Brother in Arms: ಅಣ್ಣಾಮಲೈ ಕಂಡಂತೆ ಮಧುಕರ್ ಶೆಟ್ಟಿ!
ದಕ್ಷ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದೀಗ ಸಿಂಗಂ ಖ್ಯಾತಿಯ, ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಾಮಲೈ ಮಧುಕರ್ ಶೆಟ್ಟಿ ಜೊತೆಗಿನ ಕೆಲ ನೆನಪುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
ಬೆಂಗಳೂರು[ಡಿ.29]: ಪ್ರಾಮಾಣಿಕ ಹಾಗೂ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಎಚ್1 ಎನ್1 ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನರಯುಸಿರೆಳೆದಿದ್ದಾರೆ. ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದ ಖಡಕ್ ಅಧಿಕಾರಿ ಸಾವಿಗೆ ಗಣ್ಯರು ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯ ಅಗಲುವಿಕೆಗೆ ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿ ರವಿ ಪಡಿ. ಚೆನ್ನಣ್ಣನವರ್, ಸಿಂಗಂ ಖ್ಯಾತಿಯ ಅಣ್ಣಾಮಲೈ ತಮ್ಮ ಸಹೋದ್ಯೋಗಿ ಮಧುಕರ್ ಶೆಟ್ಟಿ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಮಧುಕರ್ ಶೆಟ್ಟಿ ಸಾವಿನಿಂದ ಭಾವುಕರಾದ ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಅಣ್ಣಾಮಲೈ 'ಖಡಕ್ ಪೊಲೀಸ್ ಅಧಿಕಾರಿ, ಐಪಿಎಸ್ ಮಧುಕರ್ ಶೆಟ್ಟಿ ಸಾವಿನ ಸುದ್ದಿ ನನಗೆ ಆಘಾತವುಂಟು ಮಾಡಿದೆ. ನಾಣು ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರ ಕುಟುಂಬವನ್ನು ತೀರಾ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಭ್ರಷ್ಟರನ್ನು ಭೇಟಿಯಾಡುತ್ತಿದ್ದ ಮಧುಕರ್, ಎಲ್ಲಿಯೂ ಹಣದ ಆಮಿಷಕ್ಕೆ ಬಲಿಯಾಗಲಿಲ್ಲ. ಅವರೊಬ್ಬ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ. ನಾಡಿನ ಜನತೆಗಾಗಿ ಅವರು ಮಾಡಿದ ಸೇವೆ ಹಾಗೂ ಚಿಕ್ಕಮಗಳೂರಿನಲ್ಲಿ ಅವರು ಕೈಗೊಂಡ ಕ್ರಮಗಳು ಶ್ಲಾಘನೀಯ. ಎಸ್ಟೇಟ್ ಮಾಲಿಕರು ಬಡವರಿಂದ ಕಸಿದುಕೊಂಡಿದ್ದ ಭೂಮಿಯನ್ನು ಅವರಿಗೆ ಮರಳಿಸಿಕೊಡಲು ಜಿಲ್ಲಾಧಿಕಾರಿಗೆ ಅವರು ಹಾಕಿದ ಒತ್ತಡ ಮರೆಯಲಸಾಧ್ಯ. ಭ್ರಷ್ಟಾಚಾರ ಈ ಖಡಕ್ ಐಪಿಎಸ್ ಅಧಿಕಾರಿಯ ದಕ್ಷತೆ ಎಲ್ಲರಿಗೂ ಸ್ಪೂರ್ತಿ. ಅವರು ನಮ್ಮನ್ನು ಬಿಟ್ಟುಹೋದದ್ದು ನೋವು ಕೊಟ್ಟಿದೆ' ಎಂದಿದ್ದಾರೆ.
Sad and tragic to hear our dearest Madhukar Shetty sir is no more.
Had the privilege of knowing his close relatives in Udupi and it’s remarkable for 47 years he had this fierce will power and unbending ethic which was channelled to make our world a better place. May be the practicalities of our world couldn’t touch or change him from his purest state of being. His deeds in Chikkamagaluru are legendary - Land distribution to the poor which was encroached by the estate owners. He pushed his DC to do that. A village is named after him by the grateful people; Every SP who has worked there is benchmarked to him- not only for the work we do but for the ideals with which we live; his missionary zeal non-tolerance for petty corruption; taking officers to his home for lunch after a crime meeting. List is endless...As the welsh poet, Dylan Thomas memorably wrote - “Rage, rage against the dying of the light and do not go gentle into that good night”.
You didn’t not go gently sir, you have left an indelible mark and l’m sure you will continue to live among us with your ideals.
Rest In Peace sir!!!
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಐಪಿಎಸ್ ಮಧುಕರ್ ಶೆಟ್ಟಿ ಈಗ ನೆನಪು ಮಾತ್ರ. ಹೀಗಿದ್ದರೂ ಅವರ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದರ್ಶ.