ರಾಜ್ಯದಲ್ಲಿ ಜಪಾನ್‌ ದೇಶದ ಬಂಡವಾಳ ಹೂಡಿಕೆಯೂ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ  ಜಪಾನ್‌ ಕಾನ್ಸುಲೇಟ್‌ ಜನರಲ್‌ ಅಕಿಕೋ ಸುಗಿಟಾ ಅವರೊಂದಿಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತುಕತೆ

ಬೆಂಗಳೂರು (ಜು.22): ರಾಜ್ಯದಲ್ಲಿ ಜಪಾನ್‌ ದೇಶದ ಬಂಡವಾಳ ಹೂಡಿಕೆಯೂ ಸೇರಿ ವಿವಿಧ ವಿಷಯಗಳ ಬಗ್ಗೆ ಬೆಂಗಳೂರಿನ ಜಪಾನ್‌ ಕಾನ್ಸುಲೇಟ್‌ ಜನರಲ್‌ ಅಕಿಕೋ ಸುಗಿಟಾ ಅವರೊಂದಿಗೆ ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಂದು ಮಾತುಕತೆ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೀಘ್ರದಲ್ಲೇ ಬೆಂಗಳೂರು ಟೆಕ್‌ ಸಮಿಟ್‌ ಕೂಡ ನಡೆಯುತ್ತಿದ್ದು, ಜಪಾನ್‌ ಆವಿಷ್ಕಾರ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಟೆಕ್‌ ಸಮಿಟ್‌ನಲ್ಲಿ ಆ ದೇಶದ ಪಾಲುದಾರಿಕೆ ಬಗ್ಗೆಯೂ ಡಿಸಿಎಂ ಅವರು ಚರ್ಚೆ ನಡೆಸಿದರು.

ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ : ಡಿಸಿಎಂ

ಕೋವಿಡ್‌ಗೂ ಮುನ್ನ, ನಂತರವೂ ಕರ್ನಾಟಕ ಮತ್ತು ಜಪಾನ್‌ ನಡುವೆ ಕೈಗಾರಿಕೆ-ವಾಣಿಜ್ಯ ಸಂಬಂಧಗಳು ಬಲವಾಗಿದೆ. ರಾಜ್ಯದಲ್ಲಿ ಟೊಯೋಟಾ, ಹೋಂಡಾ, ಫಿಜಿತ್ಸೂ, ಕೊಮತ್ಸೂ, ಹಿತಾಚಿ ಸೇರಿದಂತೆ 529 ಜಪಾನೀ ಕಂಪನಿಗಳು ನೆಲೆಯೂರಿವೆ ಎಂದು ಡಿಸಿಎಂ ಅವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಹೂಡಿಕೆಯನ್ನು ಜಪಾನ್‌ನಿಂದ ರಾಜ್ಯವೂ ನಿರೀಕ್ಷೆ ಮಾಡುತ್ತಿದೆ. ಈ ಬಗ್ಗೆಯೂ ಜಪಾನ್‌ ಕಾನ್ಸುಲೇಟ್‌ ಜನರಲ್‌ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಅವರು ತಿಳಿಸಿದರು.