ವರ್ಚುವಲ್‌ ಸಮಾರಂಭದಲ್ಲೇ ಕೇಂದ್ರ ಸಚಿವಗೆ ಇನ್ನಷ್ಟು ಕೊರೋನಾ ಲಸಿಕೆಗೆ ಡಿಸಿಎಂ ಮನವಿ

* ರಾಜ್ಯಕ್ಕೆ ಇನ್ನಷ್ಟು ಲಸಿಕೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಡಿಸಿಎಂ ಮನವಿ 
* ಕೆಜಿಎಫ್‌ನ 120 ವರ್ಷ ಹಳೆಯ ಆಸ್ಪತ್ರೆಯ ಜೀರ್ಣೋದ್ಧಾರ & ಲೋಕಾರ್ಪಣೆ 
* ಕೇಂದ್ರ ಸಚಿವರಿಮದ ಸಕರಾತ್ಮಕ ಸ್ಪಂದನೆ
 

DCM Ashwath Narayan requests to pralhad joshi For Corona vaccine rbj

ಬೆಂಗಳೂರು/ಕೆಜಿಎಫ್, (ಮೇ.19): ಕೇಂದ್ರ ಸರಕಾರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಕೊಡಿಸಬೇಕು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ,ಸಿ.ಎನ್.‌ಅಶ್ವತ್ಥನಾರಾಯಣ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಲ್ಲಿ ಮನವಿ ಮಾಡಿದರು. 

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ಪರಿಶ್ರಮದಿಂದ ಕೆಜಿಎಫ್‌ನಲ್ಲಿ ಜೀರ್ಣೋದ್ಧಾರ ಮಾಡಲಾದ ಬಿಜಿಎಂಎಲ್‌ ಆಸ್ಪತ್ರೆಯ ವರ್ಚುಯಲ್‌ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿಸಿಎಂ, ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಲಸಿಕೆ ಕೊರತೆ ವಿಷಯವನ್ನು ತಿಳಿಸಿದರು. 

1,250 ಕೋಟಿ ರೂ ಪ್ಯಾಕೇಜ್ ಪರಿಹಾರ, ಎಬಿಡಿ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ; ಮೇ.19ರ ಟಾಪ್ 10 ಸುದ್ದಿ!

ಒಂದೆಡೆ ಕೋವಿಡ್‌ ಸೋಂಕಿತರನ್ನು ಪತ್ತೆ ಮಾಡುತ್ತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ವ್ಯಾಕ್ಸಿನೇಷನ್‌ ಕೂಡ ಸಾಗುತ್ತಿದೆ. ಎರಡನೇ ಅಲೆ ತೀವ್ರವಾಗಿರುವ ಈ ಸಂದರ್ಭದಲ್ಲಿ ಲಸಿಕೆ ಬಹಳ ಅಗತ್ಯವಾಗಿದೆ. ಲಸಿಕೆಯು ಜನರನ್ನು ಉಳಿಸಲಿದೆ ಮಾತ್ರವಲ್ಲದೆ, ಅವರ ಮನೋಸ್ಥೈರ್ಯವನ್ನೂ ಹೆಚ್ಚಿಸುತ್ತಿದೆ ಎಂದರು. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಕೂಡಲೇ ಈ ಬಗ್ಗೆ ಸಂಬಂಧಟ್ಟ ಸಚಿವರು, ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು. 

ಹೊಸದಾಗಿ 30,000 ಆಕ್ಸಿಜನ್‌ ಬೆಡ್‌ 
ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸದಾಗಿ 30,000 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಿದೆ. ಈಗ ರಾಜ್ಯಾದ್ಯಂತ ಒಟ್ಟು 60,000 ಆಕ್ಸಿಜನ್‌ ಬೆಡ್‌ಗಳಿವೆ. ಗ್ರಾಮೀಣ ಮಟ್ಟದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿ ತಾಲೂಕು & ಜಿಲ್ಲಾಸ್ಪತ್ರೆಗಳಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಅತ್ಯುತ್ತಮಪಡಿಸಲು ಸರಕಾರ ನಿರ್ಧರಿಸಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. 

ಹಳ್ಳಿ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಿಸುವುದು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡುವುದನ್ನು ಮಾಡಲಾಗುತ್ತಿದೆ. ಇಡೀ ದೇಶದಲ್ಲೇ ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವಂತೆ ಮಾಡುವ ಪ್ರಯತ್ನ ನಡೆದಿದೆ ಎಂದರು ಅವರು. 

ಕೋಲಾರ ರೆಡ್‌ ಝೊನ್‌ನಲ್ಲಿದೆ
ಕೋವಿಡ್‌ ವಿಷಯದಲ್ಲಿ ಕೋಲಾರ ಜಿಲ್ಲೆಯು ಈಗ ರೆಡ್‌ ಝೋನ್‌ನಲ್ಲಿದೆ. ಸೋಂಕು ತಡೆಗೆ ಇನ್ನೂ ಹೆಚ್ಚಿನ ಕ್ರಮ ವಹಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಿದೆ. ಸ್ಥಳೀಯ ಮಟ್ಟದಲ್ಲೇ ಟಾಸ್ಕ್‌ಪೋರ್ಸ್‌ಗಳನ್ನು ರಚನೆ ಮಾಡಿ ಮನೆಮನೆಗೂ ಹೋಗಿ ಸೋಂಕಿತರನ್ನು ಪತ್ತೆ ಮಾಡಬೇಕು. ಟೆಲಿ ಟ್ರಾಯಾಜಿಂಗ್‌ & ಭೌತಿಕ ಟ್ರಾಯಾಂಜಿಂಗ್‌ ಹೆಚ್ಚಿಸಬೇಕು. ಮನೆ ಮನೆಯನ್ನೂ ಸಮೀಕ್ಷೆ ಮಾಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು. 

ಸೋಂಕಿತರ ಸಂಪರ್ಕಿತರನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಪತ್ತೆ ಹಚ್ಚಲಾಗುತ್ತಿದೆ.  ಆದರೆ, ಕೋವಿಡ್‌ ಪರೀಕ್ಷೆ ರಿಸಲ್ಟ್‌ ಕೊಡಲು ಎರಡು ದಿನಕ್ಕೂ ಹೆಚ್ಚಿನ ಸಮಯ ಆಗುತ್ತಿದೆ. 24 ಗಂಟೆಯೊಳಗೆ ಅಥವಾ ಅದಕ್ಕೂ ಮುನ್ನವೇ ರಿಸಲ್ಡ್‌ ಕೊಡುವ ವ್ಯವಸ್ಥೆ ಮಾಡಿ. ಇನ್ನು, ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ಯಾರನ್ನೂ ಹೋಮ್‌ ಐಸೋಲೇಶನ್‌ ಮಾಡಬೇಡಿ. ಎಲ್ಲರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ಗೆ ಶಿಫ್ಟ್‌ ಮಾಡಿ ಚಿಕಿತ್ಸೆ ಕೊಡಿ ಎಂದು ಡೀಸಿಗೆ ಡಿಸಿಎಂ ಹೇಳಿದರು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜತೆಗೆ, ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಕೋಲಾರದ ಲೋಕಸಭೆ ಸದಸ್ಯ ಎಸ್.‌ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.‌ಸೆಲ್ವಮಣಿ ಮುಂತಾದವರು ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios