ಇಲ್ಲೊಂದು ಅಪರೂಪದ ಪ್ರೀತಿಯು ಒಂದಾಗುತ್ತಿದೆ. ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಇಲ್ಲಿನ ಸಿಇಒ ಇದೇ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ದಾವಣಗೆರೆ: ಇದು ಬಹು ಅಪರೂಪದ ಪ್ರಸಂಗ. ಕಳೆದ ನಾಲ್ಕು ವರ್ಷಗಳಿಂದ ಪ್ರೇಮಿಗಳಾಗಿದ್ದ ಐಎಎಸ್ ಅಧಿಕಾರಿಗಳಿಬ್ಬರು ಇದೀಗ ಸಪ್ತಪದಿ ತುಳಿಯಲು ಅಣಿಯಾಗಿದ್ದಾರೆ. 

"

ರಾಜ್ಯದಲ್ಲಿ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಮಾಡಿದ್ದ ಜಿಪಂ ಸಿಇಒ ಎಸ್.ಅಶ್ವತಿ ಹಾಗೂ ದಾವಣ ಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಫೆ. 14ರ ಪ್ರೇಮಿಗಳ ದಿನಾಚರಣೆಯಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ.

<br/>ಜನ ಸ್ನೇಹಿ ಅಧಿಕಾರಿಯೆಂದೇ ಗುರುತಿಸಲ್ಪಡುವ ಸಿಇಒ ಅಶ್ವತಿ ಐಎಎಸ್ ಅಧಿಕಾರಿಯೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ವಿಚಾರ ಕಳೆದ 2 - 3 ತಿಂಗಳಿನಿಂದಲೂ ಹರಿದಾಡುತ್ತಿತ್ತು. ಆದರೆ ವರ ಯಾರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಎಸ್. ಅಶ್ವತಿ ಕಲ್ಲಿಕೋಟೆಯವರಾದರೆ, ಬಗಾದಿ ಗೌತಮ್ ವಿಶಾಖಪಟ್ಟಣ ಮೂಲದವರು.