತ್ವ ವಹಿಸಿದ್ದು,  5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್ ಗಳ ಮನೆ ಮೇಲೆ ಧಿಡೀರ್ ದಾಳಿ ನಡೆಸಿದ್ದಾರೆ.  

ಸುಬ್ರಮಣ್ಯಪುರ , ತಲಘಟ್ಟಪುರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್ ಗಳ‌ ಮನೆ ಮೇಲೆ  ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Brother in Arms: ಅಣ್ಣಾಮಲೈ ಕಂಡಂತೆ ಮಧುಕರ್ ಶೆಟ್ಟಿ!

ಒಟ್ಟು 32 ರೌಡಿಶೀಟರ್ ಗಳು ಹಾಗೂ 44 MOB ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ 71 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಅನಧಿಕೃತವಾಗಿ ಹಾಗೂ ದಾಖಲೆಗಳಿಲ್ಲದೇ ರೌಡಿಶೀಟರ್ ಗಳು ಬಳಕೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.