ದಾವಣಗೆರೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸ್ಟ್ರಾಂಗ್ ರೂಮ್ ಕೀ ಗೊಂದಲದಿಂದಾಗಿ ಚಿಲಕ ಮುರಿಯುವಂತಾಯಿತು. ದಾವಣಗೆರೆ ದಕ್ಷಿಣ ಕ್ಷೇತ್ರದ ಮೊದಲ ಸುತ್ತಿನ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸಿದ್ದಾರೆ.

ದಾವಣಗೆರೆ (ಮೇ.4): ದಾವಣಗೆರೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದ್ದು, ಒಟ್ಟು 217 ಅಂಚೆ ಮತಗಳು ಹಾಗೂ 10 ಸೇವಾ ಮತಗಳು ಸೇರಿದಂತೆ ಒಟ್ಟು 227 ಮತಗಳ ಎಣಿಕೆ ಕಾರ್ಯ ಮೊದಲು ಕೈಗೆತ್ತಿಕೊಳ್ಳಲಾಗಿದೆ.

ಸ್ಟ್ರಾಂಗ್ ರೂಮ್ ಕೀ ಗೊಂದಲ; ಚಿಲಕ ಮುರಿದ ಸಿಬ್ಬಂದಿ!

ಮತ ಎಣಿಕೆ ಆರಂಭಕ್ಕೂ ಮುನ್ನ ಸ್ಟ್ರಾಂಗ್ ರೂಮ್ ಕೀ ವಿಚಾರದಲ್ಲಿ ಭಾರಿ ಗೊಂದಲ ನಿರ್ಮಾಣವಾಗಿತ್ತು. ಪ್ರತಿಯೊಂದು ಸ್ಟ್ರಾಂಗ್ ರೂಮ್‌ಗೆ ಎರಡೆರಡು ಅತ್ಯಾಧುನಿಕ ಡಬಲ್ ಲಾಕರ್ ಬೀಗಗಳನ್ನು ಹಾಕಲಾಗಿತ್ತು. ಆದರೆ ಚುನಾವಣಾಧಿಕಾರಿ ಬಳಿಯಿದ್ದ ಕೀಗಳಿಂದ ಬೀಗ ಓಪನ್ ಆಗದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ನಾಲ್ಕು ಸ್ಟ್ರಾಂಗ್ ರೂಮ್‌ಗಳ ಚಿಲಕ ಮುರಿದು ಅಧಿಕಾರಿಗಳು ಒಳಪ್ರವೇಶಿಸಿದರು.

ಶೃಂಗೇರಿ ಮರುಎಣಿಕೆ ಎಫೆಕ್ಟ್ ಎಚ್ಚರಿಕೆಯ ಹೆಜ್ಜೆ

2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಉಂಟಾಗಿದ್ದ ಗೊಂದಲವನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಅಧಿಕಾರಿಗಳು ಅತೀವ ಎಚ್ಚರಿಕೆ ವಹಿಸಿದ್ದಾರೆ. ತಿರಸ್ಕೃತ ಮತಗಳನ್ನು ಅತ್ಯಂತ ಸೂಕ್ಷ್ಮವಾಗಿ ಬೇರ್ಪಡಿಸಿ, ಅಂಚೆ ಮತಗಳ ಪರಿಶೀಲನೆ ನಡೆಸಲಾಗುತ್ತಿದೆ.

ದಾವಣಗೆರೆ ದಕ್ಷಿಣ: 14 ಟೇಬಲ್‌ಗಳಲ್ಲಿ ಇವಿಎಂ ಎಣಿಕೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಇವಿಎಂ ಮತಗಳ ಎಣಿಕೆ ಕೂಡ ಚಾಲನೆ ಪಡೆದಿದ್ದು, ಒಟ್ಟು 14 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಪ್ರತಿ ಟೇಬಲ್‌ನಲ್ಲೂ ಏಜೆಂಟ್‌ಗಳ ಸಮ್ಮುಖದಲ್ಲಿ ಬಿಗಿ ಭದ್ರತೆಯೊಂದಿಗೆ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ.

ಮೊದಲೆರಡು ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಸುತ್ತಿನ ಮತ‌ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ 730 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆ

ದಾವಣಗೆರೆ ದಕ್ಷಿಣ: ಮೊದಲ ಸುತ್ತಿನ ಅಧಿಕೃತ ಅಂಕಿ-ಅಂಶ

ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ:

ಬಿಜೆಪಿ: 3711

ಕಾಂಗ್ರೆಸ್: 3134

ಎಸ್ ಡಿಪಿಐ: 638

ಒಟ್ಟಿನಲ್ಲಿ ಸದ್ಯ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಮೊದಲ ಸುತ್ತಿನ ಅಂತ್ಯಕ್ಕೆ ತಮ್ಮ ಪ್ರತಿಸ್ಪರ್ಧಿಗಿಂತ ಮುನ್ನಡೆ ಸಾಧಿಸಿ ಕೇಸರಿ ಪಾಳಯದಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ. ಮುಂದಿನ ಸುತ್ತಿನ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದೆ.

ಎರಡನೇ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ:

2ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ 2777

  • ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ 9137 ಮತಗಳು
  • ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು 6360 ಮತಗಳು
  • ಎಸ್ ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 1187 ಮತಗಳು