ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾಗಾಂಧಿ ಹೇಳಿದಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದೇನೆ!
ನಾನು ತಿಹಾರ್ ಜೈಲಿನಲ್ಲಿದ್ದಾಗ, ಸೋನಿಯಾ ಗಾಂಧಿ ಬಂದು ನನ್ನ ಕಿವಿಯಲ್ಲಿ ಹೇಳಿದಂತೆ ಪಕ್ಷ ಸಂಘಟನೆಯೊಂದಿಗೆ ಯಾರ ಸಹಾಯ ಸಹಕಾರ ಇಲ್ಲದೇ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು (ಡಿ.31): ನಾನು ತಿಹಾರ್ ಜೈಲಿನಲ್ಲಿದ್ದಾಗ, ಸೋನಿಯಾ ಗಾಂಧಿ ಅವರು ಬಂದು ನನ್ನ ಕಿವಿಯಲ್ಲಿ ಹೇಳಿದ್ದರು. ಅದೆ ರೀತಿ ರಾಜ್ಯದಲ್ಲಿ ನಾನು ಸಿದ್ದರಾಮಯ್ಯ ನವರು ಹಗಲು ರಾತ್ರಿ ಕೆಲಸ ಮಾಡಿದ್ದೇವೆ. ಯಾರ ಸಹಾಯ ಸಹಕಾರ ಇಲ್ಲದೇ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದೇ ಬರ್ತೇವೆ ಎಂದು ಕೆಲಸ ಮಾಡಿ ಅದರಂತೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡ ಮಾಡುವ 2023ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ವಿದ್ಯಾರ್ಥಿ ಯಾಗಿದ್ದಾಗ ರೈಲು ತಡೆದು ಪ್ರತಿಭಟನೆ ಮಾಡಿದ್ದೆನು. ಇವತ್ತು ಆ ಫೋಟೋ ನನಗೆ ಕೊಟ್ಟಿದ್ದಾರೆ. 40 ವರ್ಷಗಳಿಂದ ನಾನು ಪ್ರಶಸ್ತಿ ತಗೊಂಡಿರಲಿಲ್ಲ. ಆದರೆ ಬದುಕು ಏನ್ ಮಾಡೋದು ನಿಮ್ ಬಿಟ್ಟು ನಾವು ಇರೋ ಆಗಿಲ್ಲ. ಸಂಸಾರ ಮಾಡಿದಂತೆ ನಿಮ್ಮನ್ನು ಕಟ್ಟಿಕೊಂಡು ಹೋಗುಬೇಕಿದೆ. ನನಗೆ ಒಂದು ಬಿರುದು ಬೇರೆ ಕೊಟ್ಟಿದ್ದೀರಿ, ಬಂಡೆ ಅಂತಾ. ಆ ಬಂಡೆಗೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದರು.
ಸಂಸಾರದಲ್ಲಿ ಕಲಹ, ಡ್ರಾಪ್ ಕೊಡುವ ನೆಪದಲ್ಲಿ ಕತ್ತು ಸೀಳಿ ಕೊಂದ ಪತಿ!
ಜೊತೆಗೆ, ಟ್ರಬಲ್ ಶ್ಯೂಟರ್ ಅಂತಾ ಬಿರುದು ಕೊಟ್ರಿ. ಬ್ರಹ್ಮ ವಿಷ್ಣು ಮಹೇಶ್ವರ ಎಲ್ಲರೂ ನೀವು. ಆದರೆ ಸತ್ಯ ಏನಿದೆ ಅದನ್ನು ಮಾತ್ರ ಬರೀರಿ. ಇವತ್ತು ಹಾರ ಹಾಕಿದ್ದೀರಿ, ಅದು ದೊಡ್ಡ ಜವಬ್ದಾರಿ. ನಾನು ತಿಹಾರ್ ಜೈಲಿನಲ್ಲಿದ್ದಾಗ, ಸೋನಿಯಾ ಗಾಂಧಿ ಯವ್ರು ಬಂದು ನನ್ನ ಕಿವಿಯಲ್ಲಿ ಹೇಳಿದ್ದರು. ಅದೆ ರೀತಿ ರಾಜ್ಯದಲ್ಲಿ ನಾನು ಸಿದ್ದರಾಮಯ್ಯ ನವರು ಹಗಲು ರಾತ್ರಿ ಕೆಲಸ ಮಾಡಿದ್ದೇವೆ. ಯಾರ ಸಹಾಯ ಸಹಕಾರ ಇಲ್ಲದೇ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದೇ ಬರ್ತೇವೆ ಎಂದು ಕೆಲಸ ಮಾಡಿ ಅದರಂತೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ನಾನು ನನ್ನ ಹಿಸ್ಟರಿ, ಬದುಕಿನ ಬಗ್ಗೆ ಚರ್ಚೆ ಮಾಡುವ ಅಗತ್ಯತೆ ಇಲ್ಲ. ನಮ್ಮ ನಂಬಿಕೆಯೇ ನಮ್ಮ ವಿಶ್ವಾಸ. ನನಗೆ ಒಬ್ಬರು ಗುರು ಇದ್ದಾರೆ, ನಾನು ಒಂದು ಗುರಿ ಇಟ್ಟುಕೊಂಡು ಹೋಗ್ತಿದ್ದೇನೆ. ನನ್ನ ಆತ್ಮವಿಶ್ವಾಸವೇ ನನ್ನ ಬಲ. ತಿಹಾರ್ ಜೈಲಿನಲ್ಲಿದಾಗ ಆತ್ಮವಿಶ್ವಾಸ ಇತ್ತು. ನ್ಯಾಯದ ಮೇಲೆ ನಂಭಿಕೆ ಇದೆ ನಾನು ಏನು ತಪ್ಪು ಮಾಡಿಲ್ಲ ಹೊರಗೆ ಬರ್ತೇನೆ ಎಂದು. ಅದೇ ಆತ್ಮವಿಶ್ವಾಸ ದಲ್ಲಿ ನಾನು ಮುಂದೆ ಹೋಗ್ತಿದ್ದೇನೆ. ನಾವೇನು ದೇವರು ಅಲ್ಲ, ನಾವು ಬೇಕಾದಷ್ಟು ತಪ್ಪುಗಳನ್ನು ಮಾಡ್ತೀವಿ, ನಮ್ಮನ್ನು ಬೇಕಿದ್ರೆ ನೀವು ತಿದ್ದಿ ಎಂದು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ನಮ್ಮದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಸಿಎಂ ಸಿದ್ದರಾಮಯ್ಯ
ಡಿಕೆಶಿವಕುಮಾರ್ ಸಂಘಟನೆಯಲ್ಲಿ ನನಗಿಂತಲೂ ಮುಂದಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರೆಸ್ ಕ್ಲಬ್ ವಾರ್ಷಿಕ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ಬಾರಿಯೂ ಕೂಡ ಬಂದಿದ್ದೇನೆ. ನಾಳೆ ಹೊಸ ವರ್ಷ ಪ್ರಾರಂಭವಾಗ್ತಿದೆ. ಇದು ಈ ವರ್ಷದ ಕೊನೆ ದಿನ ನಾಳೆ 2024 ಪ್ರಾರಂಭವಾಗುತ್ತದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2023ರ ಸಾಲಿನ ವ್ಯಕ್ತಿಯನ್ನ ಆಯ್ಕೆ ಮಾಡಿದ್ದೀರಾ. ಹಾಗೆ ಮೂರು ಜನರಿಗೆ ವಿಶೇಷ ಪ್ರಶಸ್ತಿಗಳನ್ನ ನೀಡಿದ್ದೀರಾ. ಶಿವರಾಜ್ ಪಾಟೀಲ್ ಪ್ರಶಸ್ತಿ ಪ್ರಧಾನ ಮಾಡಿದರು. ಅವರ ಭಾಷಣದಲ್ಲಿ ಹೇಳಿದ್ರು ಪ್ರಶಸ್ತಿ ಪ್ರಧಾನ ಮಾಡೋ ಗೌರವ ಸಿಕ್ಕಿದೆ. ಅದು ನನಗೆ ಸಿಕ್ಕ ದೊಡ್ಡ ಗೌರವ ಅಂದ್ರು ಅವರಿಗೆ ಧನ್ಯವಾದಗಳು. ವರ್ಷದ ವ್ಯಕ್ತಿಯಾಗಿ ಡಿಕೆ.ಶಿವಕುಮಾರ್ ಅವರನ್ನ ಆಯ್ಕೆ ಮಾಡಿದ್ದೀರಾ. ಅವರು ಕ್ರಿಯಾ ಶೀಲ ವ್ಯಕ್ತಿ, ಸಂಘಟನೆಯಲ್ಲಿ ಚತುರತೆ ಇರುವ ವ್ಯಕ್ತಿ. ಆದರೆ, ಅವರಿಗಿಂತ ಮುಂಚಿನಿಂದಲೂ ನಾನು ರಾಜಕೀಯದಲ್ಲಿ ಇದ್ರುನೂ, ಅವರು ನನಗಿಂತ ಸಂಘಟನೆಯಲ್ಲಿ ಮುಂದಿದ್ದಾರೆ ಎಂದರು.